ದರ್ಶನ್‌ಗೆ ದುಬಾರಿ ವಾಚ್‌ ಗಿಫ್ಟ್‌ ನೀಡಿದ ಅನೂಪ್‌ ಸಿಂಗ್‌ ಠಾಕೂರ್‌

Published : Mar 07, 2019, 08:56 AM IST
ದರ್ಶನ್‌ಗೆ ದುಬಾರಿ ವಾಚ್‌ ಗಿಫ್ಟ್‌ ನೀಡಿದ ಅನೂಪ್‌ ಸಿಂಗ್‌ ಠಾಕೂರ್‌

ಸಾರಾಂಶ

‘ಉದ್ಘರ್ಷ’ ಹೀರೋ ಅನೂಪ್‌ ಠಾಕೂರ್‌ ಸಿಂಗ್‌ ಉದ್ಘರ್ಷ ಚಿತ್ರದ ಟ್ರೈಲರ್‌ ಲಾಂಚ್‌ ಸಂದರ್ಭದಲ್ಲಿ ದರ್ಶನ್‌ ಅವರಿಗೆ ಪ್ರೀತಿಯಿಂದ ದುಬಾರಿ ಬಾಳುವ ಗೋಲ್ಡ್‌ ಕಲರ್‌ ವಾಚ್‌ ಗಿಫ್ಟ್‌ ನೀಡಿದರು. ಅಮೆರಿಕಾ ಮೂಲದ ಸ್ವೋಲ್‌ ಬ್ರಾಂಡ್‌ನ ವಾಚ್‌ ಅದು. ಆ ವಾಚ್‌ ಕಂಪನಿಗೆ ಅನೂಪ್‌ ಅವರೇ ಬ್ರಾಂಡ್‌ ಅಂಬಾಸಿಡರ್‌. ದರ್ಶನ್‌ ತಮಗೆ ತೋರಿಸಿದ ಪ್ರೀತಿಗೆ ಆಭಾರಿ ಎಂದರು ಅನೂಪ್‌.

ಸುನೀಲ್‌ ಕುಮಾರ್‌ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡಿದ್ದು ದರ್ಶನ್‌. ಟ್ರೈಲಗೆ ಧ್ವನಿ ನೀಡಿದ್ದು ಕಿಚ್ಚ ಸುದೀಪ್‌. ಹೀಗಾಗಿ ಸೋಷಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ ಟ್ರೈಲರ್‌. ‘ಉದ್ಘರ್ಷ’ ಚಿತ್ರ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ತೆರೆ ಕಾಣುತ್ತಿದೆ.

ಸದ್ಯಕ್ಕೀಗ ಹಿಂದಿ ಹೊರತು ಪಡಿಸಿ ನಾಲ್ಕು ಭಾಷೆಗಳಲ್ಲಿ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆದಿದೆ. ಮಾ. 22ಕ್ಕೆ ಚಿತ್ರದ ರಿಲೀಸ್‌ ದಿನಾಂಕ ಫಿಕ್ಸ್‌ ಆಗಿದೆ. ಅದರ ಪ್ರಮೋಷನ್‌ಗೆ ಕಾಲಿಟ್ಟಿರುವ ಚಿತ್ರತಂಡ, ಬುಧವಾರ ಅಷ್ಟೂಭಾಷೆಯಲ್ಲಿ ಟ್ರೈಲರ್‌ ಲಾಂಚ್‌ ಮಾಡಿದೆ. ನಾಲ್ಕೂ ಭಾಷೆಯ ಟ್ರೇಲರ್‌ಗೆ ನಟ ಕಿಚ್ಚ ಸುದೀಪ್‌ ಧ್ವನಿ ನೀಡಿದ್ದಾರೆ. ಎರಡು ನಿಮಿಷ ಎರಡು ಸೆಕೆಂಡ್‌ಗಳ ಅವಧಿಯ ಟ್ರೇಲರ್‌ನಲ್ಲಿ ಒಂದೇ ಒಂದು ಡೈಲಾಗ್‌ ಬಿಟ್ಟರೆ, ಉದ್ದಕ್ಕೂ ಸುದೀಪ್‌ ಅವರದ್ದೇ ವಾಯ್‌್ಸ. ಅಲ್ಲಿ ಬರುವ ಸನ್ನಿವೇಶಗಳಿಗೆ ತಕ್ಕಂತೆ ಕೇಳುವ ನಿರೂಪಣೆ ಕಂಪ್ಲೀಟ್‌ ಇಂಗ್ಲೀಷ್‌ ಭಾಷೆಯಲ್ಲಿದೆ.

ಯಜಮಾನ ಚಿತ್ರದ ವಿಲನ್ ಈಗ ಹಿರೋ?

ಕೆಜಿಎಫ್‌ ಮಾದರಿಯಲ್ಲೇ ಚಿತ್ರತಂಡ ಟ್ರೇಲರ್‌ ಲಾಂಚ್‌ಗೆ ತೆಲುಗು, ತಮಿಳು ಹಾಗೂ ಮಲಯಾಳಂ ಪತ್ರಕರ್ತರನ್ನು ಬೆಂಗಳೂರಿಗೆ ಆಹ್ವಾನಿಸಿತ್ತು. ಕನ್ನಡ ಮತ್ತು ತೆಲುಗು ಭಾಷೆಯ ಟ್ರೇಲರ್‌ ಅನ್ನು ದರ್ಶನ್‌ ಲಾಂಚ್‌ ಮಾಡಿದರು. ತಮಿಳು ಮತ್ತು ಮಲಯಾಳಂ ಟ್ರೇಲರ್‌ ಅನ್ನು ನಟಿಯರಾದ ಪ್ರೇಮಾ ಹಾಗೂ ಸುಮನ್‌ ನಗರ್‌ಕರ್‌ ಲಾಂಚ್‌ ಮಾಡಿದರು. ಲಹರಿ ಯುಟ್ಯೂಬ್‌ ಚಾನೆಲ್‌ ಮೂಲಕ ಅಷ್ಟುಭಾಷೆಯ ಟ್ರೇಲರ್‌ಗಳು ಲಾಂಚ್‌ ಆದ ಕ್ಷಣಗಳಿಂದಲೇ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.

ಸೋಷಲ್‌ ಮೀಡಿಯಾದಲ್ಲಿ ಲಾಂಚ್‌ ಆದ ಕೆಲವೇ ಗಂಟೆಗಳಲ್ಲಿ ಕನ್ನಡ ವರ್ಷನ್‌ ಟ್ರೇಲರ್‌ಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಹಿಟ್ಸ್‌ ಸಿಕ್ಕಿದೆ. ಅಂಥದ್ದೇ ರೆಸ್ಪಾನ್ಸ್‌ ತಮಿಳು ವರ್ಷನ್‌ ಟ್ರೇಲರ್‌ಗೂ ಸಿಗುತ್ತಿದೆ. ಈ ತನಕ 2.30 ಲಕ್ಷ ಜನ ಟ್ರೇಲರ್‌ ವೀಕ್ಷಿಸಿದ್ದಾರೆ. ತೆಲುಗು ಮತ್ತು ಮಲಯಾಳಂನಲ್ಲೂ ಅಷ್ಟೇ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

ಅನೂಪ್‌ ಸಿಂಗ್‌ ಠಾಕೂರ್‌, ಕಬೀರ್‌ ದುಹಾನ್‌ ಸಿಂಗ್‌, ಕಿಶೋರ್‌, ಸಾಯಿ ಧನ್ಸಿಕಾ, ತಾನ್ಯಾ ಹೋಪ್‌, ಪ್ರಭಾಕರ್‌ ಪಾತ್ರಗಳನ್ನು ಟ್ರೇಲರ್‌ನಲ್ಲಿ ಪರಿಚಯಿಸಿರುವ ದೇಸಾಯಿ, ಡೈನಾಮಿಕ್‌ ಸ್ಟಾರ್‌ ದೇವರಾಜ್‌ ಹಾಗೂ ನಟಿ ಹರ್ಷಿಕಾ ಪೂಣಚ್ಚ ಅವರ ಪಾತ್ರಗಳ ಲುಕ್‌ ಅನ್ನು ರಹಸ್ಯವಾಗಿ ಉಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ