ಮತ್ತೆ ಬರಲಿದೆ 'ನಾ ನಿನ್ನ ಬಿಡಲಾರೆ'; ನೆನಪಾಯ್ತಾ ಕತ್ತಲಲ್ಲಿ ಬಿಳಿ ಸೀರೆ ದೆವ್ವ?

By Shriram BhatFirst Published Oct 28, 2024, 6:43 PM IST
Highlights

ಟೈಟಲ್ಲು ಪೋಸ್ಟರ್ ಟೀಸರ್ ನಿಂದ್ಲೇ ಕನ್ನಡ‌ ಸಿನಿಪ್ರಿಯರಲ್ಲಿ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರೋ ನಾನಿನ್ನ ಬಿಡಲಾರೆ ಚಿತ್ರತಂಡ ಇಲ್ಲಿಂದ ಪ್ರಚಾರ ಕಾರ್ಯ ಶುರು ಮಾಡಿದ್ದು, ಸದ್ಯದಲ್ಲೇ ಎರಡು ಹಾಡು ಹಾಗೂ ಚಿತ್ರ ಥಿಯೇಟರಿಕಲ್..

ನವೆಂಬರ್‌ನಲ್ಲಿ ಪ್ರೇಕ್ಷಕರೆದುರು ಬರ್ತಿದೆ 'ನಾನಿನ್ನ ಬಿಡಲಾರೆ' ಸಿನಿಮಾ! ಅಂದು ನಟ ಅನಂತ್ ನಾಗ್ ಹಾಗೂ ನಟಿ ಲಕ್ಷ್ಮೀ ಕಾಂಬಿನೇಷನ್‌ನಲ್ಲಿ ಬಂದ ಎವರ್ ಗ್ರೀನ್ ಚಿತ್ರ ನಾನಿನ್ನ ಬಿಡಲಾರೆ. ಇದೀಗ ಅದೇ ಟೈಟಲ್ ಇಟ್ಟೊಂಡು, ಈ ಕಾಲಕ್ಕೆ ತಕ್ಕ, ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್‌ನ  ಹೊಸ ತಂಡ ಹೊಸ ಆಯಾಮದಲ್ಲಿ ಕನ್ನಡ ಪ್ರೇಕ್ಷಕರೆದುರಿಗೆ ಬರ್ತಿದೆ..

ಈಗಾಗ್ಲೇ ಟೀಸರ್‌ನಿಂದ ಕುತೂಹಲ ಮೂಡಿಸಿದ್ದ, ಈ ಚಿತ್ರತಂಡ ಸಿಂಗಲ್ ಟೀಸರ್‌ನಿಂದ್ಲೇ ನಿರೀಕ್ಷೆ ಹುಟ್ಟಿಸಿತ್ತು. ಅದ್ರಂತೆ ಇದೀಗ ಪ್ರೇಕ್ಷಕರೆದುರಿಗೆ ಬರೋದಕ್ಕೆ ದಿನಾಂಕ ನಿಗದಿ ಮಾಡಿದೆ. ಹೌದು ಇದೇ ನವೆಂಬರ್‌ 29 ಕ್ಕೆ ನಾನಿನ್ನ ಬಿಡಲಾರೆ ಚಿತ್ರ ಪ್ರೇಕ್ಷಕರೆದುರಿಗೆ ಬರ್ತಿದೆ. ಲೈಲಾಕ್ ಎಂಟರ್ಟೈನ್ಮೆಂಟ್ ನ ಹೇಮಂತ್ ಈ ಚಿತ್ರವನ್ನ ರಾಜ್ಯದಾದ್ಯಂತ ವಿತರಿಸಿದ್ದಾರೆ..

Latest Videos

ಸೋಲು ನಿಮ್ಮನ್ನು ಕಾಡುತ್ತಿದ್ದರೆ ಒಮ್ಮೆ ಅಮಿತಾಭ್ ಬಚ್ಚನ್ ಹೇಳಿದ್ದು ಕೇಳಿ, ಉದ್ಧಾರ ಆಗ್ತೀರಾ!

ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ, ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿ ನಿರ್ಮಿಸಿರುವ ನಾ ನಿನ್ನ ಬಿಡಲಾರೆ ಚಿತ್ರವನ್ನ ನವೀನ್ ಜಿ.ಎಸ್ ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತವಿರೋ ಈ ಚಿತ್ರಕ್ಕೆ ದೀಪಕ್ ಜಿ.ಎಸ್ ಸಂಕಲನವಿದೆ.

ಅಂಬಾಲಿ ಭಾರತಿಗೆ ಜೊತೆಯಾಗಿ ಪಂಚಿ, ಸೀರುಂಡೆ ರಘು, ಕೆ.ಸ್.ಶ್ರೀಧರ್,ಮಹಂತೇಶ್,ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾರೆಡ್ಡಿ ಮುಖ್ಯ ಭೂಮಿಕೆಯಲ್ಲಿದ್ದಾರೆ..

ಟೈಟಲ್ಲು ಪೋಸ್ಟರ್ ಟೀಸರ್ ನಿಂದ್ಲೇ ಕನ್ನಡ‌ ಸಿನಿಪ್ರಿಯರಲ್ಲಿ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರೋ ನಾನಿನ್ನ ಬಿಡಲಾರೆ ಚಿತ್ರತಂಡ ಇಲ್ಲಿಂದ ಪ್ರಚಾರ ಕಾರ್ಯ ಶುರು ಮಾಡಿದ್ದು, ಸದ್ಯದಲ್ಲೇ ಎರಡು ಹಾಡು ಹಾಗೂ ಚಿತ್ರ ಥಿಯೇಟರಿಕಲ್  ಟ್ರೈಲರ್ ನ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆ. ನವೆಂಬರ್‌ನಲ್ಲಿ ರಾಜ್ಯಾದಂತ ತೆರೆಯಲ್ಲಿ ಅಬ್ಬರಿಸಲಿರುವ ನಾ ನಿನ್ನ ಬಿಡಲಾರೆ ಚಿತ್ರವು ಪ್ರೇಕ್ಷಕರನ್ನು ಸೆಳೆಯಲಿದೆಯಾ? ಕಾಲವೇ ಪ್ರೇಕ್ಷಕರ ಮೂಲಕ ಉತ್ತರ ಕೊಡಬೇಕು!

ಸಾವಿನ ದೃಶ್ಯಕ್ಕೆ ಸಂಬಂಧಿಸಿದ ಅದೊಂದು ಪ್ರಾಕ್ಟೀಸ್ ಕನ್ನಡ ಚಿತ್ರರಂಗದಲ್ಲಿದೆ, ಏನದು?

ಅಂದಹಾಗೆ, 1979ರಲ್ಲಿ ಈ ಮೊದಲು ತೆರೆಗೆ ಬಂದಿದ್ದ 'ನಾ ನಿನ್ನ ಮರೆಯಲಾರೆ' ಚಿತ್ರದಲ್ಲಿ ನಟ ಅನಂತ್‌ ನಾಗ್ ಹಾಗೂ ನಟಿ ಲಕ್ಷ್ಮೀ ನಟಿಸಿದ್ದರು. ಆ ಚಿತ್ರದಲ್ಲಿ 'ತಂಗಾಳಿಯಾಗಿ ನಾನು ತೇಲಿ ಬಂದೆ.. ನಿನ್ನನ್ನು ಪ್ರೀತಿಯಿಂದ ಸೇರಲೆಂದೇ... ಓ ಇನಿಯಾ..' ಎಂಬ ಗೀತೆ ತುಂಬಾ ಪ್ರಸಿದ್ಧಿ ಪಡೆದಿತ್ತು. ಆ ಗೀತೆಯನ್ನು ಟಿವಿಯಲ್ಲಿ ನೋಡಿ ಅದೆಷ್ಟೋ ಮಂದಿ ತಮ್ಮ ನಿದ್ದೆ ಕಳೆದುಕೊಂಡಿದ್ದಾರೆ, ರಾತ್ರಿ ಹಾಸಿಗೆ ಒದ್ದೆ ಮಾಡಿಕೊಂಡಿದ್ದಾರೆ. ಮುಂಬರುವ ಇದೇ ಹೆಸರಿನ ಚಿತ್ರವು ಅದಿನ್ನೇನೇನು ಮಾಡಲಿದೆಯೋ ದೇವರೇ ಬಲ್ಲ..!

 

 

click me!