'ನೀನು ಹುಟ್ಟಿದ್ದು ನನಗಾಗಿಯೇ..' ಮಡದಿಗೆ ಯಶ್ ವಿಶ್

By Web Desk  |  First Published Mar 8, 2019, 5:11 PM IST

ಮಗಳು ಹುಟ್ಟಿದ ಸಂಭ್ರಮದಲ್ಲಿರುವ ರಾಧಿಕಾ ಪಂಡಿತ್ ಮೊದಲು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಗೋವಾದಲ್ಲಿ ವಿಭಿನ್ನವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಪತ್ನಿಗೆ, ಪತಿ ಯಶ್ ನೀಡಿರುವ ಗಿಫ್ಟ್ ಏನು?


ಸ್ಯಾಂಡಲ್‌ವುಡ್ 'ಮೊಗ್ಗಿನ ಮನಸ್ಸು' ರಾಧಿಕಾ ಪಂಡಿತ್‌ ಹುಟ್ಟು ಹಬ್ಬಕ್ಕೆ ರಾಕಿಂಗ್ ಸ್ಟಾರ್ ಯಶ್ ತನ್ನ ಇನ್‌ಸ್ಟಾಗ್ರಾಂನಲ್ಲಿ ವಿಶ್ ಮಾಡಿರುವುದು ಹೇಗೆ?

ಸ್ಯಾಂಡಲ್‌ವುಡ್ ದಿ ಮೋಸ್ಟ್ ಡಿಗ್ನಿಫೈಡ್, ಬ್ರಿಲಿಯಂಟ್ ಹಾಗೂ ಬ್ರೇವ್ ನಟಿ ರಾಧಿಕಾ ಪಂಡಿತ್ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಲು ಸಾಧ್ಯವಾಗುವುದಿಲ್ಲವೆಂದು ದಿನಗಳ ಹಿಂದೆಯೇ ವಿಡಿಯೋವೊಂದರಲ್ಲಿ ಮಾತನಾಡಿದ್ದರು.

Tap to resize

Latest Videos

ಹುಟ್ಟುಹಬ್ಬದ ದಿನ ತಮಗೆ ಬರುವ ಎಲ್ಲ ಮೆಸೇಜ್‌ಗಳಿಗೆ ರಿಪ್ಲೈ ಮಾಡುವುದಾಗಿಯೂ ಭರವಸೆ ನೀಡಿದ್ದರು. ಗೋವಾದಿಂದ ಬಂದನ ನಂತರ ಎಲ್ಲರನ್ನೂ ಭೇಟಿಯಾಗುವುದಾಗಿ ಹೇಳಿದ್ದಾರೆ.

 

ಯಾರು ಏನೇ ವಿಶ್ ಮಾಡಿದರೂ, ಪತಿಯಿಂದ ಬರೋ ವಿಶ್‌ಗೆ ವಿಶೇಷ ಸ್ಥಾನ. ಅಂಥ ಖುಷಿಯನ್ನು ಯಶ್ ‘Life is beautiful.ನನ್ನ ಜೀವನದಲ್ಲಿ ಈಗ ಏನು ಇದೆಯೋ ಅದರಿಂದ ಅಲ್ಲ. ನನ್ನ ಜೀವನದಲ್ಲಿ ಇರುವ ವ್ಯಕ್ತಿಗಳಿಂದ. ಥ್ಯಾಂಕ್ ಯು, ನೀನು ನನಗಾಗೇ ಹುಟ್ಟಿರುವೆ. ಹ್ಯಾಪಿ ಬರ್ತ್ ಡೇ ಮೈ ಲವ್...’ ಎಂದು ಪ್ರೀತಿಯ ಮಡದಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

 

Life is beautiful... not because of what i have in life... but because of who i have in my life... thank you, for it feels like you are born for me... Happy birthday my Love pic.twitter.com/0UzhTxLNvN

— Yash (@TheNameIsYash)

 

click me!