ನಟ ಶಿವರಾಜ್‌ಕುಮಾರ್ ನಾಯಕರಾಗಿರುವ ಘೋಸ್ಟ್ ಸಿನಿಮಾ ಕಲೆಕ್ಷನ್ ಎಷ್ಟು ಎಂಬುದು ಒಂದು ವಾರದ ಬಳಿಕ ಬಹಿರಂಗವಾಗಲಿದೆ. ಈಗಾಗಲೇ ಚಿತ್ರವು ನಾಲ್ಕನೇ ದಿನದ ಪ್ರದರ್ಶನ ಕಾಣುತ್ತಿದ್ದು, ಒಂದು ವಾರದ ಬಳಿಕ ಕಲೆಕ್ಷನ್ ವಿಚಾರವನ್ನು ನಿರ್ಮಾಪಕರು ಹೊರಜಗತ್ತಿಗೆ ಹೇಳಲಿದ್ದಾರೆ.
ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಹಾಗೂ ವಿನೋದ್ ರಾಜ್‌ಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 'ಘೋಸ್ಟ್' ಸಿನಿಮಾ ವೀಕ್ಷಣೆಗೆ ನಟ ವಿನೋದ್ ರಾಜ್ ಅವರು ತಮ್ಮ ತಾಯಿ ಲೀಲಾವತಿ ಅವರೊಡನೆ ಥಿಯೇಟರ್‌ಗೆ ಬಂದಿದ್ದರು. ಈ ವೇಳೆ ವಿನೋದ್ ರಾಜ್ ಹಾಗೂ ಶಿವಣ್ಣ ಮಖಾಮುಖಿ ಆಗಿದ್ದಾರೆ. ತಕ್ಷಣವೇ ಶಿವಣ್ಣ ಹಾಗೂ ವಿನೋದ್ ರಾಜ್ ಆತ್ಮೀಯವಾಗಿ ಮಾತನಾಡಿಕೊಂಡಿದ್ದು, ಇದೀಗ ಈ ಸುದ್ದಿ ಕರುನಾಡಿನ ತುಂಬ ವ್ಯಾಪಿಸಿ ಹಲವರು ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ 'ಘೋಸ್ಟ್ ಸಿನಿಮಾ ಕಳೆದ ಶುಕ್ರವಾರ (20 ಅಕ್ಟೋಬರ್ 2023) ಬಿಡುಗಡೆ ಆಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಮುಂಬೈ ಸೇರಿದಂತೆ ಹಲವು ರಾಜ್ಯಗಳ ಪ್ರಮುಖ ಸಿಟಿಗಳಲ್ಲಿ ರಿಲೀಸ್ ಆಗಿದೆ. ಘೋಸ್ಟ್ ಚಿತ್ರವು ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ನಟ ಶಿವಣ್ಣ ಸೇರಿದಂತೆ ಇಡೀ ಘೋಸ್ಟ್ ತಂಡ ಸಂತಸಗೊಂಡಿದೆ. ಚಿತ್ರದ ಪ್ರಮೋಶನ್ ನಡೆಯುತ್ತಿದ್ದು, ಶಿವಣ್ಣ ಹಾಗೂ ತಂಡ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.
ರೆಡ್ ಕಾರ್ಪೆಟ್ ಮೇಲೆ ಬಿದ್ಬಿಟ್ಟೆ, ಕ್ಯಾಮರಾಮ್ಯಾನ್‌ಗಳು ಮಾಡಿದ್ದು ನೋಡಿ ಶಾಕ್ ಆಗ್ಬಿಟ್ಟೆ: ಪ್ರಿಯಾಂಕಾ ಚೋಪ್ರಾ
ನಟರಾದ ಶಿವರಾಜ್‌ಕುಮಾರ್ ಹಾಗೂ ವಿನೋದ್ ರಾಜ್ ಭೇಟಿಯನ್ನು 'ಶುದ್ಧ ಮನಸ್ಸುಗಳ ಭೇಟಿ' ಎಂದು ಹಲವರು ಕರೆದು ಈ ಇಬ್ಬರನ್ನೂ ಬಾಯ್ತುಂಬಾ ಹೊಗಳುತ್ತಿದ್ದಾರೆ. ಥಿಯೇಟರ್‌ನಲ್ಲಿ ಸಿಕ್ಕಾಗ ಇವರಿಬ್ಬರೂ ಆತ್ಮೀಯವಾಗಿ ಮಾತನಾಡಿಕೊಂಡಿದ್ದೂ ಅಲ್ಲದೇ ಜೋರಾಗಿ ನಕ್ಕು, ಅವರಿಬ್ಬರ ಜತೆ ಹಲವರು ಖುಷಿಯಿಂದ ನಗುವಂತೆ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ವಿಟೇಶನ್ ಜತೆಯಲ್ಲೇ ಅನೌನ್ಸ್‌ಮೆಂಟ್ ಕೂಡ ಮಾಡುತ್ತೇವೆ: ದಿವ್ಯಾ ಉರುಡುಗ-ಅರವಿಂದ್ ಕೆಪಿ
ನಟ ಶಿವರಾಜ್‌ಕುಮಾರ್ ನಾಯಕರಾಗಿರುವ ಘೋಸ್ಟ್ ಸಿನಿಮಾ ಕಲೆಕ್ಷನ್ ಎಷ್ಟು ಎಂಬುದು ಒಂದು ವಾರದ ಬಳಿಕ ಬಹಿರಂಗವಾಗಲಿದೆ. ಈಗಾಗಲೇ ಚಿತ್ರವು ನಾಲ್ಕನೇ ದಿನದ ಪ್ರದರ್ಶನ ಕಾಣುತ್ತಿದ್ದು, ಒಂದು ವಾರದ ಬಳಿಕ ಕಲೆಕ್ಷನ್ ವಿಚಾರವನ್ನು ನಿರ್ಮಾಪಕರು ಹೊರಜಗತ್ತಿಗೆ ಹೇಳಲಿದ್ದಾರೆ. ಈಗಾಗಲೇ ಅಷ್ಟು ಇಷ್ಟು ಎಂಬ ಸುದ್ದಿ ಹೊರಬಿದ್ದಿದೆಯಾದರೂ ಅದು ಅಧಿಕೃತ ಎನ್ನಲಾಗದು. ಆದ್ದರಿಂದ ಕಲೆಕ್ಷನ್ ವಿಚಾರದಲ್ಲಿ ಆಫೀಸಿಯಲ್ ಅನೌನ್ಸ್‌ಮೆಂಟ್ ಆಗುವವರೆಗೆ ಕಾಯುವುದೇ ಒಳ್ಳೆಯದು. ಅಂದಹಾಗೆ, ಘೋಸ್ಟ್ ಸಿನಿಮಾದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ.