ಗೋವಾದಲ್ಲಿ ರಕ್ಷಿತ್‌ ಶೆಟ್ಟಿ; ಉಳಿದವರು ಕಂಡಂತೆ ಅಭಿಮಾನಿಗಳೇ ರೆಡಿಯಾಗಿ, ರಿಚ್ಚಿ ಬರ್ತಿದಾನೆ

Kannadaprabha News   | Asianet News
Published : Sep 22, 2020, 09:41 AM IST
ಗೋವಾದಲ್ಲಿ ರಕ್ಷಿತ್‌ ಶೆಟ್ಟಿ; ಉಳಿದವರು ಕಂಡಂತೆ ಅಭಿಮಾನಿಗಳೇ ರೆಡಿಯಾಗಿ, ರಿಚ್ಚಿ ಬರ್ತಿದಾನೆ

ಸಾರಾಂಶ

ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿಮತ್ತವರ ತಂಡ ಆ್ಯಕ್ಟಿವ್‌ ಆಗಿದೆ. ಒಂದು ಕಡೆ ‘777 ಚಾರ್ಲಿ’ ಚಿತ್ರದ ಶೂಟಿಂಗ್‌ ತಯಾರಿ ಮಾಡಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಗೋವಾದಲ್ಲಿ ತಣ್ಣಗೆ ಕೂತು ‘ರಿಚ್ಚಿ’ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆಯುತ್ತಿದ್ದಾರೆ. ಇದರ ನಡುವೆ ವೆಬ್‌ ಸರಣಿ ಮಾಡುವ ಸಿದ್ಧತೆಗಳು ನಡೆಯುತ್ತಿವೆ.

ಸದ್ಯ ರಕ್ಷಿತ್‌ ಶೆಟ್ಟಿಗೋವಾದಲ್ಲಿ ‘ರಿಚ್ಚಿ’ಗೆ ಜೀವ ತುಂಬುತ್ತಿದ್ದಾರೆ. ರಕ್ಷಿತ್‌ ಅವರ ನಿರ್ದೇಶನದಲ್ಲಿ ಬಂದ ‘ಉಳಿದವರು ಕಂಡಂತೆ’ ಚಿತ್ರದಲ್ಲಿನ ರಿಚ್ಚಿ ಪಾತ್ರ ಯಾರಿಗೆ ನೆನಪಿಲ್ಲ ಹೇಳಿ. ಈ ಪಾತ್ರದ ಔಟ್‌ ಲುಕ್‌, ಸ್ಕ್ರೀನ್‌ ಪ್ರಸೆಂಟ್‌ ರಕ್ಷಿತ್‌ ಶೆಟ್ಟಿಅವರು ಸಿಗ್ನೇಚರ್‌ನಂತೆ ಕಂಡಿದ್ದು ಹೌದು. ಈಗ ಆ ಪಾತ್ರವನ್ನೇ ಗಮನದಲ್ಲಿಟ್ಟುಕೊಂಡು ‘ರಿಚ್ಚಿ’ಗೆ ಹೊಸ ರೂಪ ನೀಡುತ್ತಿದ್ದಾರೆ.

- ಅಕ್ಟೋಬರ್‌ ಮೊದಲ ವಾರದಿಂದ ಕಿರಣ್‌ರಾಜ್‌ ನಿರ್ದೇಶನದ ‘777 ಚಾರ್ಲಿ’ ಚಿತ್ರದ ಚಿತ್ರೀಕರಣ ನಡೆಯಲಿದೆ.

- ‘ರಿಚ್ಚಿ’ ಚಿತ್ರವನ್ನು ಪಿ ಕೆ ರಾಹುಲ್‌ ನಿರ್ದೇಶನ ಮಾಡುತ್ತಿದ್ದಾರೆ. ಪಿ ಕೆ ರಾಹುಲ್‌ ಅವರು ‘ಉಳಿದವರು ಕಂಡಂತೆ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರು.

- ರಿಚ್ಚಿ ಸಿನಿಮಾ ಮಂಗಳೂರು, ಉಡುಪಿ, ಗೋವಾ ಹಾಗೂ ಮುಂಬೈ ಪ್ರದೇಶಗಳ ಹಿನ್ನೆಲೆಯಲ್ಲಿ ಸಾಗುತ್ತದೆ.

- ಗೋವಾ ಪ್ರದೇಶವನ್ನು ರಕ್ಷಿತ್‌ ಶೆಟ್ಟಿಹೆಚ್ಚು ನೋಡಿಲ್ಲ. ಹೀಗಾಗಿ ಕತೆಗೆ ಪೂರಕವಾಗುವ ಜಾಗದಲ್ಲಿ ಕೂತು ಚಿತ್ರಕಥೆ ಬರೆಯಲು ಗೋವಾಗೆ ಹೋಗಿದ್ದಾರೆ.

ಎಲ್ಲಿ ಕಳೆದೋಗಿದ್ದಾರೆ ನಟ ರಕ್ಷಿತ್ ಶೆಟ್ಟಿ; ಹುಡುಕಾಟದಲ್ಲಿ ಅಭಿಮಾನಿಗಳು!

- ಚಿತ್ರದ ಕತೆ ಬಯಸುವ ಪ್ರದೇಶದಲ್ಲಿ ಕೂತು ಕತೆ ಬರೆದರೆ ಅದಕ್ಕೊಂದು ತೂಕ ಇರುತ್ತದೆ. ಜತೆಗೆ ತೆರೆ ಮೇಲೆ ಹೊಸದಾಗಿ ಕಾಣಿಸುತ್ತದೆ.

- ಉಳಿದವರು ಕಂಡಂತೆ ಚಿತ್ರದಲ್ಲಿ ಬಂದ ರಿಚ್ಚಿಯೇ ಇಲ್ಲೂ ಇರುತ್ತಾನೆ. ಆ ಪಾತ್ರದ ಮುಂದುವರಿದ ಭಾಗದಂತೆಯೇ ಕಾಣುತ್ತದೆ.

- ಸ್ಕಿ್ರಪ್ಟ್‌ ವಿಶೇಷವಾಗಿರುತ್ತದೆ. ಅಂದರೆ ನಾನ್‌ಲೀನಿಯರ್‌ ನೆರಳಿನಲ್ಲಿ ಸಾಗುವ ಈ ಕತೆಯಲ್ಲಿ ಕ್ರೈಂ ಡ್ರಾಮಾಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.

- ಈ ಚಿತ್ರವನ್ನು ಪುಷ್ಕರ್‌ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್‌ ಶೆಟ್ಟಿಅವರು ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧಂ' ಬೇಕಲೇ ಎಂದಿದ್ದ ದರ್ಶನ್‌ಗೆ ಟಾಂಗ್ ಕೊಟ್ರಾ ಸುದೀಪ್? ಏನಿದು ಮಾರ್ಕ್ ಡೈಲಾಗ್ ಮರ್ಮ?
ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!