ಲಂಕಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 300 ಕ್ಕೂ ಹೆಚ್ಚು ಮಂದಿ ದುರ್ಮರಣವನ್ನಪ್ಪಿದ್ದಾರೆ. ನಟ ಗಣೇಶ್ ಸ್ನೇಹಿತರಾದ ಮರೀಗೌಡ ಹಾಗೂ ಪುಟ್ಟರಾಜು ಮೃತಪಟ್ಟಿದ್ದಾರೆ.
ಶ್ರೀಲಂಕಾದ ಕೊಲಂಬೋದಲ್ಲಿ 300 ಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದಾರೆ.
ಲಂಕಾ ಸ್ಫೋಟದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸ್ನೇಹಿತರು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟಿರುವ ಪುಟ್ಟರಾಜು ಹಾಗೂ ಮರೀಗೌಡ ಗಣೇಶ್ ಆತ್ಮೀಯ ಸ್ನೇಹಿತರು.
Can’t believe u r no more with us,No words to express the sorrow,Puttaraju n Maregowda(Appi) my dear friend vll miss you.
My deepest sympathies who lost their loved ones in this barbaric terror attack I condemn Srilanka attack
RIP pic.twitter.com/Uw8WjbE5EP
‘ ನೀವು ನಮ್ಮನ್ನಗಲಿದ್ದೀರಾ ಎಂದರೆ ನಂಬಲಾಗುತ್ತಿಲ್ಲ. ನನಗಾಗುತ್ತಿರುವ ನೋವನ್ನು, ದುಃಖವನ್ನು ಹೇಳಲು ನನ್ನಲ್ಲಿ ಪದಗಳಿಲ್ಲ. ನನ್ನ ಪ್ರೀತಿಯ ಸ್ನೇಹಿತರಾದ ಪುಟ್ಟರಾಜು, ಮರೀಗೌಡ ನಿಮ್ಮಿಬ್ಬರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ‘ ಎಂದು ಕೊಲಂಬೋ ಉಗ್ರ ದಾಳಿಯಲ್ಲಿ ಮೃತಪಟ್ಟವರಿಗೆಲ್ಲಾ ಸಂತಾಪ ಸೂಚಿಸಿದ್ದಾರೆ.
ಶ್ರೀಲಂಕಾದ ಸಿನ್ನಮೋನ್ ಗ್ರಾಂಡ್ ಹೊಟೇಲ್ ನಲ್ಲಿದ್ದ ನಟಿ ರಾಧಿಕಾ ಶರತ್ ಕುಮಾರ್ ಹಾಗೂ ಕನ್ನಡದ ನಿರ್ಮಾಪಕ ಸಿ ಆರ್ ಮನೋಹರ್ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದೆ.