ಕೊಲೆ ಕೇಸಿನ ಆರೋಪಿಗಳನ್ನ ವಿಚಾರಣೆ ಮಾಡುವಾಗ ದರ್ಶನ್ ಹೆಸರು ಬಂದಿದ್ದಕ್ಕಾಗಿ, ನಟ ದರ್ಶನ್‌ನಲ್ಲಿ ಮೈಸೂರಿನಲ್ಲಿ ಬಂದಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಜೂ.11): ಬೆಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ರಸ್ತೆ ಬದಿ ಬಿದ್ದಿದ್ದ ಮೃತದೇಹದ ಕೊಲೆ ಸಂಬಂಧಿತ ಆರೋಪಿಗಳನ್ನ ವಿಚಾರಣೆ ಮಾಡುವಾಗ ದರ್ಶನ್ ಹೆಸರು ಬಂದಿದೆ ಅಂತ ಮಾಹಿತಿ ಇದೆ. ಅದರ ಮೇಲೆ ತನಿಖೆ ಆಗುವವರೆಗೂ ಕೂಡ ಏನು ಹೇಳೋಕಾಗಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧಿಸಿದ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು, ಕೊಲೆ ಕೇಸ್ ನಲ್ಲಿ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳನ್ನ ವಿಚಾರಣೆ ಮಾಡುವಾಗ ದರ್ಶನ್ ಹೆಸರು ಬಂದಿದೆ ಅಂತ ಮಾಹಿತಿ ಇದೆ. ಅದರ ಮೇಲೆ ತನಿಖೆ ಆಗುವವರೆಗೂ ಕೂಡ ಏನು ಹೇಳೋಕಾಗಲ್ಲ. ಅವರು ನೇರವಾಗಿ ಭಾಗಿಯಾಗಿದ್ದಾರ ಇಲ್ವಾ.? ಯಾವ ಕಾರಣಕ್ಕೂ ಮರ್ಡರ್ ಆಗಿದೆ? ಇವರ ಹೆಸರು ಯಾಕೆ ಬಂದಿದೆ ಅನ್ನೋದು ತನಿಖೆ ನಂತರ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ & ದರ್ಶನ್ ಅರೆಸ್ಟ್ ; ಏನಿದು ಪ್ರಕರಣ? ಪೊಲೀಸ್ ಆಯುಕ್ತರು ಹೇಳಿದ್ದೇನು?
ಈ ಸಂದರ್ಭದಲ್ಲಿ ಬೇರೆ ಏನು ಹೇಳಲು ಸಾಧ್ಯವಿಲ್ಲ. ತನಿಖೆ ಆದಮೇಲೆ ಎಲ್ಲವೂ ಗೊತ್ತಾಗುತ್ತದೆ. ಅದಕ್ಕೂ ಮೊದಲು ಏನು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಯಾವ ರೊತೊಯಾಗಿ ಕಾಮೆಂಟ್ ಮಾಡಲಾಗಿದೆ ಎಂಬುದರ ಬಗ್ಗೆ ಗೊತ್ತಿಲ್ಲ. ದರ್ಶನ್‌ನನ್ನು ಮೈಸೂರಿನಲ್ಲಿ ಅರೆಸ್ಟ್ ಮಾಡಿದ್ದು, ನಂತರ ಮೈಸೂರಿನಿಂದ ಬೆಂಗಳೂರು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಈಗ ನಮ್ಮ ಇಲಾಖೆಯ ಸುಪರ್ದಿಯಲ್ಲಿ ಇಟ್ಕೊಂಡಿದ್ದಾರೆ, ತನಿಖೆ ಮಾಡುತ್ತಿದ್ದಾರೆ. ಮೊದಲು ಅರೆಸ್ಟ್ ಮಾಡಿದ ವ್ಯಕ್ತಿಗಳು ದರ್ಶನ್ ಅವರ ಹೆಸರು ಹೇಳಿದ್ದಾರೆ. ಇದು ಮರ್ಡರ್ ಕೇಸ್ ಆಗಿರೋದ್ರಿಂದ ಸೀರಿಯಸ್ ಆಗಿ ಮಾಡಬೇಕಾಗತ್ತದೆ. ಹಾಗಾಗಿ ಅರೆಸ್ಟ್ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಶಾಕಿಂಗ್ ರಿಯಾಕ್ಷನ್ ಕೊಟ್ಟ ಸಿಎಂ ಸಿದ್ದರಾಮಯ್ಯ: ಪ್ರತಿದಿನದಂತೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆಯ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರಿಂದ ಮಾಹಿತಿ ಪಡೆಯುತ್ತಿದ್ದ ಮಾದರಿಯಲ್ಲಿಯೇ ಸಿಎಂ ಸಿದ್ದರಾಮಯ್ಯ ಮಂಗಳವಾರ ಕೂಡ ಮಾಹಿತಿ ಕೇಳಿದ್ದಾರೆ. ಆಗ, ಅಲೋಕ್ ಮೋಹನ್ ಅವರು ನಟ ದರ್ಶನ್ ಬಂಧನದ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಶಾಕಿಂಗ್ ಆಗಿದ್ದಾರೆ. ಇನ್ನು ಮುಂದಿನ ಕ್ರಮಗಳನ್ನು ಕಾನೂನಾತ್ಮಕವಾಗಿ ಕೈಗೊಳ್ಳುವಂತೆ ಹಾಗೂ ಗೃಹ ಸಚಿವರಿಗೆ ಅಪ್ಡೇಟ್ ಮಾಹಿತಿ ನೀಡುವಂತೆಯೂ ಸೂಚನೆ ನೀಡಿದ್ದಾರೆ.