ಮಸ್ಕಿ: ಹಣ ಬಾರದೆ ಅರ್ಧಕ್ಕೆ ನಿಂತ ಮನೆಗಳು, ಪಲಾನುಭವಿಗಳ ಗೋಳು ಕೇಳೋರ‍್ಯಾರು?

By Web Desk  |  First Published Oct 25, 2019, 2:11 PM IST

ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ 183 ಮನೆಗಳ ಹಣ ಬಾಕಿ| ಅನುದಾನದ ಕೊರತೆ ನೆಪ| ಖಾತೆಗೆ ಹಣ ಜಮಾ ಮಾಡಲು ಪಲಾನುಭವಿಗಳು ಒತ್ತಾಯ| ವಸತಿ ಯೋಜನೆಯ ಪಲಾನುಭವಿಗಳ ಗೋಳು ಕೇಳೋರಾರ‍ಯರು?|


ಇಂದರಪಾಷ ಚಿಂಚರಕಿ

ಮಸ್ಕಿ[ಅ. 25]: ಕರ್ನಾಟಕ ರಾಜ್ಯವನ್ನು ಗುಡಿಸಲು ಮುಕ್ತವನ್ನಾಗಿ ಮಾಡಲು ಪಣ ತೊಟ್ಟಿರುವ ರಾಜ್ಯ ಸರ್ಕಾರ ವಿವಿಧ ವಸತಿ ಯೋಜನೆಗಳಲ್ಲಿ ಆಯ್ಕೆ ಮಾಡಿ ಮನೆಗಳನ್ನು ನಿರ್ಮಿಸಿಕೊಳ್ಳಲು ಅರ್ಹ ಪಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲು ಸೂಚಿಸಿದೆ. ಮನೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಪಲಾನುಭವಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದೆ ಕಾಲಹರಣ ಮಾಡುತ್ತಿದೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಸ್ಕಿ ಪುರಸಭೆ ವ್ಯಾಪ್ತಿಯಲ್ಲಿ ವಸತಿ ರಹಿತರಿಗಾಗಿ ಕಳೆದ 2017-18ನೇ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ಪಟ್ಟಣ ವ್ಯಾಪ್ತಿಯಲ್ಲಿ ಮನೆ ಇಲ್ಲದಿರುವವರನ್ನು ಗುರಿತಿಸಿ ಅರ್ಹ ಪಲಾನುಭವಿಗಳನ್ನು ಆಯ್ಕೆ ಮಾಡಿ ಸರ್ಕಾರದ ಸಹಾಯ ಧನದಿಂದ ಮನೆಗಳನ್ನು ನಿರ್ಮಿಸಿಕೊಳ್ಳುವಂತೆ ಅಧಿಕಾರಿಗಳು ಹೇಳಿದ್ದರು. ಅದರಂತೆ ಬಡವರು ಸಾಲ ಮಾಡಿ ಹಂತ-ಹಂತವಾಗಿ ಮನೆಗಳನ್ನು ಕಟ್ಟಿಸಿಕೊಂಡು ಸರ್ಕಾರದ ಸಹಾಯ ಧನಕ್ಕಾಗಿ ಕಳೆದ ಒಂದು ವರ್ಷದಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ವಸತಿ ನಿಗಮದಿಂದ ಹಣ ಬಿಡುಗಡೆಯಾಗದಿರುವುದರಿಂದ ಬಡಜನರನ್ನು ಚಿಂತೆಗೆ ದೂಡಿದೆ.

ಎಷ್ಟು ಮನೆ:

ಪುರಸಭೆ ವ್ಯಾಪ್ತಿಯಲ್ಲಿ ಅಂಬೇಡ್ಕರ್‌, ವಾಜಪೇಯಿ ಸೇರಿದಂತೆ ವಿವಿಧ ವಸತಿ ಯೋಜನೆಗಳಲ್ಲಿ ಸುಮಾರು 550 ಮನೆಗಳು ಮಂಜೂರಾಗಿವೆ. ಎಸ್‌ಸಿ 225, ಎಸ್‌ಟಿ 131, ಸಾಮಾನ್ಯ 131, ಅಲ್ಪಸಂಖ್ಯಾತರಿಗೆ 25 ಮನೆಗಳು ಮಂಜೂರಾಗಿದ್ದು, ಅದರಲ್ಲಿ 243 ಮನೆಗಳು ಸಂಪೂರ್ಣಗೊಂಡಿವೆ. ಈ ಹಿಂದೆಯೇ ಹಣವೂ ಬಿಡುಗಡೆಯಾಗಿದೆ. ಇನ್ನುಳಿದ 183 ಮನೆಗಳು ವಿವಿಧ ಹಂತಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಹಣ ಬರದೆ ಇರುವುದರಿಂದ ವಿವಿಧ ಹಂತಗಳಲ್ಲಿರುವ ಮನೆಗಳು ಅರ್ಧದಲ್ಲಿ ಕಾಮಗಾರಿ ಸ್ಥಗಿತ ಗೊಂಡಿವೆ.

ಸಮಸ್ಯೆ:

ಈಗಾಗಲೇ ವಸತಿ ಯೋಜನೆಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಪಲಾನುಭವಿಗಳು ಒತ್ತಡದಿಂದ ಇಲ್ಲಿನ ಪುರಸಭೆ ಸದಸ್ಯ ಬೆಂಗಳೂರಿನಲ್ಲಿರುವ ವಸತಿ ನಿಗಮದ ಕಚೇರಿಗೆ ಭೇಟಿ ನೀಡಿ ಅಲ್ಲಿ ವಿಚಾರಿಸಿದಾಗ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಅನುದಾನವಿಲ್ಲ. ಸರ್ಕಾದಿಂದ ಅನುದಾನ ಬಂದ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೇ ವಸತಿ ನಿಗಮದ ಮುಂಭಾಗದಲ್ಲಿ ಸಹ ವಿವಿಧ ವಸತಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಹಣದ ಕೊರತೆ ಇದ್ದು ಅನುದಾನ ಬಂದ ನಂತರ ಹಣ ಬಿಡುಗಡೆ ಮಾಡಲಾಗುವುದು ಎಂದು ಸಾರ್ವಜನಿಕರ ಮಾಹಿತಿಗಾಗಿ ಬಿತ್ತಿ ಪತ್ರವನ್ನು ಅಂಟಿಸಲಾಗಿದೆ ಎಂದು ತಿಳಿದು ಬಂದಿದೆ.

ಒತ್ತಾಯ:

ಸರ್ಕಾರ ಬಡವರಿಗಾಗಿ ಮಿಸಲಿಟ್ಟ ಹಣ ಕೂಡಲೇ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಬಿಡುಗೆಡ ಮಾಡಬೇಕು ಎಂದು ಪಲಾನುಭವಿಗಳು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಛೆತ್ತು ಮನೆಗಳನ್ನು ನಿರ್ಮಿಸಿಕೊಂಡಿರುವ ಪಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ಮುಂದಾಗುವುದೇ ಎಂದು ಕಾದು ನೋಡಬೇಕಿದೆ.

ಕಳೆದ ಒಂಬತ್ತು ತಿಂಗಳ ಹಿಂದೆಯೇ ಮನೆ ನಿರ್ಮಿಸಿಕೊಳ್ಳಲು ಪ್ರಾರಂಭಿಸಿದ್ದೇವೆ. ಮನೆಯ ಜಿಪಿಎಸ್‌ ಮಾಡಿಕೊಂಡು ಹೊಗಿದ್ದಾರೆ. ಹಣ ಜಮಾ ಮಾಡುವಂತೆ ಕೇಳಿದರೆ ನಿಗಮದಿಂದ ಹಣ ಬಂದಿಲ್ಲ ಬಂದ ಮೇಲೆ ಜಮಾ ಆಗುತ್ತದೆ ಎಂದು ಹೇಳಿ ಕಳಿಸುತ್ತಿದ್ದಾರೆ. ಇದರಿಂದ ಮನೆಯೆ ಬೇಡ ಎನ್ನುವಂತಾಗಿದೆ ಎಂದು ಮಸ್ಕಿ ಪಟ್ಟಣದ ಪಲಾನುಭವಿ ಶಶಿಧರ ಅವರು ಹೇಳಿದ್ದಾರೆ.  

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಮಸ್ಕಿ ಪುರಸಭೆ ಸದಸ್ಯ ಎಂ.ಅಮರೇಶ ಅವರು, ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ವಸತಿ ಯೋಜನೆಯಲ್ಲಿ ಬಡವರು ನಿರ್ಮಿಸಿಕೊಂಡಿರುವ ಮನೆಗಳಿಗೆ ಸರ್ಕಾರದಿಂದ ಸಹಾಯ ಧನ ಬಿಡುಗಡೆಯಾಗದಿರುವುದರಿಂದ ಬಡ ಜನರಿಗೆ ತುಂಬಾ ಕಷ್ಟವಾಗಿದೆ. ಆದ್ದರಿಂದ ಬೆಂಗಳೂರಿಗೆ ಹೋಗಿ ವಸತಿ ಸಚಿವ ಸೋಮಣ್ಣನವರಿಗೆ ಮನವಿ ಸಲ್ಲಿಸಿ ಬಂದಿದ್ದೇನೆ. ಆದರೂ ಇನ್ನೂ ಹಣ ಬಿಡುಗಡೆಯಾಗಿಲ್ಲ. ಜಿಲ್ಲಾಧಿಕಾರಿಗಳು ಗಮನ ಹರಿಸಿ ಬಡಜನರ ನೆರವಿಗೆ ಬರಬೇಕು ಎಂದು ತಿಳಿಸಿದ್ದಾರೆ. 

click me!