ನೆರೆ ವೇಳೆ ಆ್ಯಂಬುಲೆನ್ಸ್‌ಗೆ ದಾರಿ ತೋರಿದ್ದ ಬಾಲಕಗೆ ಖುಲಾಯಿಸಿದ ಭರ್ಜರಿ ಅದೃಷ್ಟ!

By Kannadaprabha NewsFirst Published Oct 21, 2019, 9:09 AM IST
Highlights

 ನೆರೆ ಸಂದರ್ಭದಲ್ಲಿ ಸೇತುವೆ ಮುಳುಗಿದ್ದರೂ ಜೀವದ ಹಂಗು ತೊರೆದು ಆ್ಯಂಬುಲೆನ್ಸ್‌ಗೆ ದಾರಿ ತೋರಿಸಿ ಪ್ರಶಂಸೆಗೆ ಪಾತ್ರನಾಗಿದ್ದ ದೇವದುರ್ಗ ತಾಲೂಕಿನ ಹಿರೇರಾಯಕುಂಪಿಯ ಬಾಲಕ ವೆಂಕಟೇಶನಿಗೆ ಈಗ ಅದೃಷ್ಟಖುಲಾಯಿಸಿದೆ.

ರಾಯಚೂರು(ಅ.21): ನೆರೆ ಸಂದರ್ಭದಲ್ಲಿ ಸೇತುವೆ ಮುಳುಗಿದ್ದರೂ ಜೀವದ ಹಂಗು ತೊರೆದು ಆ್ಯಂಬುಲೆನ್ಸ್‌ಗೆ ದಾರಿ ತೋರಿಸಿ ಪ್ರಶಂಸೆಗೆ ಪಾತ್ರನಾಗಿದ್ದ ದೇವದುರ್ಗ ತಾಲೂಕಿನ ಹಿರೇರಾಯಕುಂಪಿಯ ಬಾಲಕ ವೆಂಕಟೇಶನಿಗೆ ಈಗ ಅದೃಷ್ಟಖುಲಾಯಿಸಿದೆ.

ಬಾಲಕನ ಸಾಹಸ ಮೆಚ್ಚಿ ಇತ್ತೀಚೆಗಷ್ಟೇ ಸನ್ಮಾನಿಸಿದ್ದ ಕೇರಳದ ಮೂರು ಸಂಸ್ಥೆಗಳು ಈಗ ಬಾಲಕನ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿವೆ.

ಈ ಸಂಬಂಧ ಭಾನುವಾರ ಬಾಲಕನ ಹುಟ್ಟೂರು ಹಿರೇರಾಯಕುಂಪಿ ಗ್ರಾಮಕ್ಕೆ ಆಗಮಿಸಿದ್ದ ಕೇರಳದ ಎಂಐಯುಪಿ ಸ್ಕೂಲ್‌ ಪಿಟಿಎ ಕಮಿಟಿ, ಹೆಲ್ಪಿಂಗ್‌ ಹ್ಯಾಂಡ್ಸ್‌ ಚಾರಿಟೇಬಲ್‌ ಟ್ರಸ್ಟ್‌ ಮತ್ತು ಕೇರಳದ ಫೋಕಸ್‌ ಇಂಡಿಯಾ ಸಂಸ್ಥೆಯ ಪದಾಧಿಕಾರಿಗಳು, ಮುಖಂಡರು ಕುಟುಂಬ ಸದಸ್ಯರ ಜತೆಗೆ ಮಾತುಕತೆ ನಡೆಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಲೆ ಬಾಲಕನ ಮನೆಯನ್ನು ವೀಕ್ಷಿಸಿ ಗುತ್ತಿಗೆದಾರರ ಮೂಲಕ ಐದರಿಂದ ಆರು ಲಕ್ಷ ಮೌಲ್ಯದ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ ಅವರು, ಮೂರು ತಿಂಗಳ ಬಳಿಕ ಗ್ರಾಮಕ್ಕೆ ಭೇಟಿ ಕೊಡುವುದಾಗಿ ಭರವಸೆ ನೀಡಿದರು.

click me!