ರಾಯಚೂರಿನಲ್ಲಿ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ರೆಡ್ ಹ್ಯಾಡ್ ಆಗಿ ಸಿಕ್ಕಿಬಿದ್ದಿದ್ದು, ವಿದ್ಯಾರ್ಥಿಗಳು ಸೇರಿ 41 ಜನರ ವಿರುದ್ಧ ದೂರು ದಾಖಲಾಗಿದೆ.
ರಾಯಚೂರು, [ಮೇ.12]: ರಾಯಚೂರು ಬಡಾವಣೆಯೊಂದರ ಮನೆಯಲ್ಲಿ ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ 41 ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು [ಭಾನುವಾರ] ಗುಲ್ಬರ್ಗ ವಿಶ್ವವಿದ್ಯಾಲಯ ಬಿಕಾಂ 2ನೇ ಸೆಮಿಸ್ಟರ್ ಇಂಡಸ್ಟ್ರಿಯಲ್ ಎಕನಾಮಿಕ್ಸ್ ಪರೀಕ್ಷೆ ಇತ್ತು. ಆದ್ರೆ, ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯದೇ, ಅಕ್ರಮವಾಗಿ ಮನೆಯೊಂದರಲ್ಲಿ ವಿದ್ಯಾರ್ಥಿಗಳನ್ನು ಕೂಡಿಹಾಕಿ ಪರೀಕ್ಷೆ ಬರೆಸಲಾಗಿದೆ.
undefined
ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ಜತೆಗೇ ನೀಡಿ ಅಕ್ರಮವಾಗಿ ಪರೀಕ್ಷೆ ಬರೆಸಲಾಗಿದೆ. ರಾಯಚೂರಿನ ಕಾಲೇಜೊಂದರ 41 ವಿದ್ಯಾರ್ಥಿಗಳು ರಾಯಚೂರಿನ ಐಡಿಎಸ್ಎಂಟಿ ಬಡಾವಣೆಯ ಮನೆಯಲ್ಲಿ ಪರೀಕ್ಷೆ ಬರೆಯುತ್ತಿರುವ ಮಾಹಿತಿ ತಿಳಿದ ಸದರ ಬಜಾರ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ.
ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪರೀಕ್ಷೆ ನಡೆಸುತ್ತಿದ್ದ ಮೇಲ್ವಿಚಾರಕನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಅಕ್ರಮ ಪರೀಕ್ಷೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಸೇರಿ 41 ಜನರ ವಿರುದ್ಧ ದೂರು ಸೆಕ್ಷನ್ ಕರ್ನಾಟಕ ಎಜಿಕೇಷನ್ ಆ್ಯಕ್ಟ್ 1983 ಸೆಕ್ಷನ್ 117 ಮತ್ತು ಐಪಿಸಿ ಕಲಂ 420 ಪ್ರಕಾರ ದೂರು ದಾಖಲಾಗಿದೆ.
ಪರೀಕ್ಷಾ ಕೇಂದ್ರಗಳು ರದ್ದು
ರಾಯಚೂರು ನಗರದ ಜ್ಞಾನ ಗಂಗಾ, ಡಿ.ಕೆ. ಭಂಡಾರಿ ಹಾಗೂ ವಿವೇಕಾನಂದ ಪದವಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳನ್ನು ರದ್ದು ಮಾಡಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಿ.ಎಂ. ಮದರಿ ಆದೇಶ ಹೊರಡಿಸಿದ್ದಾರೆ. ಈ ಮೂರೂ ಪರೀಕ್ಷಾ ಕೇಂದ್ರಗಳ ವಿದ್ಯಾರ್ಥಿಗಳನ್ನು ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಸಲು ಸೂಚನೆ ನೀಡಿದ್ದಾರೆ.