ಹುತಾತ್ಮ ಯೋಧ ಗುರು ಕುಟುಂಬಕ್ಕೆ ತಿಂಗಳ ಸ್ಯಾಲರಿ ನೀಡಿದ ದೇವದುರ್ಗ PSI ಅಗ್ನಿ

By Web DeskFirst Published Feb 20, 2019, 10:26 PM IST
Highlights

ಕರ್ತವ್ಯದ ಜೊತೆ ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿರುವ ರಾಯಚೂರು ಜಿಲ್ಲೆ ದೇವದುರ್ಗ ಪಿಎಸ್ ಐ ಈಗ ಹುತಾತ್ಮರಾದ ವೀರ ಯೋಧ ಮಂಡ್ಯದ ಎಚ್ .ಗುರು ಕುಟುಂಬಕ್ಕೆ ನೆರವಾಗಿದ್ದಾರೆ.

ರಾಯಚೂರು, [ಫೆ.20]:  ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ವೀರ ಯೋಧ ಮಂಡ್ಯದ ಎಚ್ .ಗುರು ಕುಟುಂಬಕ್ಕೆ ದೇವದುರ್ಗ ಪಿಎಸ್ ಐ ಅಗ್ನಿ ಧನ ಸಹಾಯ ಮಾಡಿದ್ದಾರೆ. 

ರಾಯಚೂರು ಜಿಲ್ಲೆ ದೇವದುರ್ಗ ಠಾಣೆ PSI ಎಲ್.ಬಿ.ಅಗ್ನಿ ಅವರು ತಮ್ಮ ಒಂದು ತಿಂಗಳ ಸಂಬಳವನ್ನು ಗುರು ಕುಟುಂಬಕ್ಕೆ ನೀಡಿ ಹುತಾತ್ಮ ಯೋಧನ ಕುಟುಂಬ ನೋವಿಗೆ ನೆರವಾಗಿದ್ದಾರೆ.

’ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರತಂಡದಿಂದ ಹುತಾತ್ಮ ಗುರು ಕುಟುಂಬಕ್ಕೆ ನೆರವು

ಹುತಾತ್ಮ ಯೋಧ ಗುರು ತಂದೆ ಚೆನ್ನಯ್ಯ ಬ್ಯಾಂಕ್ ಅಕೌಂಟ್ ಗೆ ತಿಂಗಳ ಸಂಬಳ 45 ಸಾವಿರ ರೂ. ಹಾಕಿದ್ದಾರೆ. ದಕ್ಷತೆಯಿಂದ ಕಾನೂನು ಸುವ್ಯವಸ್ಥೆ ಕಾಪಾಡುತ್ತಿರುವ ಪಿಎಸ್ ಐ ಎಲ್ .ಬಿ .ಅಗ್ನಿ, ಈ ಹಿಂದೆಯೂ ರಾಯಚೂರಿನಲ್ಲಿ ಸೇವೆಯಲ್ಲಿದ್ದಾಗ ರಸ್ತೆಯಲ್ಲಿನ ಗುಂಡಿ ಸ್ವಂತ ಖರ್ಚಿನಿಂದ ಮುಚ್ಚಿಸಿದ್ದರು. 

ಮಲೇಷ್ಯಾದಿಂದಲೇ ಹುತಾತ್ಮ ಗುರು ಕುಟುಂಬಕ್ಕೆ ಜಮೀನು ನೆರವು ಘೋಷಿಸಿದ ಸುಮಲತಾ ಅಂಬರೀಶ್

ಅದೇ ರೀತಿ ಚಳಿಗಾಲದಲ್ಲಿ ರಸ್ತೆ ಬದಿ ಮಲಗಿದ್ದ ಅನಾಥರಿಗೆ ಹೊದಿಕೆ ವಿತರಿಸಿ ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳುತ್ತ ಇತರರಿಗೆ ಮಾದರಿಯಾಗಿದ್ದಾರೆ.

click me!