ಮಸ್ಕಿ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಬಸನಗೌಡ ತುರ್ವಿಹಾಳ

By Web DeskFirst Published Oct 19, 2019, 10:56 AM IST
Highlights

ಮಸ್ಕಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್‌.ಬಸನಗೌಡ ತುರ್ವಿಹಾಳ| ಮಸ್ಕಿ ನಾಲಾಜಲಾಶಕ್ಕೆ ಅಭಿಮಾನಿ ಕಾರ್ಯರ್ಕರೊಂದಿಗೆ ತೆರಳಿ ಬಾಗಿನ ಅರ್ಪಣೆ| ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಈ ಭಾಗದ ನೀರಾವರಿ ಯೋಜನೆಗಳು ಜಾರಿಗೆ ತರಲು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು| 

ಮಸ್ಕಿ(ಅ.19): ಮಸ್ಕಿ ಜಲಾಶಯ ತುಂಬಿರುವುದರಿಂದ ರೈತರಿಗೆ ಗಂಗಾಮಾತೆ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಿ ಜಲಾಶಯಕ್ಕೆ ಬಾಗಿನ ಅರ್ಪಿಸಿರುವುದಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್‌.ಬಸನಗೌಡ ತುರ್ವಿಹಾಳ ಅವರು ಹೇಳಿದ್ದಾರೆ. 

ಮಸ್ಕಿ ನಾಲಾಜಲಾಶಕ್ಕೆ ಅಭಿಮಾನಿ ಕಾರ್ಯರ್ಕರೊಂದಿಗೆ ತೆರಳಿ ಶುಕ್ರವಾರ ಬಾಗಿನ ಸಲ್ಲಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ವರ್ಷ ಮಳೆ ಚನ್ನಾಗಿ ಆಗಿದೆ. ರೈತರು ಖುಷಿಯಲ್ಲಿ ಇದ್ದಾರೆ. ಹಳ್ಳ ಕೊಳ್ಳಗಳು ತುಂಬಿವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಈ ಭಾಗದ ನೀರಾವರಿ ಯೋಜನೆಗಳು ಜಾರಿಗೆ ತರಲು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ ಒತ್ತಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಖ್ಯಮಂತ್ರಿ ಬಿ. ಎಸ್‌.ಯಡಿಯೂರಪ್ಪ ಅವರು ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಬಲವಾಗಿ ಸಂಘಟಿಸಿರುವದನ್ನು ಗಮನಿಸಿ ನನಗೆ ತುಂಗಾಭದ್ರ ಕಾಡಾ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದಾರೆ. ಅಧಿಕಾರ ಸ್ವೀಕರಿಸುವ ಕುರಿತು ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರ ಅನರ್ಹತೆ ಕುರಿತು ಇಷ್ಟರಲ್ಲಿ ತೀರ್ಪು ಬರುವ ನೀರಿಕ್ಷೆ ಇದೆ. ತೀರ್ಪನ್ನು ಗಮನಿಸಿ ಸೂಕ್ತ ನಿರ್ಧಾರ ಪ್ರಕಟಿಸುವೆ ಎಂದು ಹೇಳಿದ್ದಾರೆ. 

ಈ ವೇಳೆ ಮುಖಂಡರಾದ ಅಪ್ಪಾಜಿಗೌಡ ಪಾಟೀಲ, ಸಿದ್ದಣ್ಣ ಹೂವಿನಬಾವಿ, ಮಲ್ಲಪ್ಪ ಅಂಕುಶದೊಡ್ಡಿ, ಗ್ರೀನ್‌ಸಿಟಿ ಮಲ್ಲಿಕಾರ್ಜುನ, ಕೃಷ್ಣ ಚಿಗರಿ, ತಾ.ಪಂ.ಸದಸ್ಯರಾದ ಶಿವಣ್ಣ ನಾಯಕ ಹಾಗೂ ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲೂರು, ಮಾನಪ್ಪ, ನಾಗರಾಜ ಗುಡಿಸಲಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
 

click me!