ಕೆಲಸಕ್ಕಾಗಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ವಿನೂತನ ಪ್ರಯೋಗ ಮಾಡಿ ಉದ್ಯೋಗ ಗಿಟ್ಟಿಸಿಕೊಂಡ ಉದಾಹರಣೆಗಳಿವೆ. ಇದೀಗ ಉದ್ಯೋಗಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಅಭ್ಯರ್ಥಿ ನೀಡಿದ ಉತ್ತರವೊಂದು ಕಂಪನಿಯ ಸಿಇಒಗೆ ಮೆಚ್ಚುಗೆಗೆ ಪಾತ್ರವಾಗಿದೆ.
ನವದೆಹಲಿ(ಜೂ.15) ಉದ್ಯೋಗ ಅರಸಿ ಕಂಪನಿಗಳಿಗೆ ಪ್ರತಿ ದಿನ ಸಾವಿರಾರು ಅರ್ಜಿಗಳು, ರೆಸ್ಯೂಮ್ ಬರುತ್ತಲೇ ಇರುತ್ತದೆ. ಈ ಪೈಕಿ ಕೆಲ ಅರ್ಜಿಗಳು ಎಲ್ಲರ ಗಮನಸೆಳೆಯುತ್ತಿದೆ. ವಿನೂತನವಾಗಿ ಅರ್ಜಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡ ಉದಾಹರಣೆಗಳೂ ಇವೆ. ಇದೀಗ ಅಭ್ಯರ್ಥಿಯೊಬ್ಬ ಕೆಲಸಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಬರೆದ ಒಂದು ವಾಕ್ಯದಿಂದ ಕಂಪನಿ ಸಿಇಒ ಇಂಪ್ರೆಸ್ ಆಗಿದ್ದಾರೆ. ಇಷ್ಟೇ ಅಲ್ಲ ಈತನನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಅಷ್ಟಕ್ಕೂ ಆತ ನೀವು ಈ ಕೆಲಸದಿಂದ ರಿಜೆಕ್ಟ್ ಮಾಡಿದರೆ ನನ್ನ ಬಾಲ್ಯದ ಗೆಳತಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಬರೆದಿದ್ದಾನೆ. ಇದೀಗ ಈತನ ಉತ್ತರ ಸ್ಕ್ರೀನ್‌ಶಾಟ್ ವೈರಲ್ ಆಗಿದೆ.
ಅರ್ವಾ ಹೆಲ್ತ್ ಕಂಪನಿಯ ಸಂಸ್ಥಾಪಕಿ ಹಾಗೂ ಸಿಇಒ ದೀಪಾಲಿ ಬಜಾಜ್, ತಮ್ಮ ಕಂಪನಿಯ ಸ್ಟಾಕ್ ಎಂಜಿನೀಯರ್ ಹುದ್ದೆಗೆ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿದ್ದರು. ಕಂಪನಿಯ ಮಾಹಿತಿ ಹೊರಬೀಳುತ್ತಿದ್ದಂತೆ ಸಾವಿರಾರು ಅರ್ಜಿಗಳು ಕಂಪನಿ ಕೈಸೇರಿದೆ. ಈ ಪೈಕಿ ಸೂಕ್ತರನ್ನು ಆಯ್ಕೆ ಮಾಡುವುದೇ ದೊಡ್ಡ ಸವಾಲಾಗಿತ್ತು. ಅದರೂ ಉತ್ತಮ ಅಭ್ಯರ್ಥಿ ಹುಡುಕಾಟದಲ್ಲಿದ್ದ ದೀಪಾಲಿ ಬಜಾಜ್‌ಗೆ ಒಂದು ಅರ್ಜಿ ಭಾರಿ ಕುತೂಹಲ ಮೂಡಿಸಿತ್ತು.
undefined
ಕ್ರಿಯೆಟಿವಿಟಿಗೆ ಸಿಕ್ತು ಮೆಚ್ಚುಗೆ, ಬ್ಲಿಂಕಿಟ್ ಮೂಲಕ ಉದ್ಯೋಗಕ್ಕಾಗಿ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ!
ಅರ್ಜಿ ಸಲ್ಲಿಸುವಾಗ ನೀವು ಈ ಕೆಲಸಕ್ಕೆ ಹೇಗೆ ಸೂಕ್ತ ಅನ್ನೋದು ವಿವರಿಸಲು ಕಂಪನಿ ಸೂಚಿಸಿತ್ತು. ಇದಕ್ಕೆ ಉತ್ತರಿಸಿದ ಅಭ್ಯರ್ಥಿ, ನನ್ನಲ್ಲಿರುವ ಕೌಶಲ್ಯದಿಂದ ನಾನು ಈ ಕೆಲಸವನ್ನು ಸಮರ್ಥವಾಗಿ ಮಾಡಬಲ್ಲೆ. ನನಗೆ ಈ ಕೆಲಸ ಸಿಗದಿದ್ದರೆ, ನಾನು ಬಾಲ್ಯದ ಗೆಳತಿಯನ್ನು ಮದುವೆಯಾಗಲು ಸಾಧ್ಯವಿಲ್ಲ. ಕಾರಣ ಆಕೆಯ ತಂದೆ ಕೆಲಸವಿಲ್ಲದವನಿಗೆ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದಿದ್ದಾರೆ. ಈ ಕೆಲಸ ಸಿಕ್ಕಿದರೆ ಮಾತ್ರ ಆಕೆಯನ್ನು ಮದುವೆಯಾಗಲು ಸಾಧ್ಯ ಎಂದು ಉತ್ತರಿಸಿದ್ದಾರೆ.
hiring can be fun too 🥲 pic.twitter.com/6RnKnOWhIM
— Dipalie (@dipalie_)
ಅಭ್ಯರ್ಥಿಯ ಈ ಉತ್ತರ ದೀಪಾಲಿ ಬಜಾಜ್ ಮೆಚ್ಚುಗೆಗೆ ಪಾತ್ರವಾಗಿದೆ. ಈತನ ಉತ್ತರದ ಸ್ಕ್ರೀನ್‌ಶಾಟ್ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಭ್ಯರ್ಥಿಗಳನ್ನು ಉದ್ಯೋಗಕ್ಕೆ ಆಯ್ಕೆ ಮಾಡುವುದೂ ಒಂದು ರೀತಿ ಫನ್ ಎಂದು ಬರೆದುಕೊಂಡಿದ್ದಾರೆ. ಈ ಸ್ಕ್ರೀನ್‌ಶಾಟ್ ವೀಕ್ಷಿಸಿದ ನೆಟ್ಟಿಗರು, ಈ ಅಭ್ಯರ್ಥಿಯನ್ನು ಕೆಲಸಕ್ಕೆ ಆಯ್ಕೆ ಮಾಡಲು ಸೂಚಿಸಿದ್ದಾರೆ. ಈತ ಕಪಟವಿಲ್ಲದೆ ನೇರವಾಗಿ ಉತ್ತರಿಸಿದ್ದಾನೆ. ಸ್ಪಷ್ಟ ಹಾಗೂ ನೇರ ಉತ್ತರ ನೀಡಿದ ಈ ಅಭ್ಯರ್ಥಿಗೆ ಕೆಲಸ ನೀಡಿದರೆ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಎಂದು ಹಲವರು ಸೂಚಿಸಿದ್ದಾರೆ.
ಉದ್ಯೋಗಕ್ಕಾಗಿ ರೆಸ್ಯೂಮ್ ಜೊತೆ ಫಿಜಾ ಕಳುಹಿಸಿದ ಅಭ್ಯರ್ಥಿ, ವಿನೂತನ ಐಡಿಯಾಗೆ ಬಾಸ್ ಇಂಪ್ರೆಸ್!