Wipro Recruitment: ಎಂಜಿನಿಯರ್ ಪದವೀಧರರಿಗೆ ಉದ್ಯೋಗಾವಕಾಶ

Suvarna News   | Asianet News
Published : Nov 23, 2021, 04:56 PM IST
Wipro Recruitment: ಎಂಜಿನಿಯರ್ ಪದವೀಧರರಿಗೆ ಉದ್ಯೋಗಾವಕಾಶ

ಸಾರಾಂಶ

ಐಟಿ ಸೇರಿದಂತೆ ಖಾಸಗಿ ವಲಯದ ಕಂಪನಿಗಳು ನಿಧಾನವಾಗಿ ಕೋವಿಡ್ ಪೂರ್ವ ಸ್ಥಿತಿಗೆ ಮರಳುತ್ತಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಹೆಚ್ಚಿಸುತ್ತಿವೆ. ಅದೇ ರೀತಿ, ಐಟಿ ದೈತ್ಯ ಕಂಪನಿಯಾಗಿರುವ ವಿಪ್ರೋ (Wipro) ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಫ್ರೆಶರ್ಸ್ ಮತ್ತು ಎಂಜಿನಿಯರ್ ಪದವೀಧರರು ಅಪ್ಲೈ ಮಾಡಬಹುದು. ಹೆಚ್ಚಿನ ಮಾಹಿತಿಗೆ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ನೀಡಿ.

ಐಟಿ ದೈತ್ಯ ಕಂಪನಿ ವಿಪ್ರೋ(Wipro)ದಲ್ಲಿ ಕೆಲಸ ಮಾಡಲು ಯಾರೂ ಬೇಡ ಅಂತಾರೆ.. ಪದವಿ ಮುಗಿಯುತ್ತಿದ್ದಂತೆ ವಿಪ್ರೋ, ಇನ್ಫೋಸಿಸ್ (Infosys)ನಂತಹ ಕಂಪನಿಗಳಲ್ಲಿ ನೌಕರಿ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡ್ತಾರೆ. ದೇಶದ ಯಾವುದೇ ನಗರವಾದ್ರೂ ಸರಿ.. ವಿದೇಶವಾದ್ರೂ ಸರಿ.. ಅಂತಹ ಪ್ರತಿಷ್ಟಿತ ಕಂಪನಿಗಳಲ್ಲಿ ನೌಕರಿ ಪಡೆಯಲು ಹಾತೊರೆಯುತ್ತಿರುತ್ತಾರೆ. ಅಷ್ಟರ ಮಟ್ಟಿಗೆ ಐಟಿ ದಿಗ್ಗಜ ಕಂಪನಿಗಳು ಸಖತ್ ಫೇಮಸ್ ಆಗ್ಬಿಟ್ಟಿವೆ. ಇದೀಗ ವಿಪ್ರೋ (Wipro) ಕಂಪನಿಯಲ್ಲಿ ನೌಕರಿಗೆ ಸೇರಲು ಬಯಸುವವರಿಗೊಂದು ಗೋಲ್ಡನ್ ಅವಕಾಶ ಒಲಿದು ಬಂದಿದೆ. ಹೌದು.. ವಿಪ್ರೋ ಕಂಪನಿ ಇಂಜಿನಿಯರ್ (Engineer) ಪದವಿ ಮುಗಿಸಿರುವವರಿಗೆ ಬಂಪರ್ ಆಫರ್ ನೀಡ್ತಾ ಇದೆ. ನೋಯ್ಡಾ ಕ್ಯಾಂಪಸ್‌ಗಾಗಿ ವಿಶ್ಲೇಷಕ-ಕಾನ್ಫಿಗರೇಶನ್ (analyst – configuration) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಹ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಿದೆ.  ನೇಮಕಾತಿಗೂ ಮುನ್ನ ಕಂಪನಿಯು ಪರೀಕ್ಷೆ ನಡೆಸಲಿದ್ದು, ಯಾರು ಸ್ಪಷ್ಟ ವಿಶ್ಲೇಷಣೆ (clear analysis), ಪರೀಕ್ಷಾ ಯೋಜನೆಗಳು (test plans) ಮತ್ತು ಯೋಜನಾ ಕಾರ್ಯ (project work)ಗಳಿಗಾಗಿ ಪ್ರಮಾಣಿತ ಕಾರ್ಯವಿಧಾನಗಳನ್ನು ನೀಡುತ್ತಾರೆ ಅನ್ನೋದನ್ನ ಪರೀಕ್ಷಿಸುತ್ತದೆ.

ವಿಪ್ರೋ ಕಂಪನಿಯ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು BCA, B.SC -IT, B.Sc-CS, BE, B-tech ಮತ್ತು MCA ಪೂರ್ಣಗೊಳಿಸಿರಬೇಕು. ಅನುಭವ ಇರುವವರು, ಅನುಭವ ಹೊಂದಿಲ್ಲದ ಫ್ರೆಶರ್‌ಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಆಯ್ಕೆಯಾದ ಅಭ್ಯರ್ಥಿಗಳು ಸಿಸ್ಟಂ ಕಾನ್ಫಿಗರೇಶನ್ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇನ್ನು ಬಹುತೇಕ ಐಟಿ ಕಂಪನಿಗಳಲ್ಲಿ ಇರುವ ರೀತಿಯಲ್ಲೇ ಅಭ್ಯರ್ಥಿಗಳು ವಾರದ 5 ದಿನ ಮಾತ್ರ ಕೆಲಸ ಮಾಡುತ್ತಾರೆ ಎಂದು ವಿಪ್ರೋ ಹೇಳಿದೆ. ಅರ್ಹ ಮತ್ತು ಆಸಕ್ತ ಎಂಜಿನಿಯರಿಂಗ್ ಪದವೀಧರರು ವಿಪ್ರೋ ಅಧಿಕೃತ ವೆಬ್‌ಸೈಟ್ https://careers.wipro.com ಗೆ ಭೇಟಿ ನೀಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

Recruitment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 115 ಸ್ಪೆಷಲಿಸ್ಟ್ ಅಧಿಕಾರಿಗಳ ನೇಮಕಾತಿ ಶುರು

ಅಭ್ಯರ್ಥಿಗಳು ಪರೀಕ್ಷಾ ಪರಿಕಲ್ಪನೆಗಳು, ಎಸ್‌ಡಿಎಲ್‌ಸಿ (SDLC) ಬಗ್ಗೆ ಜ್ಞಾನವನ್ನು ಹೊಂದಿರಬೇಕು ಮತ್ತು ಅತ್ಯುತ್ತಮ ದೋಷನಿವಾರಣೆ ಮತ್ತು ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು. ಇನ್ನು ವಿಪ್ರೋ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷದ ಸೇವಾ ಒಪ್ಪಂದಕ್ಕೆ ಸಹಿ ಹಾಕಬೇಕು.

ಅರ್ಹ ಮತ್ತು ಆಸಕ್ತ ಉದ್ಯೋಗ ಅರ್ಜಿದಾರರು ವಿಪ್ರೊದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಬಹುದು ಮತ್ತು ವೃತ್ತಿ ವಿಭಾಗಕ್ಕೆ ಹೋಗಿ https://careers.wipro.com. ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ಪೋಸ್ಟ್‌ಗಳಿಗೆ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಸರಿಯಾದ ವಿವರಗಳೊಂದಿಗೆ ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. ಅಭ್ಯರ್ಥಿಗಳು ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿದ ನಂತರ, ವಿಪ್ರೋ ತಮ್ಮ ನೋಂದಾಯಿತ ಸಂಪರ್ಕ ವಿವರಗಳ ಮೂಲಕ ಅರ್ಜಿದಾರರಿಗೆ ನೇಮಕಾತಿ ಪ್ರಕ್ರಿಯೆ ಮತ್ತು ಇತರ ವಿವರಗಳನ್ನು ಹಂಚಿಕೊಳ್ಳುತ್ತದೆ.

ECIL Recruitment: ತಾಂತ್ರಿಕ ಅಧಿಕಾರಿಗಳ ನೇಮಕ್ಕೆ ಅರ್ಜಿ ಆಹ್ವಾನ

ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ (Covid-19) ಹಾಗೂ ಲಾಕ್‌ಡೌನ್‌ (Lockdown) ಗಳಿಂದಾಗಿ ಭಾರತ (India)ದಲ್ಲಿ ಸಾಕಷ್ಟು ಉದ್ಯೋಗ (Jobs) ನಷ್ಟಗಳಾಗಿವೆ. ವಿಶೇಷವಾಗಿ ಖಾಸಗಿ ವಲಯದಲ್ಲಿ ಬಹಳಷ್ಟು ಜನರು ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಉದ್ಯೋಗಾವಕಾಶಗಳು ಕೂಡ ಕಡಿಮೆಯಾಗಿದ್ದವು. ಆದರೆ, ಕರೋನಾಪೂರ್ವ ಪರಿಸ್ಥಿತಿಯು ಭಾರತದಲ್ಲಿ ಮರಳಿ ಬರುತ್ತಿದೆ. ಹಾಗಾಗಿ, ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪರಿಣಾಮ ಐಟಿ ಉದ್ಯಮ ಸೇರಿದಂತೆ ಎಲ್ಲ ಖಾಸಗಿ ವಲಯಗಳಲ್ಲೂ ನೇಮಕಾತಿ ಪ್ರಕ್ರಿಯೆ ಹೆಚ್ಚಾಗುತ್ತಿದೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದ್ದು, ಮಾರುಕಟ್ಟೆಯು ಚೇತರಿಕೆಯಾಗುತ್ತಿರುವುದನ್ನು ಸೂಚಿಸುತ್ತದೆ. ಇದರಿಂದ ಜನರು ಬದಕು ಕೂಡ ಮೊದಲಿನ ಸ್ಥಿತಿಗೆ ಮರಳಬಹುದಾಗಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?