Good News: ಐಟಿ ಸಾಫ್ಟ್‌ವೇರ್ ಕ್ಷೇತ್ರದ ನೇಮಕಾತಿಯಲ್ಲಿ ಶೇ.85 ಹೆಚ್ಚಳ

By Suvarna NewsFirst Published Nov 4, 2021, 4:20 PM IST
Highlights

ಭಾರತೀಯ ಐಟಿ ಕ್ಷೇತ್ರ ನೇಮಕಾತಿಯಲ್ಲಿ ಸಕಾರಾತ್ಮಕ ಚಟುವಟಿಕೆಗಳು ನಡೆಯುತ್ತಿವೆ. ಅಕ್ಟೋಬರ್ ತಿಂಗಳಲ್ಲಿ ಡೇಡಾ ಪರಿಗಣಿಸಿ ಹೇಳುವುದಾದರೆ ನೇಮಕಾತಿಯಲ್ಲಿ ಸೇ.85ರಷ್ಟು ಹೆಚ್ಚಳವಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಸಾಕಷ್ಟು ಉದ್ಯೋಗ ನಷ್ಟವಾಗಿದ್ದವು. ಆದರೆ, ಇದೀಗ ಮತ್ತೆ ನೇಮಕಾತಿಯ ಪ್ರಮಾಣ ಹೆಚ್ಚಳವಾಗುತ್ತಿರುವುದು ಸಾಕಷ್ಟು ಸಕಾರಾತ್ಮಕ ಬೆಳವಣಿಗೆಯಾಗಿದೆ.

ಕೊರೋನಾ ಸಾಂಕ್ರಾಮಿಕ ಕಾರಣದಿಂದ ಭಾರತದಲ್ಲಿ ಸಾಕಷ್ಟು ಉದ್ಯೋಗಗಳು ನಷ್ಟವಾಗಿದ್ದವು. ಆದರೆ, ಇತ್ತೀಚಿನ ಸಮೀಕ್ಷೆಯೊಂದು ಸಕಾರಾತ್ಮಕ ಸಂಗತಿಗಳನ್ನು ಹೊರಹಾಕಿದೆ. ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ನೇಮಕಾತಿಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ವಿಶೇಷವಾಗಿ ಐಟಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದೆ.

ಭಾರತದಲ್ಲಿ ನೇಮಕಾತಿ ಚಟುವಟಿಕೆಯು 2021ರ ಅಕ್ಟೋಬರ್‌ನಲ್ಲಿ ಶೇ.43ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಉದ್ಯೋಗದ ಪೋರ್ಟಲ್ Naukri.comನ ವರದಿಯು ಉದ್ಯೋಗ ಮಾರುಕಟ್ಟೆಯು ಮತ್ತೆ ಸಾಂಕ್ರಾಮಿಕ ಪೂರ್ವದ ಮಟ್ಟವನ್ನು ಮೀರಿದೆ ಎಂದು ಹೇಳುತ್ತದೆ. 2019ರ  ಅಕ್ಟೋಬರ್ ನೇಮಕಾತಿ ಚಟುವಟಿಕೆಗಳಿಗೆ ಹೋಲಿಸಿದರೆ ಪ್ರಸಕ್ತ ಅಕ್ಟೋಬರ್ ತಿಂಗಳಲ್ಲಿ 19 ಶೇಕಡಾ ಬೆಳವಣಿಗೆಯಾಗಿದೆ ಎಂಬ ಮಾಹಿತಿಯನ್ನು ಈ ವರದಿಯು ಹೊರಹಾಕಿದೆ.

ನೌಕಾಪಡೆಯಲ್ಲಿ ನಾವಿಕರಾಗಬೇಕೆ? 300 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

Naukri.com ನ ಮುಖ್ಯ ವ್ಯವಹಾರ ಅಧಿಕಾರಿ ಪವನ್ ಗೋಯಲ್ (Pawan Goyal) ಅವರ ಪ್ರಕಾರ, ಅವರು ಸಂಗ್ರಹಿಸಿದ ಡೇಟಾವು ಉದ್ಯೋಗ ನೇಮಕಾತಿಯಲ್ಲಿ ನಿರಂತರ ಪುನಶ್ಚೇತನ ಮತ್ತು ಚೇತರಿಕೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಕರೋನಾ ವೈರಸ್ ಸಾಂಕ್ರಾಮಿಕದ ಉತ್ತುಂಗದಲ್ಲಿದ್ದಾಗ ಆತಿಥ್ಯ, ಪ್ರಯಾಣ ಮತ್ತು ಚಿಲ್ಲರೆ ವ್ಯಾಪಾರಿ ವಲಯಗಳು ಹೆಚ್ಚು ಹೊಡೆತ ತಿಂದಿದ್ದವು. ಅವು ಈಗ ಇತರ ಎಲ್ಲ ಕ್ಷೇತ್ರಗಳನ್ನು ಮೀರಿಸಿವೆ ಎಂದು ಅವರು ಹೇಳಿದ್ದಾರೆ.

2021 ರ ಅಕ್ಟೋಬರ್‌ನಲ್ಲಿ ಐಟಿ-ಸಾಫ್ಟ್‌ವೇರ್ ವಲಯದಲ್ಲಿನ ನೇಮಕಾತಿಗಳು ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಶೇಕಡಾ 85 ರಷ್ಟು ಏರಿಕೆಯಾಗಿದೆ ಎಂಬ ಸಂಗತಿಯು ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಅದೇ ರೀತಿ ಟೆಲಿಕಾಂ (Telecom) ಕ್ಷೇತ್ರವು ಶೇ.84ರಷ್ಟು ನೇಮಕಾತಿ ಬೆಳವಣಿಗೆಯನ್ನು ಕಂಡಿದೆ. ರಿಟೇಲ್ (Retail) ವಲಯವು ನೇಮಕಾತಿಯಲ್ಲಿ 51 ಪ್ರತಿಶತದಷ್ಟು ಜಿಗಿತವನ್ನು ಕಂಡಿದೆ ಆದರೆ ಆತಿಥ್ಯ (Hospitality) ಮತ್ತು ಪ್ರಯಾಣ (travel) ವಲಯದಲ್ಲಿ 48 ಶೇಕಡಾ ಏರಿಕೆಯಾಗಿದೆ.
 

ಬೆಂಗಳೂರು (Bengaluru) ಶೇ 84  ಮತ್ತು ಹೈದರಾಬಾದ್ (Hyderabad) ಶೇ 80 ನಂತರ ಪುಣೆ (Pune) ಶೇ 69, ಚೆನ್ನೈ (Chennai) ಶೇಕಡಾ 57, ದೆಹಲಿ (Delhi) ಶೇ 51ರಷ್ಟು ಈ ನೇಮಕಾತಿಗಳ ಬಹುಪಾಲು ಹೇಗೆ ನಡೆಯುತ್ತಿದೆ ಎಂಬುದನ್ನು ಡೇಟಾ ಎತ್ತಿ ತೋರಿಸಿದೆ. 

4135 ಪ್ರೊಬೇಷನರಿ ಆಫೀಸರ್, ಮ್ಯಾನೇಜ್‌ಮೆಂಟ್ ಟ್ರೈನಿಗಳ ನೇಮಕ ಪ್ರಕ್ರಿಯೆ ಆರಂಭಿಸಿದ IBPS

ಮುಂಬೈ (Mumbai) ಶೇ. 46 ಮತ್ತು ಕೋಲ್ಕತ್ತಾ (Kolkata) ನಗರಗಳಲ್ಲಿ ಶೇ. 26ರಷ್ಟು ನೇಮಕಾತಿ ಪ್ರವೃತ್ತಿಗಳು ಹೆಚ್ಚುತ್ತಿವೆ. ಇನ್ನು ಎರಡನೇ ಸ್ತರದ ನಗರಗಳ ಪೈಕಿ ಅಹಮದಾಬಾದ್ ಮುಂಚೂಣಿಯಲ್ಲಿದೆ. ನಗರವು ನೇಮಕಾತಿಯಲ್ಲಿ ಶೇಕಡಾ 72 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂಬ ಸಂಗತಿಯು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕವು ಸಾಕಷ್ಟು ಹೊಡೆತ ನೀಡಿತ್ತು. ಇದೀಗ ಕೋವಿಡ್ ಪೂರ್ವ ಸ್ಥಿತಿಗೆ ಇಡೀ ಜಗತ್ತು ಮರಳುತ್ತಿದೆ. ಅದರ ಪರಿಣಾಮವು ಉದ್ಯೋಗ ನೇಮಕಾತಿಯಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ಭಾರತದಲ್ಲಿ ಸಾಕಷ್ಟು ಜನರು ಈ ಕೋವಿಡ್‌ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದರು. ಈ ಸಮೀಕ್ಷೆಯಿಂದ ವ್ಯಕ್ತವಾಗುವ ಸಂಗತಿ ಏನೆಂದರೆ, ಹಲವು ಕ್ಷೇತ್ರಗಳು ತಮ್ಮ ಎಂದಿನ ಚಟುವಟಿಕೆಯನ್ನು ನಡೆಸಲು ಪ್ರಾರಂಭಿಸಿವೆ. ಹಾಗಾಗಿಯೇ, ಉದ್ಯೋಗಿಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ಸಹಜವಾಗಿಯೇ ಇದು ನೇಮಕಾತಿ ಹೆಚ್ಚಳಕ್ಕೆ ಕಾರಣವಾಗಿದೆ. 

ಇಷ್ಟಾಗಿಯೂ ಇದೇ ಮಾತನ್ನು ಎಲ್ಲ ಕ್ಷೇತ್ರಗಳಿಗೂ ಹೇಳುವಂತಿಯೂ ಇಲ್ಲ. ಇನ್ನೂ ಅನೇಕ ಕ್ಷೇತ್ರಗಳು ಕೋವಿಡ್‌ ಹೊಡೆತದಿಂದ ಚೇತರಿಸಿಕೊಂಡಿಲ್ಲ. ಅವುಗಳಿಗೆ ಇನ್ನುಷ್ಟು ಸಮಯಬೇಕಾಗಬಹುದು ಮೊದಲಿನ ಸ್ಥಿತಿಗೆ ಮರಳಲು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ, ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಸಂಗತಿಗಳು ಆಶಾದಾಯಕವಾಗಿರುವ ಸಂಗತಿಯನ್ನು ಹೊರಹಾಕಿರುವುದು ಕೂಡ ಅಷ್ಟೇ ನಿಜವಾಗಿದೆ. 

UPSC ನೇಮಕಾತಿ: ಕೇಂದ್ರದಲ್ಲಿ ಖಾಲಿ ಇರುವ 56 ಹುದ್ದೆಗಳಿಗೆ ಅರ್ಜಿ ಆಹ್ವಾನ

click me!