ಯಾವ ಕಂಪನಿಯ ಗಗನಸಖಿಯರಿಗೆ ಸಿಗುತ್ತೆ ಹೆಚ್ಚು ಸಂಬಳ?

By Mahmad Rafik  |  First Published Sep 20, 2024, 1:04 PM IST

ವಿಮಾನದಲ್ಲಿ ಕೆಲಸ ಮಾಡುವ ಗಗನಸಖಿಯರು ಸಂಬಳದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿರುತ್ತವೆ. ಯಾವ ವಿಮಾನಯಾನ ಸಂಸ್ಥೆ ಗಗನಸಖಿಯರಿಗೆ  ಎಷ್ಟು ಸಂಬಳ ನೀಡುತ್ತೆ?


ನವದೆಹಲಿ: ಇಂದು ವಿಮಾನಯಾಣ ಅನ್ನೋದು ಸಾಮಾನ್ಯ ಮಾತಾಗಿದೆ. ದೂರದ  ಪ್ರಯಾಣಕ್ಕಾಗಿ ಹಣ ಹೋದರೂ ಪರವಾಗಿಲ್ಲ, ಕಡಿಮೆ ಸಮಯದಲ್ಲಿ ತಲುಪಬೇಕು ಅನ್ನೋದು ಇಂದಿನ  ಜನರ ಮಾತಾಗಿದೆ. ವಿಮಾನದೊಳಗೆ ಪ್ರವೇಶಿಸುವಾಗಲೇ ದ್ವಾರದಲ್ಲಿ ನಿಂತಿರುವ ಗಗನಸಖಿಯರು ನಿಮ್ಮನ್ನು ಸ್ವಾಗತಿಸುತ್ತಾರೆ. ನಿರ್ಗಮನ ಸಮಯದಲ್ಲಿಯೂ ಗಗನಸಖಿಯರು ಮುಗಳ್ನಗುತ್ತಲೇ ಪ್ರಯಾಣಿಕರನ್ನು ಬೀಳ್ಕೊಡುಗೆ ನೀಡುತ್ತಾರೆ. ಎಲ್ಲರ ಹೇಳುವ ಪ್ರಕಾರ, ಗಗನಸಖಿಯರು ಅತಿ  ಹೆಚ್ಚು ಸಂಬಳ ಪಡೆಯುತ್ತಾರೆ ಎಂದು ಹೇಳುತ್ತಾರೆ.  ಇಂದು ಹಲವು  ಖಾಸಗಿ ವಿಮಾನಯಾನ ಸಂಸ್ಥೆಗಳಿದ್ದು, ಸಿಬ್ಬಂದಿ ಸಂಬಳ ಕಂಪನಿಯಿಂದ ಕಂಪನಿಗೆ ಬೇರೆ  ಬೇರೆಯಾಗಿರುತ್ತದೆ. ಗಗನಸಖಿಯರ ಲೈಫ್‌ಸ್ಟೈಲ್ ಮತ್ತು ಕೆಲಸ ಅತ್ಯಂತ ಕ್ಲಿಷ್ಟವಾಗಿರುತ್ತದೆ. 

ವಿಮಾನದಲ್ಲಿ ಗಗನಸಖಿಯರೇ ಹೆಚ್ಚು ಕೆಲಸ ಮಾಡುತ್ತಿರುತ್ತಾರೆ. ಆಹಾರ ಮತ್ತು ಪಾನೀಯ ನೀಡುವದರ ಜೊತೆಗೆ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕೆಲಸ ಮಾಡುತ್ತಾರೆ. ಇಡೀ ವಿಮಾನದಲ್ಲಿಯ ಎಲ್ಲಾ ಪ್ರಯಾಣಿಕರನ್ನು ನಿಯಂತ್ರಿಸೋದು ಗಗನಸಖಿಯರ ಪ್ರಮುಖ ಕೆಲಸವಾಗಿರುತ್ತದೆ. ಇದೆಲ್ಲದರ ಜೊತೆಗೆ ಆಕ್ಸಿಜನ್ ಮಾಸ್ಕ್, ಎಮೆರ್ಜೆನ್ಸಿ ಗೇಟ್, ದ್ವಾರಗಳ ಪರಿಚಯವನ್ನು ಗಗನಸಖಿಯರೇ ಮಾಡಿಕೊಡುತ್ತಾರೆ. ಕ್ಯಾಬಿನ್‌ಗಳನ್ನು ಸಹ ಗಗನಸಖಿಯರೇ ಸ್ವಚ್ಛವಾಗಿ ಇರಿಸಿಕೊಳ್ಳಬೇಕು. 

Latest Videos

undefined

ಇಂದು ಇಡೀ ವಿಶ್ವದಲ್ಲಿ ಹಲವು ಏರ್‌ಲೈನ್ಸ್ ಕಂಪನಿಗಳಿದ್ದು, ವಿವಿಧ ಹಂತ ಹಾಗೂ ಅನುಭವದ  ಆಧಾರದ ಮೇಲೆ ಗಗನಸಖಿಯರ ಸಂಬಳ ನಿಗಧಿಯಾಗುತ್ತದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ, ಗಗನಸಖಿಯರ ಸಂಬಳ 40 ಸಾವಿರ ರೂ.ಗಳಿಂದ ಆರಂಭವಾಗುತ್ತದೆ. ಇಂಟರ್‌ನ್ಯಾಷನಲ್ ಮತ್ತು ಡೊಮೆಸ್ಟಿಕ್ ಫ್ಲೈಟ್‌ಗಳಲ್ಲಿ ಕೆಲಸ ಮಾಡುವದರ ಮೇಲೆಯೂ ಗಗನಸಖಿಯರ  ಸಂಬಳ ನಿರ್ಧರಿತವಾಗುತ್ತದೆ. ಇದೀಗ ಯಾವ ಕಂಪನಿ ಹೆಚ್ಚು ಸಂಬಳ ನೀಡುತ್ತದೆ ಎಂಬುದರ  ಮಾಹಿತಿ ಇಲ್ಲಿದೆ.

ಪಾಕಿಸ್ತಾನ ತನ್ನ ಸೈನಿಕರಿಗೆ ಎಷ್ಟು ಸಂಬಳ ನೀಡುತ್ತೆ? ತಿಳಿದ ನಂತರ ನೀವು ಬೆಚ್ಚಿ ಬೀಳುತ್ತೀರಿ!

ವರದಿಗಳ ಪ್ರಕಾರ, ಸ್ವಿಸ್ ಏರ್‌ಲೈನ್ಸ್ ತನ್ನ ಕ್ಯಾಬಿನ್ ಕ್ರ್ಯೂಗೆ ಹೆಚ್ಚು ಸಂಬಳ ನೀಡುತ್ತದೆ. ಈ ಸಂಸ್ಥೆಯ ಗಗನಸಖಿಯರು  ವಾರ್ಷಿಕ ಅಂದಾಜು CHF 41,400 (40,84,180 ರೂಪಾಯಿ) ಸಂಬಳ ಪಡೆಯುತ್ತಾರೆ. ಇದಾದ ನಂತರ ಯುನೈಟೈಡ್ ಅರಬ್ ಎಮಿರೇಟ್ಸ್ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಮ್ ಏರ್‌ಲೈನ್ಸ್ ಇದೆ. ಸಂಬಳದ ಜೊತೆ ಬೋನಸ್ ಸೇರಿದಂತೆ ಹೆಚ್ಚುವರಿ ಭತ್ಯೆಗಳನ್ನು ಗಗನಸಖಿಯರು ಪಡೆದುಕೊಳ್ಳುತ್ತಾರೆ.

ಗಗನಸಖಿಯಾಗಲು ಮಾನ್ಯತೆ ಪಡೆದ ಕ್ಯಾಬಿನ್ ಸಿಬ್ಬಂದಿ ತರಬೇತಿ ಸಂಸ್ಥೆಯಿಂದ ತರಬೇತಿ ಕೋರ್ಸ್ ಮಾಡಬೇಕು. ನೀವು ಕೆಲಸ ಮಾಡಲು ಬಯಸುವ ಏರ್‌ಲೈನ್‌ನ ಕುರಿತು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು. ಏರ್‌ಲೈನ್‌ನ ವೆಬ್‌ಸೈಟ್‌ನಲ್ಲಿ ನೀಡಲಾದ ನೇಮಕಾತಿ ಪ್ರಕ್ರಿಯೆ ಮತ್ತು ಅರ್ಹತೆಗಳನ್ನು ಆಧರಿಸಿಯೇ ನೇಮಕ ಪ್ರಕ್ರಿಯೆ ನಡೆಯುತ್ತದೆ. ನವೀಕೃತ ಪಾಸ್‌ಪೋರ್ಟ್ ಹೊಂದಿರಬೇಕು. ವಿಶೇಷವಾಗಿ ನಿಮ್ಮ ಪಾಸ್‌ಪೋರ್ಟ್ ಅಥವಾ ವೀಸಾವನ್ನು ಯಾವುದೇ ದೇಶದಲ್ಲಿ ನಿರ್ಬಂಧಿಸಬಾರದು.

30 ಕೋಟಿಯ ಸಂಬಳ, ಜಸ್ಟ್ ಸ್ವಿಚ್ On/Off ಮಾಡೋದು, ಆದ್ರೂ ಈ ಕೆಲಸಕ್ಕೆ ಯಾರೂ ಬರಲ್ಲ!

click me!