30 ಕೋಟಿಯ ಸಂಬಳ, ಜಸ್ಟ್ ಸ್ವಿಚ್ On/Off ಮಾಡೋದು, ಆದ್ರೂ ಈ ಕೆಲಸಕ್ಕೆ ಯಾರೂ ಬರಲ್ಲ!

ಇಲ್ಲೊಂದು ಉದ್ಯೋಗವಿದ್ದು, 30  ಕೋಟಿ ರೂಪಾಯಿ ಸಂಬಳ ನೀಡಿದ್ರೂ ಈ ಕೆಲಸಕ್ಕೆ ಯಾರು ಬರುತ್ತಿಲ್ಲ. ಹಾಗಾದ್ರೆ ಯಾವುದು  ಆ ಕೆಲಸ? ಅಲ್ಲಿರುವ ಅಪಾಯಗಳೇನು ಎಂಬುದರ ಕುರಿತ  ಮಾಹಿತಿ ಇಲ್ಲಿದೆ.

Pharos Lighthouse Guard Job 30 crore rupees salary mrq

ನವದೆಹಲಿ: ಇಂದು ಕೆಲಸಕ್ಕಾಗಿ ಜನರು ಹುಡುಕಾಟ ನಡೆಸುತ್ತಿರುತ್ತಾರೆ. ಕೆಲಸ ಇದ್ದವರೂ  ಈ ಜಾಬ್ ಚೆನ್ನಾಗಿಲ್ಲ ಎಂದು ಗೊಣಗುತ್ತಿರುತ್ತಾರೆ. ಈ ಇಬ್ಬರ ನಡುವೆ ಮತ್ತೊಂದು ವರ್ಗದ ಜನರು ಕೆಲಸಕ್ಕೂ ಸೇರುವ ಮುನ್ನವೇ ಅದರ ಸಾಧಕ-ಬಾಧಕಗಳ ಬಗ್ಗ ಚರ್ಚೆ ನಡೆಸುತ್ತಿರುತ್ತಾರೆ. ಕೆಲವೊಂದು ಕೆಲಸಗಳು ಅಪಾಯಕಾರಿ ಅಂತ ಗೊತ್ತಿದ್ದರೂ ಎಷ್ಟೋ ಜನರು ಇಂತಹ ಸ್ಥಳದಲ್ಲಿಯೇ ಬದುಕು  ಕಟ್ಟಿಕೊಂಡಿದ್ದಾರೆ. ಆದರೆ ಇಂದು ನಾವು ಹೇಳುತ್ತಿರುವ ಕೆಲಸ ತುಂಬಾ ವಿಭಿನ್ನ ಮತ್ತು  ಕೋಟಿ ಕೋಟಿ ಸಂಬಳ.  ಆದರೂ ಈ ಕೆಲಸಕ್ಕೆ ಯಾರೂ ಬರಲ್ಲ.

ಕೋಟಿ ರೂಪಾಯಿ ಸಂಬಳ, ಇಷ್ಟೇ  ಸಮಯ ಕೆಲಸ ಮಾಡಬೇಕೆಂಬ  ಯಾವುದೇ ನಿಬಂಧನೆ ಇಲ್ಲ, ಯಾರು ಬಾಸ್ ಇಲ್ಲ ಎಂದು ಒಂದು ಕ್ಷಣ ಕಲ್ಪನೆ ಮಾಡಿಕೊಂಡ್ರೆ  ಎಷ್ಟು ಚೆಂದ ಅಲ್ಲವಾ ಅಂತ ಅನ್ನಿಸೋದು ಸಹಜ. ಆದ್ರೆ ಇಂತಹವುದು ನೌಕರಯಿದ್ದು, ಇಲ್ಲಿ  ನೀವು ಒಬ್ಬರೇ ಇರಬೇಕು. ಒಂಟಿಯಾಗಿದ್ದು, ಕೆಲಸ ಮಾಡಲು ಸಿದ್ಧರಿದ್ದರೆ ಈ ಕೆಲಸ ನಿಮಗೆ ಸಿಗುತ್ತದೆ. ನಾವು ಹೇಳುತ್ತಿರುವ ಕೆಲಸ ಯಾವುದೆಂದ್ರೆ ಈಜಿಪ್ತನ ಅಲೆಗ್ಸಾಂಡ್ರಿಯಾ ಬಂದರಿನಲ್ಲಿರುವ ಫಾರೊಸ್ ಲೈಟ್‌ಹೌಸ್ ಕೀಪರ್  ಜಾಬ್. ಇದು ವಿಶ್ವದ ಮೊದಲ ಲೈಟ್‌ಹೌಸ್ ಆಗಿದ್ದು, ಅತ್ಯಂತ ವಿಶೇಷ ವಿನ್ಯಾಸದಲ್ಲಿ ಇದನ್ನು ನಿರ್ಮಿಸಲಾಗಿದೆ.

ಈ ಲೈಟ್‌ಹೌಸ್ ಕೀಪರ್ ಪ್ರಮುಖ ಒಂದೇ ಒಂದು ಕೆಲಸ ಅಂದರೆ  ಮೇಲ್ಭಾಗದ ಲೈಟ್ ಬೆಳಗುವಂತೆ ನೋಡಿಕೊಳ್ಳುವುದು. ಹಗಲು ಅಥವಾ ರಾತ್ರಿಯಾಗಿರಲಿ ಲೈಟ್ ಮಾತ್ರ ಬೆಳಗುತ್ತಲೇ ಇರಬೇಕು. ಕೀಪರ್ ನಿದ್ದೆ ಮಾಡುತ್ತಿದ್ದರೂ, ಸಮುದ್ರದಲ್ಲಿ ಪ್ರಕ್ಷುಬ್ದತೆ ಉಂಟಾದರೂ ಲೈಟ್‌ಹೌಸ್ ದೀಪ ಎಂದಿಗೂ ಆಫ್ ಆಗದಂತೆ ನೋಡಿಕೊಳ್ಳಬೇಕು. ಈ ಕೆಲಸಕ್ಕಾಗಿ  30 ಕೋಟಿ ರೂಪಾಯಿ ಸಂಬಳ ನೀಡಲಾಗುತ್ತದೆ. ಆದರೂ ಈ ಕೆಲಸ   ಮಾಡಲು ಯಾರೂ ಮುಂದಾಗುವುದಿಲ್ಲ.

ಪಾಕಿಸ್ತಾನ ತನ್ನ ಸೈನಿಕರಿಗೆ ಎಷ್ಟು ಸಂಬಳ ನೀಡುತ್ತೆ? ತಿಳಿದ ನಂತರ ನೀವು ಬೆಚ್ಚಿ ಬೀಳುತ್ತೀರಿ!

ಇಷ್ಟು ದೊಡ್ಡಮೊತ್ತದ ಸಂಬಳ ನೀಡಿದರೂ ಜನರು ಯಾಕೆ ಈ ಕೆಲಸಕ್ಕೆ ಬರಲ್ಲ ಎಂದು ನೀವು ಯೋಚಿಸುತ್ತಿರಬೇಕು. ಕಾರಣ, ಈ ಲೈಟ್‌ಹೌಸ್‌ನಲ್ಲಿ ಒಬ್ಬರೇ ಇರಬೇಕು. ಸುತ್ತಮುತ್ತ ಹುಡುಕಿದ್ರೂ ನಿಮಗೆ ಯಾರೂ ಕಾಣಿಸಲ್ಲ. ಈ  ಲೈಟ್ ಹೌಸ್ ಸಮುದ್ರದ ಮಧ್ಯದಲ್ಲಿ ನಿರ್ಮಾಣಗೊಂಡಿದ್ದು,  ಸುತ್ತಲೂ ನೀರು ಇರುತ್ತದೆ.  ಸಮುದ್ರದ ದೊಡ್ಡ ಅಲೆಗಳು ಬಂದು ಲೈಟ್‌ಹೌಸ್‌ಗೆ ನಿರಂತರವಾಗಿ ಅಪ್ಪಳಿಸುತ್ತಿರುತ್ತವೆ. ಕೆಲವೊಮ್ಮೆ ವಾಯುಭಾರ ಕುಸಿತ, ಹವಾಮಾನದಲ್ಲಿ ವೈಪರೀತ್ಯ ಉಂಟಾದ್ರೆ ನೀರು ಲೈಟ್‌ಹೌಸ್‌ ಒಳಗಡೆ ನುಗ್ಗುತ್ತದೆ. ಇದರಿಂದ ಇಲ್ಲಿ ಕೆಲಸ ಮಾಡುವ ವ್ಯಕ್ತಿಯ  ಜೀವಕ್ಕೆ ಅಪಾಯವಿರುತ್ತದೆ. 

ಇಷ್ಟು ಅಪಾಯಕಾರಿ ಸ್ಥಳದಲ್ಲಿ  ಲೈಟ್ ಹೌಸ್ ನಿರ್ಮಿಸಿದ್ದೇಕೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಈ ಹಿಂದೆ ಬೃಹತ್ ಹಡಗುಗಳು ದೊಡ್ಡ ಕಲ್ಲು ಬಂಡೆಗಳಿಗೆ ಡಿಕ್ಕಿಯಾಗಿ ಮುಳುಗುತ್ತಿದ್ದವು. ಇದನ್ನು ತಪ್ಪಿಸಲು ಲೈಟ್‌ಹೌಸ್ ನಿರ್ಮಾಣ ಮಾಡಲಾಯ್ತು. ಇದರ ಬೆಳಕು ಸುತ್ತಲೂ ಪಸರಿಸುವ ಕಾರಣ, ಹಡಗುಗಳು ಮುಳುಗೋದು  ತಪ್ಪಿಸಲಾಗುತ್ತಿತ್ತು. ಇಂದು ತಂತ್ರಜ್ಞಾನದ ಸಹಾಯದಿಂದ  ಮುಂದಿನ ಮಾರ್ಗ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಫರೋಸ್ ಲೈಟ್‌ಹೌಸ್ ನಿರ್ಮಾಣಕ್ಕಾಗಿ ಹಲವು ವರ್ಷ ತೆಗೆದುಕೊಳ್ಳಲಾಯ್ತು. ಇಂದಿಗೂ ಲೈಟ್ ಹೌಸ್ ಚಾಲ್ತಿಯಲ್ಲಿದೆ. 

5 ಸ್ವಿಸ್ ಬ್ಯಾಂಕ್‌ಗಳಲ್ಲಿದ್ದ 2575 ಕೋಟಿ ರೂ. ಅದಾನಿ ಹಣ ಜಪ್ತಿ

Latest Videos
Follow Us:
Download App:
  • android
  • ios