ಈ ಘಟಕದಿಂದ ದೇಶದ 1,200ಕ್ಕೂ ಹೆಚ್ಚಿನ ವಿಮಾನಯಾನ ಕ್ಷೇತ್ರದ ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ. ಜೊತೆಗೆ ರಾಜ್ಯದ 200ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ಪೂರಕವಾಗಿರಲಿದೆ. ಮುಖ್ಯವಾಗಿ ರಾಜ್ಯವು ಜಾಗತಿಕವಾಗಿ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮುವಲ್ಲಿ ಈ ಘಟಕ ಪ್ರಮುಖ ಪಾತ್ರ ವಹಿಸಲಿದೆ.
ಬೆಂಗಳೂರು(ಸೆ.05): ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೆ 35 ಎಕರೆ ಪ್ರದೇಶದಲ್ಲಿ ತನ್ನ ವಿಮಾನ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣ ಸಂಬಂಧ ಬೃಹತ್ ಘಟಕ (ಎಂಆರ್‌ಒ) ನಿರ್ಮಾಣಕ್ಕೆ ಬುಧವಾರ ಚಾಲನೆ ನೀಡಿದ್ದು, ಶೀಘ್ರವೇ ಇದು ಕಾರ್ಯಾರಂಭ ಮಾಡಲಿದೆ.
ಇದೇ ವರ್ಷದ ಆರಂಭದಲ್ಲಿ ಎಂಆರ್‌ಒ ಕೇಂದ್ರ ನಿರ್ಮಾಣಕ್ಕಾಗಿ ಏರ್ ಇಂಡಿಯಾ ರಾಜ್ಯ ಸರ್ಕಾರದ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು. ಈ ಘಟಕದಿಂದ ದೇಶದ 1,200ಕ್ಕೂ ಹೆಚ್ಚಿನ ವಿಮಾನಯಾನ ಕ್ಷೇತ್ರದ ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ. ಜೊತೆಗೆ ರಾಜ್ಯದ 200ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ಪೂರಕವಾಗಿರಲಿದೆ. ಮುಖ್ಯವಾಗಿ ರಾಜ್ಯವು ಜಾಗತಿಕವಾಗಿ ವಿಮಾನಯಾನ ಕೇಂದ್ರವಾಗಿ ಹೊರಹೊಮ್ಮುವಲ್ಲಿ ಈ ಘಟಕ ಪ್ರಮುಖ ಪಾತ್ರ ವಹಿಸಲಿದೆ.
undefined
ಇಂಟರ್ನ್‌ಶಿಪ್‌ಗೆ ರಾಜೀನಾಮೆ ನೀಡಿದ ಬೆಂಗಳೂರು ವಿದ್ಯಾರ್ಥಿ, ಕಾರಣ ಕೇಳಿದ ಬಾಸ್‌ಗೆ ಅಚ್ಚರಿ!
ಅದ್ಧೂರಿ ಕಾರ್ಯಕ್ರಮದಲ್ಲಿ ಎಂಆರ್‌ಒ ಘಟಕ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು. ಏರ್ ಇಂಡಿಯಾ ತನ್ನ ವಿಮಾನಗಳನ್ನು ಆಧುನೀಕರಿಸುತ್ತಿದ್ದು, ಜೊತೆಗೆ ಜಾಗತಿಕ ಕಾರ್ಯಾಚರಣೆ ವಿಸ್ತರಿಸುತ್ತಿದೆ. ಈ ಹಿನ್ನಲೆಯಲ್ಲಿ ಎಂಆರ್‌ಸಿ ಘಟಕವು ಏರ್‌ಇಂಡಿಯಾ ಗ್ರೂಪ್ ಏರ್‌ಲೈನ್ ವಿಮಾನಗಳ ನಿರ್ವಹಣಾ ಸೇವೆ ಗಳಿಗೆ ಪ್ರಮುಖ ಕೇಂದ್ರವಾಗಿರಲಿದೆ.
ಕೈಗಾರಿಕಾ ಅಭಿವೃದ್ಧಿ ಆಯುಕ್ತ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕಿ ಗುಂಜನ್ ಕೃಷ್ಣ ನಿರ್ಮಾಣ ಆಗುತ್ತಿರುವುದು ಮೈಲಿಗಲ್ಲು, ಏರ್‌ಇಂಡಿ ಯಾದ ಈ ತ್ವರಿತ ನಿರ್ಧಾರ ಸ್ವಾಗತಾರ್ಹ, ಇದು ಬೆಳೆಯುತ್ತಿರುವ ಭಾರತದ ವಿಮಾನಯಾನ ಕ್ಷೇತ್ರಕ್ಕೆ ಮಾತ್ರ ಪೂರಕವಾಗಿರಲಿದೆ. ಅಲ್ಲದೆ ಕರ್ನಾಟಕ ರಾಜ್ಯಕ್ಕೂ ಸಹ ಮಹತ್ವದ ಬೆಳವಣಿಗೆಯಾಗಿದೆ ಎಂದರು.
ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿ. (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, ರಾಜ್ಯದಲ್ಲಿ ಎಂಆರ್‌ಒ ಘಟಕ 'ಕೆಂಪೇಗೌಡ ವಿಮಾನ ನಿಲ್ದಾಣ ದೇಶದ ಪ್ರಮುಖ ವಿಮಾನಯಾನ ಕೇಂದ್ರವಾಗಿ ಬೆಳೆಯುವಲ್ಲಿ ಇದು ಪ್ರಮುಖ ಹೆಜ್ಜೆ ಯಾಗಿದೆ. ಎಂಆರ್‌ಒ ಕೇಂದ್ರ ಪ್ರಾದೇಶಿಕ ಸಂಪರ್ಕ ಹೆಚ್ಚಿಸುವುದು ಮಾತ್ರವಲ್ಲ, ಸ್ಥಳೀಯ ಪ್ರತಿಭೆ ಮತ್ತು ವಹಿದಾಟುಗಳಿಗೆ ಅವಕಾಶ ಸೃಷ್ಟಿಸಲಿದೆ' ಎಂದರು.
ಏರ್ ಇಂಡಿಯಾದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಮಾತನಾಡಿ, 'ಭಾರತದ ವಿಮಾನಯಾನ ಕ್ಷೇತ್ರ ಗಮನಾರ್ಹ ಬೆಳವಣಿಗೆ ಪಥದಲ್ಲಿದೆ. ಇದರಲ್ಲಿ ಏರ್ ಇಂಡಿಯಾ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಬೆಂಗಳೂರು 'ಎಂಆರ್‌ಒ' ಸೌಲಭ್ಯವು ಭಾರತದ ವಿಮಾನಯಾನ ಸೌಲಭ್ಯವನ್ನು ಬಲಪಡಿಸಲಿದೆ. ಏರ್ ಇಂಡಿಯಾವನ್ನು ವಿಶ್ವ ದರ್ಜೆಯ ವಿಮಾನಯಾನ ಸಂಸ್ಥೆಯನ್ನಾಗಿ ಬೆಳೆಸುವಲ್ಲಿ ಇದು ಅತ್ಯಂತ ಮುಖ್ಯ ಹೆಜ್ಜೆಯಾಗಿದೆ' ಎಂದು ಹೇಳಿದರು.
ಮನೆಯಲ್ಲಿ 7 ಗಂಟೆ ನಡೆದಾಡಿ ದಿನಕ್ಕೆ 28,000 ರೂ ಸಂಪಾದಿಸಿ, ಟೆಸ್ಲಾ ಉದ್ಯೋಗ ಆಫರ್!
ಎಂಆರ್‌ಒ ಘಟಕದ ವಿಶೇಷತೆಗಳು ವಿಶ್ವದರ್ಜೆಯ ವಿಮಾನ ನಿರ್ವಹಣಾ ತಂತ್ರಜ್ಞಾನ ಹೊಂದಿದ ಸುಸಜ್ಜಿತ ಎಂಆರ್ಒ ಘಟಕ ನಿರ್ಮಾಣ ಆಗಲಿದೆ. ಒಂದೇ ಚಾವಣಿಯಡಿ ಚಿಕ್ಕ ಹಾಗೂ ದೊಡ್ಡ ಗಾತ್ರದ ವಿಮಾನಗಳನ್ನು ಇರಿಸುವ ಮೆಗಾ ಹ್ಯಾಂಗರ್ ಸೌಲಭ್ಯ ಹೊಂದಿರಲಿದೆ. ಪೇಂಟ್ ಹ್ಯಾಂಗರ್ ಸೇರಿ ಹೆಚ್ಚಿನ ವಿಮಾನಗಳ ಸೇವೆಗಾಗಿ ಹೆಚ್ಚುವರಿ ಹ್ಯಾಂಗರ್ ಗಳನ್ನು ಸೇರ್ಪಡೆ ಮಾಡಲು ಅವಕಾಶ ಇಟ್ಟುಕೊಳ್ಳಲಾಗುವುದು. ಈ 'ಎಂಆರ್‌ಒ' ಘಟಕ ಅಭಿವೃದ್ಧಿಪಡಿಸಲು ಏರ್ ಇಂಡಿಯಾವು ಎಸ್‌ಐಎ ಎಂಜಿನಿಯರಿಂಗ್ ಕಂಪನಿ ಜೊತೆಗೆ ಒಪಂದ ಮಾಡಿಕೊಂಡಿದೆ.
ತರಬೇತಿ ಸಂಸ್ಥೆ:
ಇದಲ್ಲದೆ, ಏರ್ ಇಂಡಿಯಾ 2025ರಲ್ಲಿ ಬೆಂಗಳೂರಿನಲ್ಲಿ ವಿಮಾನ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಚಟುವಟಿಕೆಗೆ ನಿರ್ವಹಣಾ ತರಬೇತಿ ಸಂಸ್ಥೆಯನ್ನು (ಬಿಎಂಟಿಒ) ಆರಂಭಿಸಲು ಯೋಜಿಸಿದೆ. ಇದು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣೀಕೃತ ವಿಮಾನಯಾನ ಎಂಜಿನಿಯರ್ ತರಬೇತಿ ಪಡೆಯುವ ಅವಕಾಶ ಕಲ್ಪಿಸಲಿದೆ.