ಈ ಬಾರಿ ಸ್ಯಾಲರಿ ಹೈಕ್ ಇಲ್ಲ, 33,000 ರೂ ಟಿಶರ್ಟ್ ಧರಿಸಿ ಮೀಟಿಂಗ್‌ನಲ್ಲಿ ಶಾಕ್ ನೀಡಿದ ಬೆಂಗಳೂರು ಸಿಇಒ!

By Chethan Kumar  |  First Published Aug 6, 2024, 4:31 PM IST

ಗುರಿ ಮುಟ್ಟಿಲ್ಲ. ಹೀಗಾಗಿ ಈ ಬಾರಿ ಯಾರಿಗೂ ಸ್ಯಾಲರಿ ಹೈಕ್ ಇಲ್ಲ ಎಂದು ಕಂಪನಿ ಸಿಇಒ ಮೀಟಿಂಗ್‌ನಲ್ಲಿ ಹೇಳಿದ್ದಾರೆ. ಆದರೆ ಸಿಇಒ ಮಾತು ಹಾಗೂ ನಡೆಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದೆ. ಮೀಟಿಂಗ್‌ಗೆ ಬರೋಬ್ಬರಿ 33,000 ರೂಪಾಯಿ ಟಿ ಶರ್ಟ್ ಧರಿಸಿ ಬಂದ ಸಿಇಒ, ಉದ್ಯೋಗಿಗಳಿಗೆ ಎರೆಡೆರಡು ಸಾವಿರ ಹೈಕ್ ಕೊಡೋಕೆ ಅಳುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
 


ಬೆಂಗಳೂರು(ಆ.06) ಖಾಸಗಿ ಕಂಪನಿಗಳ ವೇತನ ಹೆಚ್ಚಳ ಕುರಿತು ಈಗಾಗಲೇ ಹಲವು ಮೀಮ್ಸ್, ಟ್ರೋಲ್‌ಗಳು ಹರಿದಾಡುತ್ತಿದೆ. ಅಪ್ರೈಸಲ್ ಪ್ರಕ್ರಿಯೆ, ವೇತನ ಹೆಚ್ಚಳ ಮೊತ್ತ ಹೀಗೆ ಹಲವು ವಿಚಾರಗಳು ಪ್ರತಿ ಬಾರಿ ಟ್ರೋಲ್ ಆಗುತ್ತವೆ. ಇದೀಗ ಬೆಂಗಳೂರಿನ ಕಂಪನಿಯ ಸಿಇಒ ಇದೀಗ ಇದೇ ಸ್ಯಾಲರಿ ಹೈಕ್ ವಿಚಾರದಲ್ಲಿ ಟ್ರೋಲ್ ಜೊತೆ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಕಂಪನಿ ಸಿಇಒ ಮೀಟಿಂಗ್‌ನಲ್ಲಿ ಈ ಬಾರಿ ಯಾರಿಗೂ ವೇತನ ಹೆಚ್ಚಳ ಇಲ್ಲ ಎಂದಿದ್ದಾರೆ. ಆದರೆ ಸಿಇಒ ಬರೋಬ್ಬರಿ 33,000 ರೂಪಾಯಿ ಟಿ ಶರ್ಟ್ ಧರಿಸಿ ಬಂದು ಮೀಟಿಂಗ್‌ನಲ್ಲಿ ಈ ಮಾತನ್ನು ಹೇಳಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ. ಇದರಲ್ಲಿ ಉದ್ಯೋಗಿಗಳಿಗೆ ಎರಡೆರಡು ಸಾವಿರ ವೇತನ ಹೆಚ್ಚಳ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಆನ್‌ಲೈನ್ ಶಿಕ್ಷಣ ಕಂಪನಿ ಅನ್‌ಅಕಾಡೆಮಿ ಸಿಇಒ ಗೌರವ್ ಮುಂಜಾಲ್ ಇದೀಗ ಭಾರಿ ಸದ್ದು ಮಾಡಿದ್ದಾರೆ. ಅನ್‌ಅಕಾಡೆಮಿ ಕಂಪನಿ ಕೆಲ ತಿಂಗಳ ಹಿಂದೆ ವೇತನ ಹೆಚ್ಚಳ ಪ್ರಕ್ರಿಯೆ ಆರಂಭಿಸಿತ್ತು. ಆದರೆ ಏಕಾಏಕಿ ಈ ಪ್ರಕ್ರಿಯೆಯನ್ನು ನಿಲ್ಲಿಸಿತ್ತು. ಹೀಗಾಗಿ ಉದ್ಯೋಗಿಗಳಲ್ಲಿ ಅನುಮಾನ ಹೆಚ್ಚಾಗತೊಡಗಿತ್ತು. ಇದರ ನಡುವೆ ಸಿಇಒ ಗೌರವ್ ಮುಂಜಾಲ್ ಟೌನ್ ಹಾಲ್ ಮೀಟಿಂಗ್ ಕರೆದಿದ್ದಾರೆ. ವೇತನ ಹೆಚ್ಚಳ ಕುರಿತು ಈ ಸಭೆಯಲ್ಲಿ ಘೋಷಣೆ ಮಾಡಲಿದ್ದಾರೆ. ಕೆಲ ತಾಂತ್ರಿಕ ಕಾರಣಗಳಿಂದ ವೇತನ ಹೆಚ್ಚಳ ಪ್ರಕ್ರಿಯೆ ವಿಳಂಬವಾಗಿದೆ. ಈ ತಿಂಗಳ ವೇತನದಲ್ಲಿ ಹೈಕ್ ವೇತನ ಸಿಗಲಿದೆ ಅನ್ನೋ ಘೋಷಣೆಯಾಗಲಿದೆ ಎಂದು ಉದ್ಯೋಗಿಗಳು ಭಾರಿ ಕುತೂಹಲದೊಂದಿಗೆ ಸಭೆಗೆ ಹಾಜರಾಗಿದ್ದರೆ.

Tap to resize

Latest Videos

undefined

.ನೌಕರಿ ಜೊತೆ ಹುಲ್ಲು ಬೆಳೆದರೆ ಸಾಕು, ಶೇ.100 ರಷ್ಟು ಟ್ಯಾಕ್ಸ್ ಉಳಿತಾಯ ಟಿಪ್ಸ್ ನೀಡಿದ ವೈರಲ್ ಸಿಎ!

ಟೌನ್ ಹಾಲ್ ಮೀಟಿಂಗ್ ಆರಂಭದಲ್ಲೇ  ಸಿಇಒ ಮುಂಜಾಲ್, ಈ ಬಾರಿ ಕಂಪನಿ ಗುರಿ ಮಟ್ಟಲು ಸಾಧ್ಯವಾಗಿಲ್ಲ. 2023ರ ಸಾಲಿನಲ್ಲಿ ಕಂಪನಿ ಸರಾಸರಿಯಲ್ಲಿ ಸಾಗಿದೆ. ಇನ್ನು 2024 ಕೂಡ ನಮ್ಮ ಪರವಾಗಿ ಬಂದಿಲ್ಲ. ಟಾರ್ಗೆಟ್ ರೀಚ್ ಆಗಿಲ್ಲ. ಸವಾಲುಗಳು ಹೆಚ್ಚಾಗುತ್ತಿದೆ. ಸಾಕಷ್ಟು ದೂರ ಸಾಗಬೇಕಿದೆ ಎಂದು ಭಾಷಣ ಶುರುಮಾಡಿದ್ದಾರೆ. ಸುದೀರ್ಘ ಭಾಷಣದ ಬಳಿಕ, ಕಂಪನಿ ಮುಂದುವರಿಯಲು, ಆರ್ಥಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ನಾವು ಸಿದ್ಧರಾಗಬೇಕಿದೆ. ಹೀಗಾಗಿ ಈ ಬಾರಿ ಯಾರಿಗೂ ವೇತನ ಹೆಚ್ಚಳ ಇಲ್ಲ ಎಂದಿದ್ದಾರೆ

3 ತಿಂಗಳ ಹಿಂದೆ ವೇತನ ಹೆಚ್ಚಳ ಪ್ರಕ್ರಿಯೆ ಆರಂಭಿಸುತ್ತಿದ್ದೇವೆ ಎಂದು ಹೇಳಿದ್ದೇವೆ. ಆದರೆ ಈ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೀದ್ದೇನೆ. ಕಳೆದ ಎರಡು ವರ್ಷದಿಂದ ವೇತನ ಹೆಚ್ಚಳ ನೀಡಲು ಸಾಧ್ಯವಾಗಿಲ್ಲ ಎಂದಿದ್ದಾರೆ. ಸಿಇಒ ಮೀಟಿಂಗ್ ಬಳಿಕ ಗೌರವ್ ಮುಂಜಾಲ್ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೀಟಿಂಗ್ ವಿಡಿಯೋ ರೆಡಿಟ್‌ನಲ್ಲಿ ಹಂಚಿಕೊಳ್ಳಲಾಗಿದೆ.  ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದಾರೆ.  33 ಸಾವಿರ ಟಿ ಶರ್ಟ್ ಧರಿಸಿ ಬಂದು ಈ ರೀತಿ ಅಪ್ರೈಸಲ್ ಇಲ್ಲ ಹೇಳುವ ಬದಲು, ಅದೇ ದುಡ್ಡಲ್ಲಿ ವೇತನ ಹೈಕ್ ನೀಡಬಹುದಿತ್ತು ಎಂದಿದ್ದಾರೆ.

ಎಲ್ಲೆಡೆ ಟ್ರೆಂಡ್ ಆಗುತ್ತಿದೆ ನಗ್ನ ರಾಜೀನಾಮೆ, ಏನಿದು ನಿದ್ದೆಗೆಡಿಸಿದ ನೇಕೆಡ್ ರಿಸಿಗ್ನೇಶನ್?


 

Unacademy CEO shares news of no appraisal year while wearing a $400 tshirt
byu/Beneficial-Ad-9123 inStartUpIndia
click me!