ಇಂಟರ್ನ್‌‌ಶಿಪ್‌ಗೆ ರಾಜೀನಾಮೆ ನೀಡಿದ ಬೆಂಗಳೂರು ವಿದ್ಯಾರ್ಥಿ, ಕಾರಣ ಕೇಳಿದ ಬಾಸ್‌ಗೆ ಅಚ್ಚರಿ!

By Chethan Kumar  |  First Published Sep 3, 2024, 7:29 PM IST

ವಿದ್ಯಾರ್ಥಿಗಳು ಪದವಿ, ಎಂಜಿನೀಯರಿಂಗ್, ಕೋರ್ಸ್ ಮುಗಿಸಿ ಕಂಪನಿಗಳಲ್ಲಿ ತರಬೇತಿಗಾಗಿ ಆಗಮಿಸುತ್ತಾರೆ. ಕೆಲ ತಿಂಗಳು ಇಂಟರ್ನ್‌ಶಿಪ್ ಮಾಡಿದ ಬಳಿಕ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಹೀಗೆ ಇಂಟರ್ನ್‌ಶಿಪ್‌ಗೆ ಬೆಂಗಳೂರಿನ ಟೆಕ್ ಕಂಪನಿಗೆ ಆಗಮಿಸಿದ ವಿದ್ಯಾರ್ಥಿ, ಕೆಲ ದಿನಗಳಲ್ಲೇ ನಾಪತ್ತೆಯಾಗಿದ್ದ. ಕಾರಣ ಕೇಳಿದ ಬಾಸ್‌ಗೆ ಅಚ್ಚರಿಯಾಗಿದೆ.


ಬೆಂಗಳೂರು(ಸೆ.03) ವಿದ್ಯಭ್ಯಾಸದ ನಡುವೆ, ವಿದ್ಯಾಭ್ಯಾಸ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಇಂಂಟರ್ನ್‌ಶಿಪ್ ಮಾಡಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಟೆಕ್, ಕೈಗಾರಿಕೆ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಹೊಸದಾಗಿ ಕೆಲಸಕ್ಕೆ ಸೇರುವ ಫ್ರೆಶರ್ಸ್‌ಗೆ ಇಂಟರ್ನ್‌ಶಿಪ್ ಅತ್ಯವಶ್ಯಕ.  ಹೀಗೆ ಬೆಂಗಳೂರಿನ ಎಂಜಿನೀಯರಿಂಗ್ ವಿದ್ಯಾರ್ಥಿ ಟೆಕ್ ಕಂಪನಿಯಲ್ಲಿ ಇಂಟರ್ನ್‌ಶಿಪ್‌ಗೆ ಸೇರಿಕೊಂಡಿದ್ದಾನೆ. ಕೆಲವೇ ದಿನಗಳಲ್ಲಿ ಈತ ನಾಪತ್ತೆಯಾಗಿದ್ದಾನೆ. ಈ ಕುರಿತು ಕಂಪನಿ ಬಾಸ್, ವ್ಯಾಟ್ಸಾಪ್ ಮೆಸೇಜ್ ಮೂಲಕ ವಿಚಾರಿಸಿದಾಗ ಅಚ್ಚರಿಯಾಗಿದೆ. ಈ ವೇಳೆ ಕ್ಷಮಿಸಿ, ನಾನು ಇಂಟರ್ನ್‌ಶಿಪ್ ಮಾಡುವುದಿಲ್ಲ. ನನ್ನ ಎಐ ಸ್ಟಾರ್ಟ್ಅಪ್ ಕಂಪನಿಗೆ ಬಂಡವಾಳ ಹರಿದು ಬಂದಿದೆ ಎಂದು ಪ್ರತಿಕ್ರಿಯಿಸಿದ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣಾಗಿದೆ.

ಫ್ಲೆಕ್ಸಿಪಲ್ ಕಂಪನಿಯ ಸಿಇಒ ಕಾರ್ತಿಕ್ ಶ್ರೀಧರನ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ಇದು ಕೇವಲ ಬೆಂಗಳೂರಿನಲ್ಲಿ ಮಾತ್ರ ಎಂದು ಬರೆದು, ಈ ಕುರಿತ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿ ಆರಂಭದಲ್ಲಿ ಕಾಲೇಜಿನ ಮುಖಾಂತರ ಕಂಪನಿ ಸಿಇಒ ಕಾರ್ತಿಕ್ ಶ್ರೀಧರನ್ ಭೇಟಿಯಾಗಿದ್ದಾರೆ. ಇಂಟರ್ನ್‌ಶಿಪ್‌ಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದ. 

Latest Videos

undefined

ಸ್ಕೂಟರ್‌ನಲ್ಲಿ ತೆರಳುತ್ತಾ ಲ್ಯಾಪ್‌ಟಾಪ್ ಮೂಲಕ ವಿಡಿಯೋ ಮೀಟಿಂಗ್,ಬೆಂಗಳೂರಿನ ಬ್ಯೂಸಿ ಲೈಫ್ Video!

ವಿದ್ಯಾರ್ಥಿಯ ಮನವಿಗೆ ಸ್ಪಂದಿಸಿದ ಸಿಇಒ ಇಂಟರ್ನ್‌ಶಿಪ್ ಕಲಿಕೆಗೆ ಅವಕಾಶ ಮಾಡಿಕೊಟ್ಟಿದ್ದರು. ಕೆಲ ದಿನಗಳ ವರೆಗೆ ಕಂಪನಿಗೆ ಆಗಮಿಸಿದ ವಿದ್ಯಾರ್ಥಿ ಕಳೆದ ಶುಕ್ರವಾರದಿಂದ ನಾಪತ್ತೆ. ಕಂಪನಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಸೋಮವಾರ ಬಂದರೆ ವಿದ್ಯಾರ್ಥಿಯ ಸುಳಿವಿಲ್ಲ. ಹೀಗಾಗಿ ಕಾರ್ತಿಕ್ ಶ್ರೀಧರನ್ ಈ ಕುರಿತು ವ್ಯಾಟ್ಸಾಪ್ ಮೂಲಕ ಕೇಳಿದ್ದಾರೆ. ಕಳೆದ ಶುಕ್ರವಾರ ಏನಾಗಿತ್ತು? ಕಚೇರಿಯಲ್ಲಿ ಕಾಣಲಿಲ್ಲ ಎಂದು ಮೆಸೇಜ್ ಮಾಡಿದ್ದಾರೆ. ಇದಕ್ಕೆ ವಿದ್ಯಾರ್ಥಿ ಪ್ರತಿಕ್ರಿಯೆ ಇದೀಗ ಚರ್ಚಾ ವಿಷಯವಾಗಿದೆ.

ಕ್ಷಮಿಸಿ, ನಾನು ಶುಕ್ರವಾರ ರಜೆ ತೆಗೆದುಕೊಂಡಿದ್ದೆ. ಕಾರಣ ವಿಸಿ ಜೊತೆ ಮುಖ್ಯವಾದ ಮೀಟಿಂಗ್ ನಿಗದಿಯಾಗಿತ್ತು. ನನ್ನ ಎಐ(ಆರ್ಟಿಫೀಶಿಯಲ್ ಇಂಟಲಿಜೆನ್ಸ್) ಸ್ಟಾರ್ಟ್ಅಪ್‌ಗೆ ಬಂಡವಾಳ ಹರಿದು ಬಂದಿದೆ. ನನಗಿನ್ನು ಇಂಟರ್ನ್‌ಶಿಪ್ ಅಗತ್ಯವಿಲ್ಲ ಎಂದು ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾನೆ. ಈ ಉತ್ತರ ನೋಡಿ ಬಾಸ್ ಕಂಗಾಲಾಗಿದ್ದಾರೆ.

 

This only happens in Bangalore - pic.twitter.com/KtfB6dhJl5

— Karthik Sridharan (@KarthikS2206)

 

ಸ್ಕ್ರೀನ್ ಶಾಟ್ ಹಂಚಿಕೊಂಡ ಬೆನ್ನಲ್ಲೇ ಹಲವರು ಕಮೆಂಟ್ಸ್ ಮಾಡಿದ್ದಾರೆ. ಸ್ಟಾರ್ಟ್ ಅಪ್‌ಗೆ ಬಂಡವಾಳ ಹರಿದು ಬಂದಿರುವುದು, ಹೊಸ ಉದ್ಯಮ ಆರಂಭವಾಗುತ್ತಿರುವುದು ಉತ್ತಮ. ಆದರೆ ಪ್ರತಿಕ್ರಿಯೆ, ಮಾತನಾಡುವ ಶೈಲಿ, ವಿನಯ ಮಾತ್ರ ಕಾಣುತ್ತಿಲ್ಲ. ಹೀಗಿದ್ದರೆ ಹೊಸ ಕಂಪನಿ ಮುನ್ನಡೆಯಲ್ಲ. ವಿದ್ಯಾರ್ಥಿಗೆ ಇಂಟರ್ನ್‌ಶಿಪ್ ಅವಕಾಶ ಮಾಡಿಕೊಟ್ಟಿದ್ದೇ ತಪ್ಪಾಯ್ತು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಭವಿಷ್ಯದಲ್ಲಿ ಇದಕ್ಕಿಂತ ಕೆಟ್ಟ ಅನುಭವ ಆತನ ಎಐ ಸ್ಟಾರ್ಟ್ಅಪ್ ಕಂಪನಿಯಲ್ಲೂ ಆಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಪೇಪರ್ ಬ್ಯಾಗನ್ನೇ ಹೆಲ್ಮೆಟ್ ಆಗಿ ಬಳಸಿದ ಸವಾರ, ಶೇ.100 ರಷ್ಟು ಮರುಬಳಕೆ ಎಂದ ಜನ!
 

click me!