ಈ ಪ್ರತಿಷ್ಠಿತ ಕಂಪನಿಯಲ್ಲಿ ವಾರದಲ್ಲಿ 15 ರಿಂದ 20 ಗಂಟೆ ಕೆಲಸ, ಸಂಬಳ 2.5 ಕೋಟಿ ರೂ!

By Chethan Kumar  |  First Published Oct 1, 2024, 3:49 PM IST

ನಿಮಗೆ ಪ್ರತಿಭೆ ಇದ್ದರೆ ಪ್ರತಿಷ್ಠಿತ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಸಾಕು, ಲೈಫ್ ಆರಾಮ. ಇಲ್ಲಿ ವಾರದಲ್ಲಿ 15 ರಿಂದ 20 ಗಂಟೆ ಕೆಲಸ. ವಾರ್ಷಿಕ ಸ್ಯಾಲರಿ 2.5 ಕೋಟಿ ರೂಪಾಯಿ. 


ಕೆಲಸ ಮಾಡಬೇಕು, ಕೈ ತುಂಬ ಸಂಬಳ ಬೇಕು. ಇಷ್ಟೇ ಇದ್ದರೆ ಸಾಲದು, ಲೈಫ್ ಎಂಜಾಯ್ ಮಾಡಲು ರಜೆ ಸೇರಿದಂತೆ ಸಮಯ ಇರಬೇಕು. ಸದ್ಯ ಹೇಗೆಂದರೆ ಸಮಯವಿದೆ ಎಂದರೆ ಸ್ಯಾಲರಿ ಕಡಿಮೆ ಇರುತ್ತೆ, ವೇತನ ಹೆಚ್ಚಾದಾಗ ರಜೆ, ಸಮಯವೂ ಇರಲ್ಲ. ಆದರೆ ಪ್ರತಿಷ್ಠಿತ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಉದ್ಯೋಗಿಯೊಬ್ಬ ವಾರದಲ್ಲಿ 15 ರಿಂದ 20 ಗಂಟೆ ಮಾತ್ರ ಕೆಲಸ ಮಾಡುತ್ತಾನೆ. ಆದರೆ ಈತನ ವೇತನ ಬರೋಬ್ಬರಿ 2.5 ಕೋಟಿ ರೂಪಾಯಿ. ಕೈತುಂಬ ಸ್ಯಾಲರಿ, ಅದಕ್ಕಿಂತ ಹೆಚ್ಚು ರಜೆ, ಹೀಗಾಗಿ ಲೀಗ್ ಗೇಮ್, ಪ್ರವಾಸ, ಪಾರ್ಟಿ ಅಂತಾ ಲೈಫ್ ಎಂಜಾಯ್ ಮಾಡುತ್ತಿದ್ದಾನೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಈ ವಿಭಾಗದಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಜಗತ್ತೆ ನಿಮ್ಮ ಕೈಯಲ್ಲಿರಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ರೋನಾ ವಾಂಗ್ ಅನ್ನೋ ಮಹಿಳೆ ತಮ್ಮ ಎಕ್ಸ್ ಖಾತೆಯಲ್ಲಿ ಗೆಳೆಯನ ಕೆಲಸ ಹಾಗೂ ವೇತನ ಕುರಿತು ಮಾಹಿತಿ ನೀಡಿದ್ದಾಳೆ. ನನ್ನ ಗೆಳೆಯ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆತ ಹೆಚ್ಚೆಂದರೆ ವಾರದಲ್ಲಿ 15 ರಿಂದ 20 ಗಂಟೆ ಕೆಲಸ ಮಾಡುತ್ತಾನೆ. ಇನ್ನುಳಿದ ಸಮಯದಲ್ಲಿ ಲೀಗ್ ಗೇಮ್ ಆಡುತ್ತಾನೆ. ಆದರೆ ಆತನ ವೇತನ 3,00,000 ಅಮೆರಿಕನ್ ಡಾಲರ್.  ಭಾರತೀಯ ರೂಪಾಯಿಗಳಲ್ಲಿ 2.5 ಕೋಟಿ ರೂಪಾಯಿ ಎಂದು ರೋನಾ ವಾಂಗ್ ಟ್ವೀಟ್ ಮಾಡಿದ್ದಾರೆ.

Latest Videos

undefined

ಏಕಾಏಕಿ ಕೆಲಸ ಕಳೆದುಕೊಂಡರೆ ನಿಭಾಯಿಸುವುದು ಹೇಗೆ? ಇಲ್ಲಿದೆ ಹಣಕಾಸು ಸಲಹೆ!

ಈ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ಹಲವರು ನಿಮ್ಮಲ್ಲಿ ಪ್ರತಿಭ ಇದ್ದರೆ, ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಸಮಯ ಮಿತಿಯೊಳಗೆ ಮಾಡಲು ಗೊತ್ತಿದ್ದರೆ ಬೇಡಿಕೆ ದುಪ್ಪಟ್ಟು. ಈ ಪ್ರತಿಭೆ ನಿಮ್ಮಲ್ಲಿದ್ದರೆ ಕಾರ್ಪೋರೇಟ್ ಕಂಪನಿಗಳು ನೀವು ಕೇಳಿದಷ್ಟು ವೇತನ ನೀಡಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಬಹುತೇಕರು ನಿಮ್ಮ ಕಂಪನಿಯಲ್ಲಿ ಉದ್ಯೋಗ ಅವಕಾಶವಿದೆಯಾ ಎಂದು ಕೇಳಿದ್ದಾರೆ. ನಿಮ್ಮ ಗೆಳೆಯನ ಅಸಿಸ್ಟೆಂಟ್ ಕೆಲಸವಿದ್ದರೂ ಹೇಳಿ, ವಾರದಲ್ಲಿ 25 ರಿಂದ 30 ಗಂಟೆ ಕೆಲಸ ಮಾಡುತ್ತೇವೆ ಎಂದು ಪ್ರತಿಕ್ರಿಯೆಸಿದ್ದಾರೆ.

 

talking to my friend who works at microsoft & apparently he works 15-20 hr weeks & plays league the rest of the time & gets paid $300k for it

— Rona Wang (@ronawang)

 

ಸಾಫ್ಟ್‌ವೇರ್ ಎಂಜಿನೀಯರ್ಸ್ ಸೇರಿದಂತೆ ಹಲವು ಟೆಕ್ಕಿಗಳು ವೇತನ ಕೋಟಿ ಕೋಟಿ ರೂಪಾಯಿ. ಕ್ಯಾಂಪಸ್ ಸೆಲೆಕ್ಷನ್ ಮೂಲಕ ಆಗಷ್ಟ ಕೆಲಸ ಗಿಟ್ಟಿಸಿಕೊಂಡವರು ಕೋಟಿ ಕೋಟಿ ರೂಪಾಯಿ ಪ್ಯಾಕೇಜ್ ಪಡೆದ ಉದಾಹರಣೆ ಇದೆ. ಹೀಗಾಗಿ 15 ರಿಂದ 20 ಗಂಟೆ ಕೆಲಸ, ಅಥವಾ ಅದಕ್ಕಿಂತ ಹೆಚ್ಚು ಗಂಟೆ ಕೆಲಸ ಅನ್ನೋದು ಮುಖ್ಯವಲ್ಲ, ನೀಡಿದ ಟಾಸ್ಕ್ ಯಶಸ್ವಿಯಾಗಿ ನಿರ್ವಹಿಸುವುದೇ ಪ್ರತಿಭೆ. ಇದಕ್ಕೆ ವಿಶ್ವದ ಯಾವುದೇ ಮೂಲೆಯಲ್ಲೂ ಬೆಲೆ ಇದೆ ಎಂದು ಹಲವು ಟೆಕ್ಕಿಗಳು ಕಮೆಂಟ್ ಮಾಡಿದ್ದಾರೆ.

ಈ ಕಂಪನಿಯಲ್ಲಿ ಸ್ಮೋಕ್ ಮಾಡದ ಉದ್ಯೋಗಿಗಳಿಗೆ ಸಿಗಲಿದೆ ಹೆಚ್ಚುವರಿ 6 ರಜೆ!
 

click me!