ಶೇ.51ರಷ್ಟು ಭಾರತೀಯರಿಂದ ವಾರಕ್ಕೆ 49 ಗಂಟೆಗಿಂತಲೂ ಅಧಿಕ ಕೆಲಸ: ಕಾರ್ಮಿಕ ಸಂಸ್ಥೆ ವರದಿ

By Kannadaprabha NewsFirst Published Sep 26, 2024, 6:32 AM IST
Highlights

ಐಎಲ್‌ಒ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ವಾರಕ್ಕೆ ಉದ್ಯೋಗಿಗಳ ಸರಾಸರಿ ಕೆಲಸದ ಅವಧಿ 46.7 ಗಂಟೆ. ಆದರೆ ಶೇ. 51ರಷ್ಟು ಜನರು 49 ಗಂಟೆಗಿಂತಲೂ ಅಧಿಕ ದುಡಿಯುತ್ತಿದ್ದಾರೆ. ಭೂತಾನ್ ನಂತರ ವಿಶ್ವದಲ್ಲಿ ಅತಿ ಹೆಚ್ಚು ಕೆಲಸದ ಅವಧಿ ಹೊಂದಿರುವ ದೇಶದಲ್ಲಿ ಭಾರತವಿದೆ. 

ನವದೆಹಲಿ(ಸೆ.26):  ದೇಶದಲ್ಲಿ ಶೇ.51ರಷ್ಟು ಜನರು ವಾರದಲ್ಲಿ 49 ಗಂಟೆಗಿಂತಲೂ ಅಧಿಕ ಅವಧಿ ಕೆಲಸ ಮಾಡುತ್ತಾರೆ. ವಿಶ್ವದಲ್ಲಿ ಅತಿಹೆಚ್ಚು ಕೆಲಸ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವರದಿ ಹೇಳಿದೆ. 

ಐಎಲ್‌ಒ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ವಾರಕ್ಕೆ ಉದ್ಯೋಗಿಗಳ ಸರಾಸರಿ ಕೆಲಸದ ಅವಧಿ 46.7 ಗಂಟೆ. ಆದರೆ ಶೇ. 51ರಷ್ಟು ಜನರು 49 ಗಂಟೆಗಿಂತಲೂ ಅಧಿಕ ದುಡಿಯುತ್ತಿದ್ದಾರೆ. ಭೂತಾನ್ ನಂತರ ವಿಶ್ವದಲ್ಲಿ ಅತಿ ಹೆಚ್ಚು ಕೆಲಸದ ಅವಧಿ ಹೊಂದಿರುವ ದೇಶದಲ್ಲಿ ಭಾರತವಿದೆ. 

Latest Videos

ಬೆಂಗಳೂರು ಹೊರತುಪಡಿಸಿ ಇನ್ನುಳಿದ ಎಲ್ಲಾ ಬೈಜೂಸ್ ಕಚೇರಿಗೆ ಬೀಗ, ಉದ್ಯೋಗಿಗಳಿಗೆ ಒಂದು ಆಯ್ಕೆ!

ಅಗ್ರ 10ರ ಪಟ್ಟಿಯಲ್ಲಿ ದಕ್ಷಿಣ ಏಷ್ಯಾದ ಬಾಂಗ್ಲಾ, ಪಾಕಿಸ್ತಾನವೂ ಇದೆ. ಐಎಲ್‌ಒ ವರದಿ ಪ್ರಕಾರ, ನೆದರ್ಲೆಂಡ್ (31.6 ಗಂಟೆ) ಮತ್ತು ನಾರ್ವೆ(33.7) ದೇಶಗಳಲ್ಲಿ ಸಮತೋಲಿನ ಕೆಲಸದ ಅವಧಿಯನ್ನು ಹೊಂದಿವೆ. ಕೆಲಸ ಜೀವನದ ಶೈಲಿ, ಮಾನಸಿಕ ಆರೋಗ್ಯ, ದೇಶದ ಕಾರ್ಮಿಕ ನೀತಿಗಳು ಕೂಡ ಭಾರತದಲ್ಲಿ ಉದ್ಯೋಗಿಗಳ ಕೆಲಸದ ಅವಧಿ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ.

click me!