ನೈವೇಲಿ ಲಿಗ್ನೈಟ್‌ ನಲ್ಲಿ 295 ಗ್ರ್ಯಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ನೇಮಕಾತಿ

By Kannadaprabha NewsFirst Published Dec 19, 2023, 9:43 AM IST
Highlights

ನೈವೇಲಿ ಲಿಗ್ನೈಟ್‌ ಕರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ (ಎನ್‌ ಎಲ್‌ ಸಿ ಐ ಎಲ್) ನಲ್ಲಿ 295 ಗ್ರ್ಯಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ನೈವೇಲಿ ಲಿಗ್ನೈಟ್‌ ಕರ್ಪೋರೇಷನ್‌ ಇಂಡಿಯಾ ಲಿಮಿಟೆಡ್‌ (ಎನ್‌ ಎಲ್‌ ಸಿ ಐ ಎಲ್) ನಲ್ಲಿ 295 ಗ್ರ್ಯಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆಯ್ಕೆಯು ಅಭ್ಯರ್ಥಿಯು ಗೇಟ್‌ 2023 ಗಳಿಸಿದ ಸ್ಕೋರ್ ಅನ್ನು ಶೇಕಡಾ 80 ರಷ್ಟು ಗಣನೆಗೆ ತೆಗೆದುಕೊಳ್ಳಲಾಗುವುದು. ಅಭ್ಯರ್ಥಿಯು ಪಡೆದ ಅಂಕಗಳ ಅರ್ಹತೆಯ ಕ್ರಮದ ಆಧಾರದ ಮೇಲೆ 1:6 ಅನುಪಾತದಲ್ಲಿ ವೈಯಕ್ತಿಕ ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ "ನವರತ್ನ" ಸಾರ್ವಜನಿಕ ವಲಯದ ಉದ್ಯಮವಾಗಿದೆ.

ನೀತಾ ಅಂಬಾನಿಯ ಮೇಕಪ್ ಕಲಾವಿದೆ, ಗೌರಿ ಖಾನ್, ಕಿಯಾರಾ ಅಡ್ವಾಣಿ ಸೇರಿ ಬ ...

ಗಣಿಗಾರಿಕೆ (ಲಿಗ್ನೈಟ್ ಮತ್ತು ಕಲ್ಲಿದ್ದಲು), ಉಷ್ಣ ವಿದ್ಯುತ್ ಉತ್ಪಾದನೆ ಮತ್ತು ನವೀಕರಿಸಬಹುದಾದ ಶಕ್ತಿಯ ಮೂಲಗಳ ಕ್ಷೇತ್ರದಲ್ಲಿ 16,165.24 ಕೋಟಿ ವಾರ್ಷಿಕ ವಹಿವಾಟು ಹೊಂದಿರುವ ಕಂಪನಿಯಾಗಿದೆ.

ಇಲ್ಲಿ ಖಾಲಿ ಇರುವ 295 ಗ್ರ್ಯಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ (ಜಿಇಟಿ) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ: ಗ್ರಾಜುಯೇಟ್ ಎಕ್ಸಿಕ್ಯೂಟಿವ್ ಟ್ರೈನಿ -295 ಹುದ್ದೆ

1. ಮೆಕ್ಯಾನಿಕಲ್ ವಿಭಾಗ -120 ಹುದ್ದೆ

2. ಎಲೆಕ್ಟ್ರಿಕಲ್ ವಿಭಾಗ – 109 ಹುದ್ದೆ

3. ಸಿವಿಲ್ ವಿಭಾಗ - 28 ಹುದ್ದೆ

4. ಗಣಿಗಾರಿಕೆ ವಿಭಾಗ - 17 ಹುದ್ದೆ

5. ಕಂಪ್ಯೂಟರ್ ವಿಭಾಗ - 21 ಹುದ್ದೆ

ಅವಿವಾಹಿತೆಗೆ ಹುಟ್ಟಿದ ಈ ಸ್ಟಾರ್‌ ನಟಿ, ಸೂಪರ್ ಸ್ಟಾರ್ ತಂದೆಯ ಅಂತ್ಯಕ ...

ಪ್ರಮುಖ ದಿನಾಂಕಗಳು

ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ: 22-11-2023

ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಕೊನೆಯ ದಿನಾಂಕ: 21-12-2023

ಅರ್ಜಿ ಶುಲ್ಕ

ಸಾಮಾನ್ಯ/ ಇಡ್ಬ್ಲೂಎಸ್/ ಓಬಿಸಿ ಅಭ್ಯರ್ಥಿಗಳಿಗೆ: ರು. 854 (ಅರ್ಜಿ ಶುಲ್ಕ - ರು. 500 + ಸಂಸ್ಕರಣಾ ಶುಲ್ಕ - ರು. 354)

ಎಸ್‌ ಸಿ/ ಎಸ್‌ ಟಿ/ ಪಿಡ್ಬ್ಲೂಡಿ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರು. 354

ವಯಸ್ಸಿನ ಮಿತಿ (01-11-2023 ರಂತೆ):

ಸಾಮಾನ್ಯ/ ಇಡ್ಬ್ಲೂಎಸ್ ಅಭ್ಯರ್ಥಿಗಳಿಗೆ: 30 ವರ್ಷಗಳು

ಓಬಿಸಿ ಅಭ್ಯರ್ಥಿಗಳಿಗೆ: 33 ವರ್ಷಗಳು

ಎಸ್‌ ಸಿ/ ಎಸ್‌ ಟಿ ಅಭ್ಯರ್ಥಿಗಳಿಗೆ: 35 ವರ್ಷಗಳು

ಶೈಕ್ಷಣಿಕ ಅರ್ಹತೆ: (ಗೇಟ್-2023 ಸ್ಕೋರ್ ಮತ್ತು ಅರ್ಹತೆಯ ಮಾನದಂಡ)

1. ಅಭ್ಯರ್ಥಿಗಳು ಗೇಟ್‌ -2023 ಪರೀಕ್ಷೆಯಲ್ಲಿ ಸಂಬಂಧಿತ ಗೇಟ್ ಕೋಡ್‌ನಲ್ಲಿ ಅರ್ಹತೆ ಯನ್ನು ಪಡೆದಿರಬೇಕು.

2. ಗೇಟ್‌ -2023 ರ ಗೇಟ್ ಸ್ಕೋರ್ ಮಾತ್ರ ಈ ನೇಮಕಾತಿಗೆ ಮಾನ್ಯವಾಗಿರುತ್ತದೆ.

ಮೆಕ್ಯಾನಿಕಲ್ ವಿಭಾಗದ ಹುದ್ದೆಗೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ / ಮೆಕ್ಯಾನಿಕಲ್ ಮತ್ತು ಪ್ರೊಡಕ್ಷನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ಎಲೆಕ್ಟ್ರಿಕಲ್ ವಿಭಾಗದ ಹುದ್ದೆಗೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ / ಪವರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ಸಿವಿಲ್ ವಿಭಾಗದ ಹುದ್ದೆಗೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್ / ಸಿವಿಲ್ ಮತ್ತು ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ಕಂಪ್ಯೂಟರ್ ವಿಭಾಗದ ಹುದ್ದೆಗೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ / ಕಂಪ್ಯೂಟರ್ ಎಂಜಿನಿಯರಿಂಗ್ / ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು.

ಮೈನಿಂಗ್ ವಿಭಾಗದ ಹುದ್ದೆಗೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮೈನಿಂಗ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ವೇತನ ಶ್ರೇಣಿ : ರು.50,000 – 1,60,000 ರ ವರೆಗೆ

ಆಯ್ಕೆ ವಿಧಾನ:

1.ಆಯ್ಕೆಯು ಅಭ್ಯರ್ಥಿಯು ಗೇಟ್‌ -2023 ಗಳಿಸಿದ ಸ್ಕೋರ್ ಅನ್ನು ಶೇಕಡಾ 80 ರಷ್ಟು ಗಣನೆಗೆ ತೆಗೆದುಕೊಳ್ಳಲಾಗುವುದು.

2. ಅಭ್ಯರ್ಥಿಯು ಪಡೆದ ಅಂಕಗಳ ಅರ್ಹತೆಯ ಕ್ರಮದ ಆಧಾರದ ಮೇಲೆ 1:6 ಅನುಪಾತದಲ್ಲಿ ವೈಯಕ್ತಿಕ ಸಂದರ್ಶನಕ್ಕಾಗಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

3. ವೈಯಕ್ತಿಕ ಸಂದರ್ಶನ ಕ್ಕೆ 20 ಅಂಕಗಳನ್ನು ನಿಗದಿಪಡಿಸಲಾಗಿದೆ.

4. ಗೇಟ್‌ -2023 ಹಾಗೂ ವೈಯಕ್ತಿಕ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

5. ಅಂತಿಮ ಪಟ್ಟಿಯ ಆಧಾರದ ಮೇಲೆ ಡಾಕ್ಯುಮೆಂಟ್ / ಪ್ರಮಾಣಪತ್ರ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಆಯ್ಕೆಯಾದವರ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ: www.nlcindia.in

click me!