ಬೆಂಗಳೂರು ಮೆಟ್ರೋದಲ್ಲಿ 35 ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Published : Apr 18, 2025, 06:14 PM ISTUpdated : Apr 18, 2025, 06:24 PM IST
ಬೆಂಗಳೂರು ಮೆಟ್ರೋದಲ್ಲಿ 35 ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಾರಾಂಶ

ಬಿಎಂಆರ್‌ಸಿಎಲ್‌ನಲ್ಲಿ 35 ಪದವೀಧರ ಎಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬಿ.ಇ/ಬಿ.ಟೆಕ್ ಪದವೀಧರರು https://english.bmrc.co.in/ ಮೂಲಕ ಮಾರ್ಚ್ 03, 2025 ರೊಳಗೆ ಅರ್ಜಿ ಸಲ್ಲಿಸಬಹುದು. ವಯೋಮಿತಿ 35 ವರ್ಷ. ಮಾಸಿಕ ವೇತನ ₹44,000 ಆಯ್ಕೆ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ. ಯಾವುದೇ ಅರ್ಜಿ ಶುಲ್ಕವಿಲ್ಲ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಲ್ಲಿ ಖಾಲಿ ಇರುವ ಪದವೀಧರ ಎಂಜಿನಿಯರ್ (ಸಿವಿಲ್) ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಬಿಎಂಆರ್‌ಸಿಎಲ್ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.  https://english.bmrc.co.in/ ಮೂಲಕ ಅರ್ಜಿ ಸಲ್ಲಿಸಬಹುದು.   

ಹುದ್ದೆಯ ಹೆಸರು: ಪದವೀಧರ ಎಂಜಿನಿಯರ್ (ಸಿವಿಲ್)
ಒಟ್ಟು ಹುದ್ದೆಗಳು: 35
ಉದ್ಯೋಗ ಸ್ಥಳ: ಬೆಂಗಳೂರು-ಕರ್ನಾಟಕ
ವಿದ್ಯಾರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯಗಳಿಂದ BE ಅಥವಾ B.Tech ಪೂರ್ಣಗೊಳಿಸಿರಬೇಕು.
ವಯೋಮಿತಿ: ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಹೊಂದಿರಬೇಕು.

ರೈಲ್ವೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ, 9970 ALP ಹುದ್ದೆಗಳಿಗೆ ನೇಮಕಾತಿ

ಅರ್ಜಿಶುಲ್ಕ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. 
ವೇತನ ಶ್ರೇಣಿ: ಮಾಸಿಕ 44,000 ವೇತನವನ್ನು ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ:
ಅಧಿಕೃತ ಅಧಿಸೂಚನೆಯ ಪ್ರಕಾರ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿಸಲ್ಲಿಸುವ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮತ್ತು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ‌‌ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ಅಥವಾ ಮೊದಲು ಕಳುಹಿಸಿ.‌‌

ಉದ್ಯೋಗ ಕಡಿತ ಯಾರನ್ನೂ ಬಿಟ್ಟಿಲ್ಲ, ಗೂಗಲ್‌ ಬೆಂಗಳೂರು ಕಂಪೆನಿಯಲ್ಲಿಯೂ ಸಹ!

ವಿಳಾಸ: ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ III ಮಹಡಿ, BMTC ಕಾಂಪ್ಲೆಕ್ಸ್ ಕೆ.ಎಚ್. ರಸ್ತೆ ಶಾಂತಿನಗರ ಬೆಂಗಳೂರು - 560027

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೆ.03, 2025

ವಾಯುಪಡೆಯಲ್ಲಿ ಮ್ಯೂಸೀಷಿಯನ್ ನೇಮಕಾತಿ: ಅರ್ಹರಿಂದ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಭಾರತೀಯ ವಾಯು ಸೇವೆಯಲ್ಲಿ ಅಗ್ನಿಪಥ್ ಯೋಜನೆಯಡಿ ಸೇವೆ ಸಲ್ಲಿಸಲು (ಮ್ಯೂಸೀಷಿಯನ್) ನೇಮಕಾತಿಗಾಗಿ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಮೇ 11 ರೊಳಗೆ ಸಲ್ಲಿಸಬಹುದು. ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ ಮತ್ತು ಸಂಗೀತ ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದು, ಪ್ರಮಾಣ ಪತ್ರ ಹೊಂದಿರಬೇಕು. 2005ರ ಜನವರಿ 1 ರಿಂದ 2008ರ ಜುಲೈ 1 ರ ನಡುವೆ ಜನಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 29512199, 8861734824 ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಎಂ. ಪ್ರಸಾದ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಭಾರತದಲ್ಲಿ ಸಂಬಳ ಕಡಿಮೆ, ವಿದೇಶದಲ್ಲಿ ಕೆಲಸ ಮಾಡಲು ಶೇ. 52ರಷ್ಟು ಯುವಕರಿಗೆ ಇಷ್ಟ ಎಂದ ಅಧ್ಯಯನ!
ಬೆಂಗಳೂರು ಮೆಟ್ರೋದಲ್ಲಿ 2 ಲಕ್ಷ ವೇತನದ ಉದ್ಯೋಗ! ಯಾರು ಅರ್ಜಿ ಸಲ್ಲಿಸಬಹುದು? ಇಂದೇ ಅರ್ಜಿ ಸಲ್ಲಿಸಿ