
ಕೆಲ್ಸ (work)ಕ್ಕೆ ನಿಗದಿತ ಟೈಂ ಇಲ್ಲ, ಮುಂದೆ ಕುಳಿತು ಕಾಟ ಕೊಡುವ ಬಾಸ್ ಇಲ್ಲ, ಕೋಟಿ ಲೆಕ್ಕದಲ್ಲಿ ಸಂಬಳ ಕೈಗೆ ಸಿಗುತ್ತೆ ಅಂದ್ರೆ ಯಾರು ಬಿಡ್ತಾರೆ ಹೇಳಿ. ವಿಚಿತ್ರ ಅಂದ್ರೆ ಈ ಕೆಲ್ಸಕ್ಕೂ ಜನ ಸಿಗೋದಿಲ್ಲ. ಈಗ ಒಂದು ಕೆಲ್ಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮೇಲೆ ಹೇಳಿದ ಎಲ್ಲ ಸೌಲಭ್ಯ ಈ ಕೆಲ್ಸದಲ್ಲಿ ಸಿಗ್ತಿದೆ. ಆದ್ರೆ ಯಾರೊಬ್ಬರೂ ಈ ಕೆಲ್ಸಕ್ಕೆ ಅರ್ಜಿ ಸಲ್ಲಿಸ್ತಿಲ್ಲ. ಅಷ್ಟಕ್ಕೂ ಆ ಕೆಲ್ಸ ಯಾವ್ದು, ಯಾಕೆ ಜನರು ಕೆಲ್ಸಕ್ಕೆ ಹೋಗ್ತಿಲ್ಲ ಎನ್ನುವ ಮಾಹಿತಿ ಇಲ್ಲಿದೆ.
ಆಸಕ್ತಿ ಇದ್ರೆ ನೀವೂ ಟ್ರೈ ಮಾಡಿ : ಶಿಫ್ಟ್ ನಲ್ಲಿ ಕೆಲ್ಸ ಮಾಡ್ಬೇಕಾಗಿಲ್ಲ. ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಬೇಕಾಗಿಲ್ಲ. ಟಾರ್ಗೆಟ್, ಮೀಟಿಂಗ್ ಅನ್ನೋ ಪಿರಿಪಿರಿ ಇಲ್ಲ. ಕೆಲ್ಸ ತುಂಬಾ ಸಿಂಪಲ್. ಒಂದು ಲೈಟ್ ಆರದಂತೆ ನೋಡಿಕೊಳ್ತಿರಬೇಕು. ಅದನ್ನು ನೋಡ್ತಾನೆ ನೀವು ದಿನದ 24 ಗಂಟೆ ಏನು ಬೇಕಾದ್ರೂ ಮಾಡ್ಬಹುದು. ನಿಮಗೆ ಇಷ್ಟ ಬಂದಾಗ ಏಳ್ಬಹುದು, ನಿಮಗೆ ಇಷ್ಟ ಬಂದಾಗ ಮಲಗ್ಬಹುದು. ಫಿಶಿಂಗ್ ಮಾಡ್ಬಹುದು. ಏನೇ ಮಾಡಿದ್ರೂ ಸರಿ ಲೈಟ್ ಮಾತ್ರ ಆರ್ಬಾರದು.
ಕೆಲ್ಸ ಎಷ್ಟು ಸುಲಭ. ಮತ್ತ್ಯಾಕೆ ಜನ ಹೋಗ್ತಿಲ್ಲ ಅಂತ ನೀವು ಕೇಳ್ಬಹುದು. ಕೆಲ್ಸ ಸುಲಭ ಅಂತ ಅನ್ನಿಸಿದ್ರೂ ತುಂಬಾ ಕಠಿಣ. ಯಾಕೆಂದ್ರೆ ಕೆಲ್ಸ ಇರೋದು ಈಜಿಪ್ಟ್ನ ಅಲೆಕ್ಸಾಂಡ್ರಿಯಾ ಬಂದರಿನ ಫರೋಸ್ ಎಂಬ ದ್ವೀಪದಲ್ಲಿದೆ. ಅಲೆಕ್ಸಾಂಡ್ರಿಯಾದ ಲೈಟ್ಹೌಸ್ ಕೀಪರ್ ಕೆಲ್ಸಕ್ಕೆ ಸದ್ಯ ಅರ್ಜಿ ಆಹ್ವಾನಿಸಲಾಗಿದೆ. ವಾರ್ಷಿಕ ವೇತನ ಪ್ಯಾಕೇಜ್ ಅಂದರೆ ಸಿಟಿಸಿ ಸುಮಾರು 8 ಕೋಟಿ ರೂಪಾಯಿ.
ಈ ಕೆಲ್ಸನ ವಿಶ್ವದ ಅತ್ಯಂತ ಕಷ್ಟಕರ ಕೆಲ್ಸ ಅಂತ ನಂಬಲಾಗುತ್ತೆ. ಯಾಕೆಂದ್ರೆ ಇಲ್ಲಿ ಉಳಿಯೋದು ಸುಲಭ ಅಲ್ಲ. ನಿಮ್ಮ ಜೊತೆ ಯಾರೂ ಈ ಲೈಟ್ ಹೌಸ್ ನಲ್ಲಿ ಇರೋದಿಲ್ಲ. ಸಮುದ್ರದ ಮಧ್ಯೆ ನೀವೊಬ್ಬರೇ ಒಂಟಿಯಾಗಿ ಇರ್ಬೇಕು. ಮಾತನಾಡೋಕೆ ಯಾರೂ ಇರೋದಿಲ್ಲ. ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾದ ಈ ಲೈಟ್ ಹೌಸ್ (light house) ಅಪಾಯಕಾರಿಯೂ ಹೌದು. ಅನೇಕ ಅಪಾಯಕಾರಿ ಬಿರುಗಾಳಿ ಇಲ್ಲಿ ಬೀಸುತ್ತದೆ. ಸಮುದ್ರದ ಎಲೆ ಎತ್ತರಕ್ಕೆ ಬೀಸಿದಾಗ ನಿಮ್ಮ ಪ್ರಾಣ ಕೂಡ ಹೋಗ್ಬಹುದು. ತುರ್ತು ಸಂದರ್ಭದಲ್ಲಿ ನೀವು ರಕ್ಷಣೆ ಪಡೆಯಲು ಸಾಧ್ಯವಿಲ್ಲ. ರಕ್ಷಣಾ ಸಿಬ್ಬಂದಿಯನ್ನು ಸಂಪರ್ಕಿಸೋಕೆ ಒಂದೆರಡು ದಿನ ಹಿಡಿಯುತ್ತೆ. ಕೋಟಿ ಸಂಪಾದನೆ ಮಾಡಿದ್ರೂ ಸಂತೋಷವಿಲ್ಲದ, ಅಪಾಯಕಾರಿ ಜೀವನ ನಡೆಸ್ಬೇಕು. ಹಾಗಾಗಿ ಯಾರೂ ಈ ಕೆಲ್ಸಕ್ಕೆ ಹೋಗಲು ಮನಸ್ಸು ಮಾಡ್ತಿಲ್ಲ.
ಇದನ್ನು ಏಕೆ ನಿರ್ಮಿಸಲಾಗಿದೆ? : ಒಂದು ಕಾಲದಲ್ಲಿ ಪ್ರಸಿದ್ಧ ನಾವಿಕ ಕ್ಯಾಪ್ಟನ್ ಮೆರೆಸಿಯಸ್ ಈ ದಿಕ್ಕಿನಲ್ಲಿ ಹಾದು ಹೋಗುತ್ತಿದ್ದ. ಈ ಪ್ರದೇಶದಲ್ಲಿ ದೊಡ್ಡ ಬಂಡೆಗಳಿದ್ದವು. ಬಿರುಗಾಳಿ ಮಧ್ಯೆ ರಾತ್ರಿ ಆತನಿಗೆ ಈ ಬಂಟೆ ಕಾಣಿಸಲಿಲ್ಲ. ಹಡಗು ಅಪಘಾತಕ್ಕೀಡಾಗಿ ಅನೇಕರು ಸಾವನ್ನಪ್ಪಿದ್ದರು. ಕ್ಯಾಪ್ಟನ್ ಮೇರಿ ಬಹಳ ದೂರ ಹೋದ ನಂತ್ರ ಈಜಿಪ್ಟ್ ತಲುಪಿದ್ದ. ಇಲ್ಲಿನ ಬಂಡೆಗಳಿಂದಾಗಿ ಅನೇಕ ಹಡಗುಗಳು ಹಾನಿಗೊಳಗಾಗಿವೆ. ಇಂಥ ಘಟನೆ ತಪ್ಪಿಸಲು ಸಮುದ್ರ ಮಧ್ಯ ಗೋಪುರ ನಿರ್ಮಿಸಲು ಹೇಳಿದ್ದನು. ಅಲ್ಲಿಂದ ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು. ಹಡಗುಗಳಿಗೆ ಈ ದೀಪ ದಾರಿ ತೋರಿಸುತ್ತಿತ್ತು. ಈ ದೀಪಸ್ತಂಭ ಸಿದ್ಧವಾದಾಗ ಎಂಜಿನಿಯರಿಂಗ್ ಜಗತ್ತಿನಲ್ಲಿ ಒಂದು ದೊಡ್ಡ ಆವಿಷ್ಕಾರವಾಯ್ತು. ಈ ದೀಪಸ್ತಂಭವನ್ನು ದಿ ಫಾರೋಸ್ ಆಫ್ ಅಲೆಕ್ಸಾಂಡ್ರಿಯಾ ಎಂದು ಕರೆಯಲಾಗುತ್ತದೆ. ಇದು ವಿಶ್ವದ ಮೊದಲ ದೀಪಸ್ತಂಭವಾಗಿದೆ.