ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ!

By Gowthami K  |  First Published Jul 18, 2023, 2:33 PM IST

ಮದನ್ ಮೋಹನ್ ಮಾಳವೀಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿ ಆರಾಧ್ಯ ತ್ರಿಪಾಠಿ ಅವರು ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದಿದ್ದಾರೆ.


ಮದನ್ ಮೋಹನ್ ಮಾಳವೀಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (MMMUT) ವಿದ್ಯಾರ್ಥಿನಿ ಆರಾಧ್ಯ ತ್ರಿಪಾಠಿ ಅವರು ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದಿದ್ದು, ಈ ಮೂಲಕ ಇತಿಹಾಸ ಬರೆದಿದ್ದಾರೆ.  US ಟೆಕ್ ದೈತ್ಯ ಗೂಗಲ್‌ನಿಂದ 52 ಲಕ್ಷ ರೂಪಾಯಿಗಳ ಪ್ಯಾಕೇಜ್ ಪಡೆದುಕೊಂಡಿದ್ದು, ಆರಾಧ್ಯ ತ್ರಿಪಾಠಿ ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಇವರು ಎಂಎಂಎಂಯುಟಿಯಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಬಿಟೆಕ್ ಪದವಿ ಪಡೆದುಕೊಂಡಿದ್ದಾರೆ.

MMMUT ನ ವಿದ್ಯಾರ್ಥಿಗಳಲ್ಲಿ ಇಲ್ಲಿವರೆಗೆ ಗಳಿಸಿದ ಅತ್ಯಧಿಕ ಪ್ಯಾಕೇಜ್  ಆರಾಧ್ಯ ತ್ರಿಪಾಠಿ ಅವರು ಪಡೆದಿರುವುದು ಆಗಿದೆ. ಇವರು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಆಗಿ ಗೂಗಲ್‌ನಲ್ಲಿ (google) ಉದ್ಯೋಗ ಪಡೆದಿದ್ದಾರೆ.

Latest Videos

undefined

ಶಿಕ್ಷಣ ಪ್ರಿಯರಿಗೆ ಗುಡ್‌ನ್ಯೂಸ್, ಏಕಕಾಲದಲ್ಲಿ ಎರಡು ಪದವಿ ಪಡೆಯಲು ಕೆಎಸ್‌ಒಯು

ಆರಾಧ್ಯ ತ್ರಿಪಾಠಿ (Aradhya Tripathi) ಉತ್ತರ ಪ್ರದೇಶದ ಸಂತಕ್‌ಬೀರ್‌ನಗರ ಜಿಲ್ಲೆಯ ಮಘರ್ ಪ್ರದೇಶದ ಗೋಯಿತ್ವಾ ಗ್ರಾಮದ ನಿವಾಸಿ. ಈಕೆಯ ತಂದೆ ಅಂಜನಿ ನಂದನ್ ತ್ರಿಪಾಠಿ ಗೋರಖ್‌ಪುರದ ಸಿವಿಲ್ ಕೋರ್ಟ್‌ನಲ್ಲಿ ವಕೀಲರಾಗಿದ್ದರೆ, ಈ ಕೆಯ ತಾಯಿ ಗೃಹಿಣಿಯಾಗಿದ್ದಾರೆ.

ಆರಾಧ್ಯ ತ್ರಿಪಾಠಿ ಬಾಲ್ಯದಿಂದಲೂ ಅಧ್ಯಯನದಲ್ಲಿ  ಬಲು ಮುಂದು.  ಇವರು ಗೋರಖ್‌ಪುರನಾಥ್‌ನ ಸೇಂಟ್ ಜೋಸೆಫ್ ಶಾಲೆಯಲ್ಲಿ 10 ನೇ ಮತ್ತು 12 ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು, ಅಲ್ಲಿಂದ ನಂತರ ತನ್ನ ಬಿಟೆಕ್‌ ವ್ಯಾಸಂಗಕ್ಕಾಗಿ ಆರಾಧ್ಯ ತ್ರಿಪಾಠಿ  MMMUT ಗೆ ತೆರಳಿದರು.

ಆರಾಧ್ಯ ತ್ರಿಪಾಠಿ ಸ್ಕೇಲರ್ ಅಕಾಡೆಮಿಯಿಂದ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ್ದಾರೆ. ಇಂಟರ್ನ್‌ಶಿಪ್ ಮುಗಿದ ನಂತರ, ಆರಾಧ್ಯ ತ್ರಿಪಾಠಿ ಅವರಿಗೆ ಸ್ಕೇಲರ್‌ನಿಂದ 32 ಲಕ್ಷ ರೂಪಾಯಿಗಳ ಪ್ಯಾಕೇಜ್ ನೀಡಲಾಯಿತು, ಆದರೆ ಇದೀಗ ಈಕೆಗೆ  ಗೂಗಲ್‌ನಿಂದ  ಅದಕ್ಕಿಂತೂ ಹೆಚ್ಚಿನ ಪ್ಯಾಕೇಜ್ ಸಿಕ್ಕಿದೆ.

NITK Surathkal ಕ್ಯಾಂಪಸ್ ಸೆಲೆಕ್ಷನ್‌, ಅಮೆರಿಕಾ ಕಂಪೆನಿಯಲ್ಲಿ ವಿದ್ಯಾರ್ಥಿಗೆ 2.3 ಕೋಟಿ ರೂ

ನಾನು ಲೈವ್ ಪ್ರೊಡಕ್ಷನ್ ಟ್ರಾಫಿಕ್‌ನೊಂದಿಗೆ ಸ್ಕೇಲೆಬಲ್ ಉತ್ಪನ್ನಗಳ ಮೇಲೆ ಕೆಲಸ ಮಾಡಿದ್ದೇನೆ ಮತ್ತು ಹಿಡಿತ ಹೊಂದಿದ್ದೇನೆ ಮತ್ತು ಸ್ಪರ್ಧಾತ್ಮಕ ವಾತಾವರಣದಲ್ಲಿ ಕೆಲಸ ಮಾಡುವ ಅನುಭವವನ್ನು ಹೊಂದಿದ್ದೇನೆ ಎಂದು ಆರಾಧ್ಯ  ಹೇಳಿದ್ದಾರೆ.

ನಾನು ಡೇಟಾ ಸ್ಟ್ರಕ್ಚರ್‌ಗಳು ಮತ್ತು ಅಲ್ಗಾರಿದಮ್‌ಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದೇನೆ ಮತ್ತು ವಿವಿಧ ಕೋಡಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 1000+ ಪ್ರಶ್ನೆಗಳನ್ನು ಪರಿಹರಿಸಿದ್ದೇನೆ ಮತ್ತು ಅವುಗಳ ಮೇಲೆ ಉತ್ತಮ ರೇಟಿಂಗ್ ಅನ್ನು ಹೊಂದಿದ್ದೇನೆ. ತ್ವರಿತ ಕಲಿಕೆಯ ಜೊತೆಗೆ, ನಾನು ವೇಗದ ಕಲಿಕೆಯ ಸಂದರ್ಭಗಳಲ್ಲಿ ಅಭಿವೃದ್ಧಿ ಹೊಂದಲು ಇಷ್ಟಪಡುತ್ತೇನೆ ಎಂದು ಆರಾಧ್ಯ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.

click me!