ಮೆಟಾ ಉದ್ಯೋಗಿಗಳಿಂದ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಮಂಗಳಾರತಿ, ಉದ್ಯೋಗ ಕಡಿತಕ್ಕೆ ಆಕ್ರೋಶ!

By Suvarna News  |  First Published Mar 18, 2023, 4:25 PM IST

ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ಘೋಷಿಸಿದೆ. ಇದು ಉದ್ಯೋಗಿಗಳ ಆಕ್ರೋಶಕ್ಕೆ ಕಾರಣಾಗಿದೆ.ಇದರ ಪರಿಣಾಮ ಕಂಪನಿಯ ಮೀಟಿಂಗ್‌ನಲ್ಲಿ ಉದ್ಯೋಗಿಗಳು ಮೆಟಾ ಸಿಇಒ ಜುಕರ್‌ಬರ್ಗ್‌ರನ್ನು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. 
 


ನ್ಯೂಯಾರ್ಕ್(ಮಾ.18): ಫೇಸ್‌ಬುಕ್ ಪೇರೆಂಟ್ ಕಂಪನಿ ಮೆಟಾ 10,000 ಉದ್ಯೋಗಿಗಳ ಕಡಿತ ಮಾಡುವುದಾಗಿ ಘೋಷಿಸಿದೆ. ಮತ್ತೊಂದು ಸುತ್ತಿನ ಉದ್ಯೋಗ ಕಡಿತ ನೌಕರರನ್ನು ಆಕ್ರೋಶಗೊಳಿಸಿದೆ. ಈ ಘೋಷಣೆ ಬಳಿಕ ಕಂಪನಿ ಉದ್ಯೋಗಿಗಳ ಜೊತೆಗೆ ಇತ್ತೀಚೆಗೆ ಮೀಟಿಂಗ್‌ನಲ್ಲಿ ಪಾಲ್ಗೊಂಡ ಸಿಇಒ ಮಾರ್ಕ್ ಜುಕರ್‌ಬರ್ಗ್ ವಿರುದ್ಧ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿ ಉದ್ಯೋಗ ಕಡಿತ ಮಾಡಿದರೆ ಕಂಪನಿ ಮೇಲಿನ ನಂಬಿಕೆ ಹೊರಟು ಹೋಗಲಿದೆ. ಈ ಕಂಪನಿ ಏಳಿಗೆಗಾಗಿ ದುಡಿಯುವ ಬದಲು ಪ್ರತಿಯೊಬ್ಬರು ವೈಯುಕ್ತಿ ಕುರಿತು ಹೆಚ್ಚು ಗಮನಹರಿಸುತ್ತಾರೆ ಎಂದಿದ್ದಾರೆ. 

ಮಾರ್ಚ್ 14 ರಂದು ಮಾರ್ಕ್ ಜುಕರ್‌ಬರ್ಗ್ ಕಂಪನಿ 10,000 ಉದ್ಯೋಗಿಗಳ ಕಡಿತಕ್ಕೆ ಮುಂದಾಗಿದೆ ಎಂದು ಘೋಷಿಸಿದ್ದರು. ಇದು ಮೆಟಾ ಉದ್ಯೋಗಿಗಳನ್ನು ಮತ್ತಷ್ಟು ಆತಂಕಕ್ಕೆ ತಳ್ಳಿತ್ತು. ಮೊದಲ ಸುತ್ತಿನ ಉದ್ಯೋಗ ಕಡಿತಲ್ಲಿ 11 ಸಾವಿರ ಉದ್ಯೋಗಿಗಳ ಕಡಿತ ಮಾಡಲಾಗಿತ್ತು. ಇದೀಗ ಮತ್ತೆ 10,000 ಉದ್ಯೋಗಿಗಳ ಕಡಿತ ಮತ್ತೆ ನೌಕರರ ಆತಂಕ ಹೆಚ್ಚಿಸಿತು. ಈ ಘೋಷಣೆ ಬಳಿಕ ಕಂಪನಿ ಉದ್ಯೋಗಿಗಳ ಜೊತೆ ಜುಕರ್‌ಬರ್ಗ್ ಸಾಮಾನ್ಯ ಮೀಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಉದ್ಯೋಗಿಗಳ ಸಹನೆಯ ಕಟ್ಟೆ ಒಡೆದಿದೆ. 

Latest Videos

undefined

ಮತ್ತೆ ಶಾಕ್ ನೀಡಿದ ಮೆಟಾ, ಫೇಸ್‌ಬುಕ್ ಮಾತೃಸಂಸ್ಥೆಯಿಂದ 10 ಸಾವಿರ ಉದ್ಯೋಗ ಕಡಿತ!

ಮೀಟಿಂಗ್‌ನಲ್ಲೇ ಜುಕರ್‌ಬರ್ಗ್‌ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಎರಡು ಸುತ್ತಿನ ಉದ್ಯೋಗ ಕಡಿತ ಬಳಿಕ ಉದ್ಯೋಗಿಗಳು ಹಾಗೂ ಮೆಟಾ ಸೇರಲು ಇಚ್ಚಿಸುವ ಹೊಸಬರು ಕಂಪನಿ ಹಾಗೂ ಸಿಇಒ ಅವರ ಮೇಲೆ ನಂಬಿಕೆ ಇಡಲು ಸಾಧ್ಯವೇ? ಎಂದು ಉದ್ಯೋಗಿಗಳು ಪ್ರಶ್ನಿಸಿದ್ದಾರೆ. ಕಂಪನಿಯು ಅತ್ಯಂತ ಪಾರದರ್ಶನಕವಾಗಿ ನಡೆದುಕೊಳ್ಳುತ್ತಿದೆ. ನಾಯಕರು ತಮ್ಮ ಆಲೋಚನೆಗಳಿಗೆ ಮತ್ತಷ್ಟು ವೇಗ ನೀಡಬೇಕು. ಜೊತೆಗೆ ಹೊಸ ರೀತಿಯಲ್ಲಿ ಆಲೋಚನೆ ಮಾಡಬೇಕು ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

ಇದೇ ವೇಳೆ ಮನೆಯಿಂದ ಕೆಲಸ ಮಾಡುವ ಪದ್ಧತಿ ಕುರಿತು ಹಲವರು ಪ್ರಶ್ನಿಸಿದ್ದಾರೆ. ಉದ್ಯೋಗ ಕಡಿತದಂತೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀದ್ದೀರಿ. ಇದರ ನಡುವೆ ಕಚೇರಿಯಿಂದ ಕೆಲಸ ಮಾಡಲು ಹೇಳುತ್ತಿದ್ದೀರಿ. ಯಾವ ಆಧಾರದಲ್ಲಿ ಮತ್ತೆ ಕಚೇರಿಯಿಂದ ಕೆಲಸಕ್ಕೆ ಬರಬೇಕು ಎಂದು ಪ್ರಶ್ನಿಸಿದ್ದಾರೆ. ಮನೆಯಿಂದ ಕೆಲಸದ ಕುರಿತು ಬೋರ್ಡ್ ಕಮಿಟಿ ಮಾತುಕತೆ ನಡೆಸುತ್ತಿದೆ. ಕೆಚೇರಿಯಿಂದ ಕೆಲಸದ ಕುರಿತು ಗಹನವಾದ ಚರ್ಚೆ ನಡೆದಿದೆ. ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದಿದ್ದಾರೆ.

ಮಸ್ಕ್‌ಗೆ ಹೊಸ ಟೆನ್ಶನ್ ಶುರು, ಮೆಟಾದಿಂದ ಟ್ವಿಟರ್‌ಗೆ ಪ್ರತಿಸ್ಪರ್ಧಿ ಸೋಶಿಯಲ್ ಮಿಡಿಯಾ!

ಹೆಚ್ಚಿನ ಉದ್ಯೋಗಿಗಳು ಉದ್ಯೋಗ ಕಡಿತದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಯಾವ ಕಂಪನಿ ನಂಬಿಕೊಂಡು ಇಲ್ಲಿಗೆ ಬಂದಿದ್ದೇವೋ ಅದೇ ಕಂಪನಿಯಿಂದ ಹೊರಬೀಳುವುದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಲವು ಇತರ ಆಫರ್ ತಿರಸ್ಕರಿಸಿದ ಬೆನ್ನಲ್ಲೇ ಉದ್ಯೋಗ ಕಡಿತದಿಂದ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಕಂಪನಿ ದಿಢೀರ್ ಈ ನಿರ್ಧಾರ ಘೋಷಿಸುವ ಕಾರಣ ಉದ್ಯೋಗಿಗಳ ಭವಿಷ್ಯವೂ ಅತಂತ್ರವಾಗಲಿದೆ ಎಂದಿದ್ದಾರೆ.

ಕಳೆದ ನವೆಂಬರ್‌ನಲ್ಲಿ 11,000 ಉದ್ಯೋಗಿಗಳನ್ನು ಕೆಲಸದಿಂದ ತೆಗದು ಹಾಕಿದ್ದ ಫೇಸ್‌ಬುಕ್‌ ಮಾತೃ ಸಂಸ್ಥೆ ಮೆಟಾ, ಎರಡನೇ ಸುತ್ತಿನಲ್ಲಿ ಶೀಘ್ರ 10,000 ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ.ಇದೇ ವೇಳೆ ಹೆಚ್ಚುವರಿಯಾಗಿದ್ದ ಒಟ್ಟು 5,000 ಹುದ್ದೆಗಳನ್ನೇ ತೆಗದು ಹಾಕಲು ನಿರ್ಧರಿಸಿದ್ದು ಇನ್ನೆಂದೂ ಆ ಹುದ್ದೆಗಳನ್ನು ಭರ್ತಿ ಮಾಡಲಾಗುವುದಿಲ್ಲ ಎಂದು ಹೇಳಿದೆ.
 

click me!