ಮೊದಲ ಉದ್ಯೋಗಿಗೆ ಮರ್ಸಿಡಿಸ್ ಬೆಂಜ್ ಕಾರು ಗಿಫ್ಟ್ ನೀಡಿದ ಕೇರಳದ ಐಟಿ ಕಂಪನಿ!

By Suvarna News  |  First Published Feb 10, 2023, 4:53 PM IST

ದೀಪಾವಳಿ, ಹೊಸ ವರ್ಷ, ಕಂಪನಿ ಲಾಭಗಳಿಸಿದಾಗ ಉದ್ಯೋಗಿಗಳಿಗೆ ಬೋನಸ್, ಕಾರು ಉಡುಗೊರೆ ನೀಡುವುದನ್ನು ಕೇಳಿದ್ದೇವೆ. ಇದೀಗ ಕಂಪನಿ ಆರಂಭದಿಂದ ಜೊತೆಗಿರುವ ಮೊದಲ ಉದ್ಯೋಗಿಗೆ ಕೇರಳದ ಐಟಿ ಕಂಪನಿ ಮರ್ಸಡೀಸ್ ಬೆಂಜ್ ಕಾರು ಉಡುಗೊರೆಯಾಗಿ ನೀಡಿದೆ. 
 


ತಿಶ್ರೂರು(ಫೆ.10); ಜಾಗತಿಕ ಆರ್ಥಿಕ ಹಿಂಜರಿಕ ಕಾರಣದಿಂದ ಇತ್ತೀಚೆಗೆ ಬಹುತೇಕ ಕಂಪನಿಗಳು ಉದ್ಯೋಗಿಗಳ ವಜಾ ಮಾಡುತ್ತಿದೆ. ಭಾರತದಲ್ಲೂ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡಿದೆ. ಇದರ ನಡುವೆ ಕೇರಳ ಐಟಿ ಕಂಪನಿ ವಿಬ್ಯಾಂಡ್‌ಕ್ರಾಫ್ಟ್ ನಡೆಗೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಬ್ಯಾಂಡ್‌ಕ್ರಾಫ್ಟ್ ಐಟಿ ಕಂಪನಿ 2012ರಲ್ಲಿ ಆರಂಭಗೊಂಡಿದೆ.ಈ ಕಂಪನಿಗೆ ಮೊದಲ ಉದ್ಯೋಗಿಯಾಗಿ ಸೇರಿಕೊಂಡ ಕ್ಲೈಂಟ್ ಆ್ಯಂಟೋನಿ ಈಗಲೂ ಕಂಪನಿಯ ಯಶಸ್ಸಿಗಾಗಿ ಕೆಲಸ ಮಾಡುತ್ತಿದ್ದಾರೆ. ಕಂಪನಿಯ ಮೊದಲ ಉದ್ಯೋಗಿಗೆ ಇದೀಗ ವಿಬ್ಯಾಂಡ್‌ಕ್ರಾಫ್ಟ್ ಐಷಾರಾಮಿ ಮರ್ಸಿಡೀಸ್ ಬೆಂಜ್ ಕಾರು ಉಡುಗೊರೆಯಾಗಿ ನೀಡಿದೆ. ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಇದರ ಬೆಲೆ 57 ಲಕ್ಷ ರೂಪಾಯಿಂದ 63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಸದ್ಯ ಕ್ಲೈಂಟ್ ಆ್ಯಂಟೋನಿ ಕಂಪನಿಯ ಕ್ರಿಯೇಟಿವ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ.2012ರಲ್ಲಿ ವಿಬ್ಯಾಂಡ್‌ಕ್ರಾಫ್ಟ್ ಕಂಪನಿ ಕೇರಳದ ತ್ರಿಶೂರ್‌ನಲ್ಲಿ ಆರಂಭಗೊಂಡಿತು. ಕಂಪನಿ ಆರಂಭಿಸಿದಾಗ ಕೇವಲ ನಾಲ್ವರು ಉದ್ಯೋಗಿಗಳು ಕಂಪನಿಯ ಭಾಗವಾಗಿದ್ದರು. ಇದರಲ್ಲಿ ಕ್ಲೈಂಟ್ ಆ್ಯಂಟೋನಿ ಮೊದಲ ಉದ್ಯೋಗಿಯಾಗಿ ಕಂಪನಿ ಸೇರಿಕೊಂಡಿದ್ದರು. 2012ರಿಂದ ಸಕ್ರೀಯವಾಗಿ ಕೆಲಸ ಮಾಡುತ್ತಿರುವ ಕ್ಲೈಂಟ್ ಆ್ಯಂಟೋನಿ ಯಶಸ್ಸಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ್ದಾರೆ. ಆ್ಯಂಟೋನಿ ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವನೆಯ್ನು ಪರಿಗಣಿಸಿ ಕಂಪನಿ ದುಬಾರಿ ಉಡುಗೊರೆ ನೀಡಿದೆ.

Latest Videos

undefined

Dell Layoff: 6650 ಉದ್ಯೋಗಿಗಳ ಕಡಿತಕ್ಕೆ ಮುಂದಾದ ಪ್ರಸಿದ್ಧ ಟೆಕ್ ಕಂಪೆನಿ!

ಉದ್ಯೋಗಿಗಳೇ ನಮ್ಮ ಕಂಪನಿಯ ಬೆನ್ನೆಲುಬು. ಅವರ ಪರಿಶ್ರಮದಿಂದಲೇ ಕಂಪನಿ ಈ ಮಟ್ಟಕ್ಕೆ ಬೆಳೆದು ನಿಂತಿದೆ. ಕ್ಲೈಂಟ್ ಆ್ಯಂಟೋನಿ ಅವರ ಹಾರ್ಡ್‌ವರ್ಕ್ ಹಾಗೂ ಡಿಡಿಕೇಶನ್ ಪರಿಗಣಿಸಿ ಅವರಿಗೆ ಉಡುಗೊರೆ ನೀಡಿದ್ದೇವೆ. ನಾವು ಕ್ಲೈಂಟ್ ಆ್ಯಂಟೋನಿ ಅವರಂತ ಉದ್ಯೋಗಿಗಳನ್ನು ಹೊಂದಿದ್ದೇವೆ ಅನ್ನೋದು ನಮ್ಮ ಹೆಮ್ಮೆಯಾಗಿದೆ. ಕ್ಲೈಂಟ್ ಆ್ಯಂಟೋನಿ ಕಂಪನಿ ಆರಂಭದಿಂದಲೂ ಜೊತೆಗಿದ್ದಾರೆ. ಬೆರಳೆಣಿಗೆ ಉದ್ಯೋಗಿಗಳಿಂದ ಆರಂಭಗೊಂಡ ಕಂಪನಿ ಮೇಲೆ ನಂಬಿಕೆ ಇಟ್ಟು ಕಠಿಣ ಶ್ರಮವಹಿಸಿ ಆ್ಯಂಟೋನಿ ಕೆಲಸ ಮಾಡಿದ್ದಾರೆ. ಕಂಪನಿಯ ಯಶಸ್ಸಿನಲ್ಲಿ ಕ್ಲೈಂಟ್ ಆ್ಯಂಟೋನಿ ಪಾತ್ರ ಪ್ರಮುಖವಾಗಿದೆ. ಕ್ಲೈಂಟ್ ಆ್ಯಂಟೋನಿ ಅವರ ಪರಿಶ್ರಮ, ಕಂಪನಿ ಮೇಲಿರುವ ನಿಷ್ಠ ಹಾಗೂ ಕೆಲಸ ಮಾಡುವ ತುಡಿತಕ್ಕೆ ಕಂಪನಿ ಕಾರು ಉಡುಗೊರೆಯಾಗಿ ನೀಡುತ್ತಿದೆ ಎಂದು ವಿಬ್ಯಾಂಡ್‌ಕ್ರಾಫ್ಟ್ ಪ್ರಕಟಣೆಯಲ್ಲಿ ಹೇಳಿದೆ.

ವಿಬ್ಯಾಂಡ್‌ಕ್ರಾಫ್ಟ್ ಕಂಪನಿ ನಾಲ್ವರು ಉದ್ಯೋಗಿಗಳಿಂದ ಆರಂಭಗೊಂಡಿತು. ನಾಲ್ಕೇ ನಾಲ್ಕು ನೌಕರರಿಂದ ಆರಂಭಗೊಂಡ ಕಂಪನಿ ಇಂದು 300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಐಟಿ ಸೊಲ್ಯೂಶನ್ ಕಂಪನಿಯಾಗಿದ್ದು, ಇ ಕಾಮರ್ಸ್, ಮೊಬಿಲಿಟಿ ಸೊಲ್ಯೂಶನ್, ವೆಬ್ ಹಾಗೂ ಮೊಬೈಲ್ ಆ್ಯಪ್ಲಿಕೇಶನ್, ಡಿಜಿಟಲ್ ಮಾರ್ಕೆಟಿಂಗ್ ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದೆ. ದೇಶದ ಪ್ರತಿಷ್ಠಿತ ಕಂಪನಿಗಳು ವಿಬ್ಯಾಂಡ್‌ಕ್ರಾಫ್ಟ್ ಐಟಿ ಸರ್ವೀಸ್ ಪಡೆಯುತ್ತಿದೆ. 

Central Bank of India Recruitment 2023: ವಿವಿಧ 250 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಬ್ಯಾಂಡ್‌ಕ್ರಾಫ್ಟ್ ಕಂಪನಿಯ ನಡೆಗೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆರ್ಥಿಕ ಹಿಂಜರಿತ ವಿದೇಶಗಳಲ್ಲಿ ಪರಿಣಾಮ ಬೀರುತ್ತಿದೆ. ಆದರೆ ಭಾರತದಲ್ಲಿ ಸದ್ಯ ಯಾವುದೇ ಆರ್ಥಿಕ ಹಿಂಜರಿತವಿಲ್ಲ. ಆದರೂ ಕೆಲ ಕಂಪನಿಗಳು ಆರ್ಥಿಕ ಹಿಂಜರಿತ ಹೆಸರಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿದೆ. ಇದರ ನಡುವೆ ವಿಬ್ಯಾಂಡ್‌ಕ್ರಾಫ್ಟ್ ದುಬಾರಿ ಗಿಫ್ಟ್ ನೀಡಿರುವುದು ಮಾದರಿ ನಡೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಂಪನಿಗಾಗಿ ದುಡಿದು, ಕಂಪನಿಯ ಯಶಸ್ಸಿನಲ್ಲಿ ಕೊಡುಗೆ ನೀಡಿದ ಉದ್ಯೋಗಿಗಳಿಗ ಈ ರೀತಿಯ ಪ್ರೋತ್ಸಾಹ ಉಪಯುಕ್ತವಾಗಿದೆ. ವಿಬ್ಯಾಂಡ್‌ಕ್ರಾಫ್ಟ್ ಕಂಪನಿ ಅತೀ ದುಬಾರಿ ಗಿಫ್ಟ್ ನೀಡಿದೆ. ಈ ನಡೆಯನ್ನು ಎಲ್ಲಾ ಕಂಪನಿಗಳು ಅನುಸರಿಸಲಿ ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!