ಕೆಲಸದ ನಡುವೆ ಸಿಗರೇಟ್ ಸೇದುವುದು, ಚಹಾ ಬ್ರೇಕ್ ಸಾಮಾನ್ಯ. ಸಿಗರೇಟಿಗಾಗಿ ಹಲವು ಬ್ರೇಕ್ ಪಡೆಯುವರ ಸಂಖ್ಯೆ ಹೆಚ್ಚು. ಆದರೆ ಈ ಕಂಪನಿ ಹೊಸ ನಿಯಮ ಭಾರಿ ಬದಲಾವಣೆ ತಂದಿದೆ. ಇಲ್ಲಿ ಸ್ಮೋಕ್ ಮಾಡದ ಉದ್ಯೋಗಿಗಳಿಗೆ 6 ಹೆಚ್ಚುವರಿ ರಜೆ ನೀಡಲಾಗುತ್ತದೆ. ಇದರಿಂದ ಹಲವರು ಇದೀಗ ಸ್ಮೋಕಿಂಗ್ ಬಿಟ್ಟಿದ್ದಾರೆ.
ಟೊಕಿಯೋ(ಸೆ.24) ಕಚೇರಿ ಕೆಲಸ, ಒತ್ತಡ, ಕೆಲಸದ ನಡುವೆ ಬ್ರೇಕ್, ಈ ರೀತಿ ಪಡೆಯುವ ಬ್ರೇಕ್‌ನಲ್ಲಿ ಸಿಗರೇಟು ಚಹಾ ಹಲವರ ಅಭ್ಯಾಸವಾಗಿದೆ. ಬಹುತೇಕರು ಕೆಲಸದ ನಡುವೆ ಕನಿಷ್ಠ 3 ರಿಂದ 4 ಸ್ಮೋಕ್ ಬ್ರೇಕ್ ತೆಗೆದುಕೊಳ್ಳುತ್ತಾರೆ. ಆದರೆ ಇದೇ ಕಂಪನಿಯಲ್ಲಿ ಸಿಗರೇಟು ಸೇದದೆ ಕೇವಲ ಚಹಾ ಅಥವಾ ಕಾಫಿಗಾಗಿ ಮಾತ್ರ ಬ್ರೇಕ್ ಪಡೆಯುವವರೂ ಇರುತ್ತಾರೆ. ಇದೀಗ ಈ ಕಂಪನಿ ಸ್ಮೋಕ್ ಮಾಡದ ಉದ್ಯೋಗಿಗಳಿಗೆ ಹೊಸ ಆಫರ್ ನೀಡಿದೆ. ಸ್ಮೋಕ್ ಮಾಡದ ಉದ್ಯೋಗಿಗಳಿಗೆ ವಾರ್ಷಿಕವಾಗಿ 6 ರಜೆ ನೀಡಲಾಗುತ್ತದೆ. ಒಟ್ಟಿಗೆ 6 ರಜೆ ಪಡೆದು ಲೈಫ್ ಎಂಜಾಯ್ ಮಾಡಲು ಕಂಪನಿ ಸೂಚಿಸಿದೆ. ಈ ಹೊಸ ನಿಯಮ ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಈ ಕಂಪನಿಯಲ್ಲಿ ಕೈತುಂಬ ಸಂಬಳ ಕೂಡ ನೀಡಲಾಗುತ್ತಿದೆ. ಆದರೆ ಕಂಪನಿ ಜಪಾನ್‌ನಲ್ಲಿದೆ.
ಕಂಪನಿಯಲ್ಲಿ ಕೆಲಸ ಮಾಡುವ ನಾನ್ ಸ್ಮೋಕರ್(ಸಿಗರೇಟು ಸೇದದೇ ಇರುವವರು)ಗೆ ಗಮನದಲ್ಲಿಟ್ಟು ಪಿಯಾಲಾ ಇಂಕ್ ಮಾರ್ಕೆಟಿಂಗ್ ಕಂಪನಿ ಹೊಸ ನಿಯಮ ಜಾರಿಗೆ ತಂದಿದೆ. ಸಿಗರೇಟು ಸೇದುವವರು ಕೆಲ ಬ್ರೇಕ್ ಪಡೆಯುತ್ತಾರೆ. ಆದರೆ ನಾನ್ ಸ್ಮೋಕರ್ಸ್ ಈ ರೀತಿ ಬ್ರೇಕ್ ಪಡೆಯದೇ ಕೆಲಸ ಮಾಡುತ್ತಾರೆ. ಹೀಗಾಗಿ ಇಂತವರಿಗೆ ಕಂಪನಿ ಉಡುಗೊರೆ ನೀಡಿದೆ. ಯಾರು ಸಿಗರೇಟು ಸೇದದ ಉದ್ಯೋಗಿಗಳಿಗೆ ವಾರ್ಷಿಕ 6 ರಜೆ ಕಂಪನಿ ಹೆಚ್ಚುವರಿಯಾಗಿ ನೀಡಲಿದೆ.
undefined
ಸಿಕ್ ಲೀವ್‌ಗೆ 7 ದಿನ ಮೊದಲೇ ತಿಳಿಸಬೇಕು, ಬಾಸ್ ಮೆಸೇಜ್‌ಗೆ ನೆಟ್ಟಿಗರ ಕ್ಲಾಸ್!
ಈ ರಜೆ ನಾನ್ ಸ್ಮೋಕರ್ಸ್‌ಗೆ ಮಾತ್ರ. ಕುಟುಂಬ ಜೊತೆ, ಗೆಳೆಯರ ಜೊತೆ ಕಳೆಯಲು, ಬದುಕನ್ನು ಮತ್ತಷ್ಟು ಎಂಜಾಯ್ ಮಾಡಲು ಒಟ್ಟಿಗೆ 6 ರಜೆ ನೀಡುತ್ತಿದೆ. 6 ರಜೆಗೂ ಕಂಪನಿ ಪಾವತಿ ಮಾಡಲಿದೆ. ಕಂಪನಿಯ ಈ ನಿಯಮದಿಂದ ಇದೀಗ ಹಲವರು ಕುಟುಂಬಸ್ಥರು ಕಚೇರಿಯಲ್ಲಿ, ಕೆಲಸದ ನಡುವೆ ಸ್ಮೋಕಿಂಗ್ ತ್ಯಜಿಸಿದ್ದಾರೆ. ಕೆಲವರು ಕಡಿಮೆ ಮಾಡುತ್ತಾ ಬಂದು ಇದೀಗ ಸಂಪೂರ್ಣವಾಗಿ ಸ್ಮೋಕಿಂಗ್ ಬಿಟ್ಟಿದ್ದಾರೆ. ಇದರಿಂದ ಕಂಪನಿ ಉತ್ಪಾದಕತೆ ಹೆಚ್ಚಿದೆ ಎಂದು ಪಿಯಾಲ್ ಇಂಕ್ ಹೇಳಿದೆ.
ಪ್ರತಿ ಬಾರಿ 10 ರಿಂದ 15 ನಿಮಿಷ ಸ್ಮೋಕ್ ಬ್ರೇಕ್ ತೆಗೆದುಕೊಳ್ಳುತ್ತಾರೆ. ಇದು ವಾರ್ಷಿಕವಾಗಿ ಒಟ್ಟು ಗೂಡಿಸಿದರೆ 2 ರಿಂದ ಗರಿಷ್ಠ 3 ಕೆಲಸದ ಅವಧಿ ದಿನಗಳು ಬರಬಹುದು. ಆದರೆ ಈ ಬ್ರೇಕ್‌ನಿಂದ ಉತ್ಪಾದಕತೆ ಕುಂಠಿತಗೊಳ್ಳುತ್ತಿದೆ. ಇಷ್ಟೇ ಅಲ್ಲ ಸ್ಮೋಕ್ ಮಾಡದವರು ತಾವು ಸ್ಮೋಕಿಂಗ್ ಚಟ ರೂಢಿಸಿಕೊಳ್ಳದೇ ಇರುವುದು ತಪ್ಪು ಅನ್ನೋ ಭಾವನೆ ಬರುತ್ತಿತ್ತು. ಇದೀಗ ಸ್ಮೋಕರ್ಸ್ ಸಿಗರೇಟು ಬಿಡಲು ಪ್ರಯತ್ನಿಸುತ್ತಿದಾರೆ. ವರ್ಷದಲ್ಲಿ 6 ರಜೆ ಒಟ್ಟಿಗೆ ಪಡೆಯಲು ಸಾಧ್ಯವಿದೆ.
ನಿಮ್ಮ ಮಕ್ಕಳು ನಮ್ಮ ಉದ್ಯೋಗಿಗಳಲ್ಲ ಅವರ ಆರೋಗ್ಯಕ್ಕಾಗಿ ಸಿಕ್ ಲೀವ್ ಸಾಧ್ಯವಿಲ್ಲ; ಕಂಪನಿ ವಿವಾದ!
ಮಾರ್ಕೆಟಿಂಗ್ ಕಂಪನಿಯಲ್ಲಿನ ಕೆಲಸದ ಒತ್ತಡ ಹೆಚ್ಚಿರುತ್ತದೆ. ಹೀಗಾಗಿ ಸ್ಮೋಕರ್ಸ್ ಸಂಖ್ಯೆ ಹಾಗೂ ಸ್ಮೋಕಿಂಗ್ ಸಂಖ್ಯೆಯೂ ಹೆಚ್ಚಾಗಿತ್ತು. ಇದರಿಂದ ಹಲವರು ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಎಲ್ಲಾ ಸಮಸ್ಯೆಗೆ ಮುಕ್ತಿ ಹಾಕಲು ಹೊಸ ನಿಯಮ ಜಾರಿಗೆ ತಂದಿದ್ದೇವೆ. ಇದು ಯಶಸ್ವಿಯಾಗಿದೆ ಎಂದು ಕಂಪನಿ ಹೇಳಿದೆ.