Infosys Off Campus Drive 2022: 55,000 ಫ್ರೆಶರ್ ಹುದ್ದೆಗಳ ನೇಮಕಾತಿಗೆ ಮುಂದಾದ ಇನ್ಫೋಸಿಸ್‌

By Suvarna NewsFirst Published Jan 13, 2022, 3:32 PM IST
Highlights

ಇನ್ಫೊಸಿಸ್  ತನ್ನ ಜಾಗತಿಕ ಪದವೀಧರ ನೇಮಕಾತಿ ಕಾರ್ಯಕ್ರಮದ ಭಾಗವಾಗಿ ಎಫ್ ವೈ 22ಗೆ 55,000 ಫ್ರೆಶರ್ ಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ.

ಬೆಂಗಳೂರು(ಜ.13): ಭಾರತದ ಎರಡನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‌ಗೆ ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 5809 ಕೋಟಿ ರೂಪಾಯಿ ಲಾಭ ಬಂದಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇಕಡಾ 7.2ರಷ್ಟು ಏರಿಕೆ ಆಗಿದೆ. ಏಕೀಕೃತ ಆದಾಯದಲ್ಲೂ ಈ ತ್ರೈಮಾಸಿಕದಲ್ಲಿ ಶೇ 7.7ರಷ್ಟು ಏರಿಕೆ ವರದಿ ಮಾಡಿದ್ದು, ಡಿಸೆಂಬರ್ 2020ರಲ್ಲಿ ಘೋಷಿಸಲಾದ ಜರ್ಮನ್ ಆಟೋ ಪ್ರಮುಖ ಕಂಪೆನಿ ಡೈಮ್ಲರ್‌ನೊಂದಿಗಿನ ಹೈಬ್ರಿಡ್ ಕ್ಲೌಡ್ ಪಾಲುದಾರಿಕೆಯಿಂದಾಗಿ ವರದಿಯಾದ ಈ ತ್ರೈಮಾಸಿಕಕ್ಕೆ 31,867 ಕೋಟಿ ರೂಪಾಯಿ ಆದಾಯ ಬಂದಿದೆ.

ಇನ್ಫೋಸಿಸ್ ತ್ರೈಮಾಸಿಕದಿಂದ ತ್ರೈಮಾಸಿಕ ಶೇ 4.5ರಷ್ಟು ಬೆಳವಣಿಗೆ, ಏಕೀಕೃತ ಆದಾಯ ರೂ. 30,940 ಕೋಟಿಗಳಾಗಿದ್ದರೆ, ಅದರ ಏಕೀಕೃತ ನಿವ್ವಳ ಲಾಭವು ತ್ರೈಮಾಸಿಕದಲ್ಲಿ ಶೇಕಡಾ 5.2ರಷ್ಟು ಏರಿಕೆ ಆಗಿ, 5,701 ಕೋಟಿ ರೂಪಾಯಿ ತಲುಪಬಹುದು ಎಂದು ಸಿಎನ್​ಬಿಸಿ- ಟಿವಿ18 ಸಮೀಕ್ಷೆ ಅಂದಾಜಿಸಿತ್ತು. ಡಿಸೆಂಬರ್ 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಇನ್ಫೋಸಿಸ್ ನ ಆದಾಯವು ಶೇಕಡಾ 22.9 ರಿಂದ 31,867 ಕೋಟಿ ರೂ.ಗೆ ಏರಿದೆ/ಇದು ಒಂದು ವರ್ಷದ ಹಿಂದೆ 22,927 ಕೋಟಿ ರೂ.

ಇದರ ಬೆನ್ನಲ್ಲೇ, ಇನ್ಫೊಸಿಸ್ ( Infosys) ತನ್ನ ಜಾಗತಿಕ ಪದವೀಧರ ನೇಮಕಾತಿ ಕಾರ್ಯಕ್ರಮದ ( global graduate hiring program ) ಭಾಗವಾಗಿ ಎಫ್ ವೈ 22ಗೆ 55,000 ಫ್ರೆಶರ್ ಗಳನ್ನು ನೇಮಿಸಿಕೊಳ್ಳಲು  ಮುಂದಾಗಿದೆ. ವಿವಿಧ ಸುದ್ದಿ ಸಂಸ್ಥೆಗಳಿಗೆ ವಿವರಗಳನ್ನು ನೀಡಿದ ಮುಖ್ಯ ಹಣಕಾಸು ಅಧಿಕಾರಿ ನೀಲಂಜನ್ ರಾಯ್, ಐಟಿ ಸಂಸ್ಥೆಯು ಪ್ರತಿಭೆ ಸ್ವಾಧೀನ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗೆ ಆದ್ಯತೆ ನೀಡುವುದನ್ನು ಮುಂದುವರಿಸಿದೆ. ಬೆಳವಣಿಗೆಯ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸಲು ಎಫ್ ವೈ22 ಗೆ ಜಾಗತಿಕ ಪದವೀಧರ ನೇಮಕಾತಿ ( Infosys Recruitment) ಕಾರ್ಯಕ್ರಮವನ್ನು 55,000ಕ್ಕೂ ಹೆಚ್ಚು ಹೆಚ್ಚಿಸಿದೆ ಎಂದು ಹೇಳಿದರು.

KNNL Recruitment 2022: ಕರ್ನಾಟಕ ನೀರಾವರಿ ನಿಗಮದಲ್ಲಿನ ಸೆಕ್ರೆಟರಿ ಹುದ್ದೆಗೆ ಅರ್ಜಿ ಆಹ್ವಾನ

ಡಿಸೆಂಬರ್ 2021 ರ ಪ್ರಕಾರ ಇನ್ಫೊಸಿಸ್ ನಲ್ಲಿ ಒಟ್ಟು ಹೆಡ್ ಕೌಂಟ್ 2,92,067 ಆಗಿತ್ತು, ಹಿಂದಿನ ತ್ರೈಮಾಸಿಕದಲ್ಲಿ 2,79,617 ಮತ್ತು ಡಿಸೆಂಬರ್ 2020 ರ ಪ್ರಕಾರ 2,49,312 ಆಗಿತ್ತು. ಈ ಘೋಷಣೆಯೊಂದಿಗೆ, ಐಟಿ ದೈತ್ಯ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಹೊಸಬರಿಗೆ ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ.

ಹೆಚ್ಚಿನ ವಿವರಗಳನ್ನು ನೀಡಿದ ಇನ್ಫೊಸಿಸ್ ಸಿಇಒ ಮತ್ತು ಎಂಡಿ ಸಲೀಲ್ ಪಾರೇಖ್, ಕಂಪನಿಯ ಉದ್ಯೋಗಿಗಳ ಪ್ರತಿಭೆಯನ್ನು ಉತ್ತೇಜಿಸುವತ್ತ ಗಮನ ಹರಿಸಲಾಗುವುದು ಎಂದಿದ್ದಾರೆ. 'ಇದರ ಅಡಿಯಲ್ಲಿ, ಗ್ರಾಹಕರ ಪ್ರತಿಯೊಂದು ಅಗತ್ಯವನ್ನು ಪೂರೈಸಲು ನಮ್ಮ ಕಾರ್ಯಪಡೆಯನ್ನು ಕೌಶಲ್ಯಗೊಳಿಸಲು ನಾವು ಗಮನ ಹರಿಸುವುದನ್ನು ಮುಂದುವರಿಸುತ್ತೇವೆ. ಇದರೊಂದಿಗೆ ನೌಕರರ ಕಲ್ಯಾಣವೂ ನಮ್ಮ ಆದ್ಯತೆಯಲ್ಲಿ ಸೇರಿದೆ' ಎಂದು ಅವರು ಹೇಳಿದರು.

Bank of Baroda Recruitment 2022: ಪದವೀಧರರಿಗೆ ಸುವರ್ಣಾವಕಾಶ, ಇಂದೇ ಅರ್ಜಿ ಸಲ್ಲಿಸಿ

ಡಿಸೆಂಬರ್ 31ರ ತನಕ ಇ-ಫೈಲಿಂಗ್ ಪೋರ್ಟಲ್ ನಲ್ಲಿ 5.8 ಕೋಟಿ ಐಟಿಆರ್ ಸಲ್ಲಿಕೆ: 2021-22ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ( Income Tax Returns) ಸಲ್ಲಿಕೆಗೆ ಅಂತಿಮ ಗಡುವಾಗಿದ್ದ ಡಿಸೆಂಬರ್ 31ರ ತನಕ ಹೊಸ ಇ-ಫೈಲಿಂಗ್ (e-filling) ಪೋರ್ಟಲ್ ನಲ್ಲಿ (Portal) ಒಟ್ಟು  5.8 ಕೋಟಿ ರಿಟರ್ನ್ಸ್(Returns) ಸಲ್ಲಿಕೆಯಾಗಿದೆ ಎಂದು ಇನ್ಫೋಸಿಸ್ (Infosys) ಸಿಇಒ (CEO) ಸಲಿಲ್ ಪರೇಖ್ (Salil Parekh) ಮಾಹಿತಿ ನೀಡಿದ್ದಾರೆ. ಕೊನೆಯ ದಿನವೊಂದರಲ್ಲೇ  46ಲಕ್ಷ ರಿಟರ್ನ್ಸ್ ಫೈಲ್ ಆಗಿದೆ ಎಂದು ಅವರು ತಿಳಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ (Income Tax Department)ಇ-ಫೈಲಿಂಗ್ ಪೋರ್ಟಲ್ (e-filing portal) ಅನ್ನು ಇನ್ಫೋಸಿಸ್ ಸಂಸ್ಥೆ ಅಭಿವೃದ್ಧಿಪಡಿಸಿದೆ. 

click me!