ಮೈಸೂರಿನಲ್ಲಿ ಬೃಹತ್ ಉದ್ಯೋಗ ಮತ್ತು ಕೌಶಲ್ಯ ಮೇಳ ಆಯೋಜನೆ ಮಾಡಲಾಗಿದೆ. ಜನವರಿ 4 ರಿಂದ 8ರ ತನಕ ವಿವಿಧ ಸ್ಥಳಗಳಲ್ಲಿ ಮೇಳ ನಡೆಯಲಿದೆ.
ಮೈಸೂರು(ಜ.1): ಮೈಸೂರಿನಲ್ಲಿ ಬೃಹತ್ ಉದ್ಯೋಗ ಮತ್ತು ಕೌಶಲ್ಯ ಮೇಳ ಆಯೋಜನೆ ಮಾಡಲಾಗಿದೆ. ಜನವರಿ 4 ರಿಂದ 8ರ ತನಕ ವಿವಿಧ ಸ್ಥಳಗಳಲ್ಲಿ ಮೇಳ ನಡೆಯಲಿದೆ. ಕೆ. ಆರ್. ಕ್ಷೇತ್ರದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ ಎಂದು ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಶಾಸಕರು ಜನವರಿ 4ರಿಂದ ನಡೆಯುವ ಉದ್ಯೋಗ ಮತ್ತು ಕೌಶಲ್ಯ ನೋಂದಣಿ ಕಾರ್ಯಕ್ರಮದ ಪೂರ್ವ ಸಿದ್ಧತೆಯಾಗಿ ವಿವಿಧ ಅಧಿಕಾರಿಗಳ ಜತೆ ಸಭೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಜನವರಿ 4 ರಿಂದ 8ರ ತನಕ ಮಂಗಳವಾರದಿಂದ ಶನಿವಾರದ ತನಕ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ.
undefined
ಜನವರಿ 4, 2022ರಂದು ವಿದ್ಯಾಶಂಕರ ಕಲ್ಯಾಣ ಮಂಟಪ, ಗನ್ ಹೌಸ್ ವೃತ್ತದ ಬಳಿ. ಜನವರಿ 5ರಂದು ಒಕ್ಕಲಿಗರ ಹಾಸ್ಟೆಲ್, 2ನೇ ಮೇನ್, ವಿದ್ಯಾರಣ್ಯಪುರಂನಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
LAND SURVEYOR RECRUITMENT 2022: 3000 ಪರವಾನಗಿ ಭೂಮಾಪಕರ ನೇಮಕಾತಿಗೆ ಮತ್ತೆ ಅಧಿಸೂಚನೆ ಹೊರಡಿಸಿದ ಇಲಾಖೆ
ಜನವರಿ 6ರಂದು ನಿತ್ಯಾನಂದ ಕಲ್ಯಾಣ ಮಂಟಪ, ಸ್ಟರ್ಲಿಂಗ್ ಟಾಕೀಸ್ ಬಳಿ. ಜನವರಿ 7ರಂದು ಭ್ರಮರಾಂಭ ಕಲ್ಯಾಣ ಮಂಟಪ ಶ್ರೀರಾಂಪುರ 2ನೇ ಹಂತ ಮತ್ತು ಜನವರಿ 8ರಂದು ಸಾಮ್ರಾಟ್ ಕಲ್ಯಾಣ ಮಂಟಪ, ಉದಯರವಿ ರಸ್ತೆ, ಕುವೆಂಪು ನಗರ ಇಲ್ಲಿ ಉದ್ಯೋಗ ಮೇಳ ನಡೆಯಲಿದೆ.
ವಿವಿಧ ಹುದ್ದೆಗಳ ಭರ್ತಿಗೆ ಕರೆ ನೀಡಿದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ: ವೈದ್ಯಕೀಯ ವಿಜ್ಞಾನ ಸಂಸ್ಥೆ ಶಿವಮೊಗ್ಗ (shimoga institute of medical sciences -SIMS) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಸೈಂಟಿಸ್ಟ್-ಬಿ , ಲ್ಯಾಬ್ ಟೆಕ್ನೀಶಿಯನ್, ಡಾಟಾ ಎಂಟ್ರಿ ಆಪರೇಟರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿ ಒಟ್ಟು 4 ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಫ್ ಲೈನ್ (Offline) ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಆಸಕ್ತ ಅಭ್ಯರ್ಥಿಗಳು ಜನವರಿ 15 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ https://sims.karnataka.gov.in/ ಗೆ ಭೇಟಿ ನೀಡಿ.
NHM MP Recruitment 2022: ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.7 ಕೊನೆ ದಿನ
ಖಾಲಿ ಇರುವ 4 ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಸೈಂಟಿಸ್ಟ್-ಬಿ – 1 ಹುದ್ದೆ
ಲ್ಯಾಬ್ ಟೆಕ್ನೀಶಿಯನ್ – 1 ಹುದ್ದೆ
ಡಾಟಾ ಎಂಟ್ರಿ ಆಪರೇಟರ್ (DEO) – 1 ಹುದ್ದೆ
ಮಲ್ಟಿ ಟಾಸ್ಕಿಂಗ್ ಸ್ಟಾಫ್ – 1 ಹುದ್ದೆ
ಶೈಕ್ಷಣಿಕ ವಿದ್ಯಾರ್ಹತೆ: ಸೈಂಟಿಸ್ಟ್-ಬಿ (Scientist-B (Medical), ಲ್ಯಾಬ್ ಟೆಕ್ನೀಶಿಯನ್(Laboratory Technician ), ಡಿಇಒ (Data Entry Operator) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi Tasking Staff) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವ ವಿದ್ಯಾಲಯದಿಂದ ಕಡ್ಡಾಯವಾಗಿ ಎಂಡಿ/ಎಂಎಸ್/ಡಿಎನ್‌ಬಿ/ಎಂಡಿಎಸ್/ಎಂ.ವಿ.ಎಸ್ಸಿ ಮತ್ತು ಎಹೆಚ್, ಬಿ.ಎಸ್ಸಿ, ಪದವಿಯನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ https://sims.karnataka.gov.in/ಗೆ ಭೇಟಿ ನೀಡಿ, ಅಧಿಸೂಚನೆಯಲ್ಲಿನ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಮಾಹಿತಿಯನ್ನು ಭರ್ತಿ ಮಾಡಬೇಕು. ಆ ಬಳಿಕ ಅಲ್ಲಿ ಕೇಳಲಾದ ದಾಖಲೆಗಳನ್ನು ಲಗತ್ತಿಸಿ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಸೂಚನೆ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಬೇಕಾದ ವಿಳಾಸ:
ನಿರ್ದೇಶಕರು ಮತ್ತು ಡೀನ್
ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ,
ಸಾಗರ ರಸ್ತೆ,
ಶಿವಮೊಗ್ಗ-577201
Director & Dean
Shimoga Institute of Medical Sciences
Sagar Road
Shimoga – 577201