Ola ಕಂಪನಿಯಲ್ಲಿ 10,000 ಉದ್ಯೋಗಾವಕಾಶಗಳು !

By Suvarna News  |  First Published Oct 22, 2021, 11:00 AM IST

-ಓಲಾ ಕಾರ್ಸ್‌ ಸೇವೆ ವಿಸ್ತರಿಸಲು 10,000 ಜನರ ನೇಮಕಾತಿ!
-ದೇಶದ 100 ನಗರಗಳಿಗೆ ವಿಸ್ತರಿಸಲಿದೆ ಓಲಾ ಕಾರ್ಸ್‌
-ಈಗಾಗಲೇ 5,000 ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟ


ಬೆಂಗಳೂರು (ಅ. 22): ದೇಶದ ಪ್ರಸಿದ್ಧ ಕ್ಯಾಬ್‌ ಕಂಪನಿ ಓಲಾ (Ola) ಶೀಘ್ರದಲ್ಲೇ ಹತ್ತು ಸಾವಿರ ಜನರ ನೇಮಕಾತಿ ಮಾಡಲಿದೆ ಎಂದು ತಿಳಿಸಿದೆ. ಮುಂದಿನ 12 ಹನ್ನೆರಡು ತಿಂಗಳಲ್ಲಿ ತನ್ನ ಓಲಾ ಕಾರ್ಸ್‌ನ (Ola Cars) ಒಟ್ಟು ಸರಕು ಬೆಲೆಯನ್ನು (GMV) 2  ಬಿಲಿಯನ್‌ನಷ್ಟು ಹೆಚ್ಚಿಸಲು ಓಲಾ ನಿರ್ಧರಿಸಿದೆ. ಓಲಾ ಕಾರ್ಸ್‌ ಒಂದು ತಿಂಗಳ ಕಾರ್ಯಾಚರಣೆಯಲ್ಲಿ ಈಗಾಗಲೇ 5,000 ಸೆಕೆಂಡ್‌ ಹ್ಯಾಂಡ್‌ ಕಾರುಗಳನ್ನು ಮಾರಾಟ ಮಾಡಿದೆ. ಈ ವ್ಯಾಪಾರವನ್ನು ಇನ್ನಷ್ಟು ಹೆಚ್ಚಿಸಲು ಓಲಾ ಈಗ ನೇಮಕಾತಿಗಳನ್ನು ಮಾಡುವುದಾಗಿ ತಿಳಿಸಿದೆ.

ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಳ: ನಿರಾಣಿ

Tap to resize

Latest Videos

undefined

ಸಾಲು ಸಾಲು ಹಬ್ಬಗಳ ಈ ಸೀಸನ್‌ನಲ್ಲಿ ದೆಹಲಿ(Delhi), ಮುಂಬೈ. ಪುಣೆ. ಬೆಂಗಳೂರು(Bengaluru), ಚೆನ್ನೈ, ಹೈದರಾಬಾದ್‌ ಮತ್ತು ಅಹಮಾದಾಬಾದ್‌ ನಗರಗಳಲ್ಲಿ ಪ್ರಿ ವೋನ್ಡ್‌ ಕಾರುಗಳು (Pre Owned Cars) ಮಾರಾಟ ಆರಂಭಿಸಿದೆ. ಅಲ್ಲದೇ ಈ ವಾರದಲ್ಲಿ ಈ ಸೇವೆಯನ್ನು ಚಂಢಿಘಡ, ಕೋಲ್ಕತ್ತಾ ಮತ್ತು ಜೈಪುರಕ್ಕೆ ವಿಸ್ತರಿಸಲಿದೆ. ಈ ಎಲ್ಲ ಸೇವೆಗಳನ್ನು ಓಲಾ ಆ್ಯಪ್ (Ola App) ಮೂಲಕವೇ ನೀಡಲಿದೆ. ಮುಂದಿನ ಎರಡು ತಿಂಗಳಲ್ಲಿ ಓಲಾ ತನ್ನ ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟ  ಸೇವೆಯನ್ನು  30 ನಗರಗಳಿಗೆ ವಿಸ್ತರಿಸಲಿದೆ ಹಾಗೂ ಮುಂದಿನ ವರ್ಷದ ತನಕ 100 ನಗರಗಳನ್ನು ತಲುಪುವ ಗುರಿ ಹೊಂದಿದೆ.  

ಗ್ರಾಹಕರಿಗೆ ವಿಶೇಷ ಸೇವೆಗಳನ್ನು ನೀಡಲಿರುವ ಓಲಾ!

ಓಲಾ ಮೂಲಕ ಕಾರು ಖರೀದಿಸಿದಾಗ ಹಲವಾರು ವಿಶೇಷ ಸೇವೆಗಳನ್ನು ನೀಡುವುದಾಗಿ ಓಲಾ ತಿಳಿಸಿದೆ. ಮನೆಯ ಬಳಿಯೇ ಟೆಸ್ಟ್‌ ಡ್ರೈವ್‌ (Test drive) ಸೇರಿದಂತೆ ಕಾರು ನಿಮಗೆ ಇಷ್ಟವಾಗದಿದ್ದರೆ ಏಳು ದಿನಗಳಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ಹಿಂತಿರಿಗಿಸುವ ಅವಕಾಶವನ್ನು ಓಲಾ ನೀಡುತ್ತಿದ್ದೆ. 'ಓಲಾ ಕಾರ್ಸ್‌ ಮೂಲಕ ಕಾರು ಖರೀದಿಯ, ಮಾಲೀಕತ್ವದ ಮತ್ತು ಮಾರಾಟದ ಅನುಭವಕ್ಕೆ ಹೊಸ ವ್ಯಾಖ್ಯಾನವನ್ನು ನೀಡುತ್ತಿದ್ದೇವೆ' ಎಂದು ಓಲಾ ಸಿಇಓ ಅರುಣ್‌ ಸರ್‌ದೇಶ್‌ಮುಖ್ (CEO Arun sirdeshmukh) ಹೇಳಿದ್ದಾರೆ. 'ಹೊಸ ಕಾರು ಖರೀದಿಗಿಂತ ಉತ್ತಮ ಅನುಭವ ನೀಡುವ ನಮ್ಮ ಸೇವೆಯನ್ನು ಮುಂದಿನ ದಿನಗಳಲ್ಲಿ ದೇಶದ 100 ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಹೊಂದಿದ್ದೇವೆ ಅಲ್ಲದೇ ಈಗಾಗಲೇ ಓಲಾ ಕಾರ್ಸ್‌ ಮೂಲಕ 5,000 ಕಾರುಗಳನ್ನು ಮಾರಾಟ ಮಾಡಲಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸೇವೆಗಳನ್ನು ವಿಸ್ತರಿಸಲು ಸೇಲ್ಸ್‌ ಆ್ಯಂಡ್‌ ಸರ್ವಿಸ್‌ (Sales and Services) ವಿಭಾಗದಲ್ಲಿ 10,000 ಜನರ ನೇಮಕಾತಿಗಳನ್ನು ಮಾಡಲಿದ್ದೇವೆ ಎಂದು ಅರುಣ್‌ ತಿಳಿಸಿದ್ದಾರೆ.

UPSC ನೇಮಕಾತಿ: ಕೇಂದ್ರದಲ್ಲಿ ಖಾಲಿ ಇರುವ 56 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ವಿಸ್‌ ಕೇಂದ್ರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ!

ಓಲಾ ಕಾರು ಮಾರಾಟ ಸೇವೆಗಳನ್ನು ಉತ್ತಮಗೊಳಿಸಲು ದೇಶಾದ್ಯಂತ  ಸರ್ವಿಸ್‌ ಕೇಂದ್ರಗಳನ್ನು (Service centres)  ತೆರೆಯುತ್ತಿದೆ. ಅಲ್ಲದೇ ಈ ಕೇಂದ್ರಗಳಲ್ಲಿ ಟೆಲಿಮ್ಯಾಟಿಕ್ಸ(Telematics), ಕೃತಕ ಬುದ್ದಿಮತ್ತೆ (AI) ಮತ್ತು ವಿಷನ್‌ ಬೇಸಡ್‌ ಸಿಸ್ಟಮ್‌ (vision based System) ಅಳವಡಿಸಲಾಗುವುದು ಎಂದು ಓಲಾ ತಿಳಿಸಿದೆ. ಜತೆಗೆ ಅತ್ಯಾಧುನಿಕ ರೊಬೊಟಿಕ್ಸ್‌ ಪೇಂಟ್‌ ಶಾಪ್ಸ್ (Robotics Paint Shops), ರಿಪೇರ ವರ್ಕ್‌ ಸೇರಿದಂತೆ ಸಾಕಷ್ಟು ಸೇವೆಗಳನ್ನು ನೀಡಲು ಓಲಾ ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರುಗಳ ಜತೆ ತನ್ನ ಓಲಾ ಎಲೆಕ್ಟ್ರಿಕ್‌  (Ola electric) ಕಾರು ಸೇರಿದಂತೆ ಇತರ ಕಂಪನಿಗಳ ಹೊಸ ಕಾರುಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ ಓಲಾ. 2,400 ಕೋಟಿ ವೆಚ್ಚದಲ್ಲಿ ಜಗತ್ತಿನ ಅತ್ಯಂತ ದೊಡ್ಡ ಇಲೆಕ್ಟ್ರಿಕ ವೆಹಿಕಲ್‌ (Electric Vehicle) ಫ್ಯಾಕ್ಟರಿಯನ್ನು ಆರಂಭಿಸುವ ನಿಟ್ಟಿನಲ್ಲಿ ಓಲಾ ಚಿಂತಿಸುತ್ತಿದೆ. ಹಾಗಾಗಿ ಓಲಾ ಕಂಪನಿಯ ಸಾಕಷ್ಟು ಉದ್ಯೋಗವನ್ನು ಸೃಷ್ಟಿ ಮಾಡಲಿದೆ. ಈಗ ಸದ್ಯದ ಮಟ್ಟಿಗೆ ತನ್ನ ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟದ ಸೇಲ್ಸ್‌ ಮತ್ತು ಸೇವೆಗಳನ್ನು ವಿಸ್ತರಿಸಲು 10,000 ಜನರ  ನೇಮಕಾತಿ ಮಾಡಲಿದೆ ಎಂದು ಓಲಾ ತಿಳಿಸಿದೆ. ಇತ್ತೀಚೆಗೆ ಬೆಂಗಳೂರಿನ  ಇಂದಿರಾ ನಗರದಲ್ಲಿರುವ ಓಲಾ ಇಲೆಕ್ತ್ರಿಕ್‌ ಎಸ್1 ಕಂಪನಿ ಮುಂದೆ ನಿಂತು ಸೆಲ್ಫಿಗೆ ಪೋಸ್‌ ಕೊಟ್ಟಿರುವ ಪೋಟೋವನ್ನು ಓಲಾ ಕ್ಯಾಬ್ಸ್‌ ಸಿಇಓ ಭಾವಿಶ್‌ ಅಗರ್‌ವಾಲ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. 

 

Me and getting a coffee with the S1 at in Indiranagar, Bangalore. Come take a look!https://t.co/ZeWQWLSAkL pic.twitter.com/M7miVCOOn7

— Bhavish Aggarwal (@bhash)

 

click me!