ಭಾರತದಲ್ಲಿ IBM ನೇಮಕಾತಿ: ಫ್ರೆಶರ್ಸ್‌ಗೆ ಅವಕಾಶ

By Suvarna News  |  First Published Sep 14, 2021, 4:07 PM IST

ಬಹುರಾಷ್ಟ್ರೀಯ ಕಂಪನಿಗಳ ಪೈಕಿ ಪ್ರಮುಖ ಕಂಪನಿ ಎನಿಸಿಕೊಂಡಿರುವ ಐಬಿಎಂ ಭಾರತದಲ್ಲಿ ನೇಮಕಾತಿ ಆರಂಭಿಸಲಿದೆ. ಕಂಪನಿಯು ಹೊಸ ಪದವೀಧರರಿಗೆ ಅವಕಾಶ ನೀಡಲು ಮುಂದಾಗಿದ್ದು, ಆಸಕ್ತರು ಐಬಿಎಂ ನೇಮಕಾತಿ ಬಗ್ಗೆ ತಿಳಿದುಕೊಳ್ಳಬಹುದು. ಭಾರತದಲ್ಲಿರುವ ತನ್ನ ಕಚೇರಿಗಳಲ್ಲಿ ಅಸೋಸಿಯೇಟ್ ಸಿಸ್ಟಮ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳೋದಾಗಿ ಪ್ರಕಟಿಸಿದೆ


ನೀವು ಡಿಗ್ರಿ ಕೊನೆ ವರ್ಷದ ಹೊಸ್ತಿಲಲ್ಲಿ ಇದ್ದೀರಾ..? ಅದರಲ್ಲೂ ಇಂಜಿನಿಯರಿಂಗ್ ಪದವಿ ಓದುತ್ತಿದ್ದೀರಾ? ಡಿಗ್ರಿ ಪೂರೈಸಿ ಅಕ್ಸೆಂಚರ್, ಇನ್ಫೋಸಿಸ್, ಐಬಿಎಂನಂತಹ ಒಳ್ಳೆಯ ಕಂಪನಿಗಳಲ್ಲಿ ಕೆಲಸಕ್ಕೆ ಸೇರಲು ಹುಡುಕಾಟ ನಡೆಸ್ತಿದ್ದೀರಾ?.. ಹಾಗಿದ್ರೆ ನಿಮಗೆ ಸೂಟೇಬಲ್ ಆಗುವಂತಹ ಅವಕಾಶವೊಂದು ಇಲ್ಲಿದೆ ನೋಡಿ.

ಪ್ರತಿಷ್ಠಿತ ಕಾರ್ಪೊರೇಟ್ ಕಂಪನಿಗಳಲ್ಲಿ ಒಂದಾದ ಇಂಟರ್ನ್ಯಾಷನಲ್ ಬ್ಯುಸಿನೆಸ್ ಮೆಷಿನ್ (IBM), ಹಲವು ಹುದ್ದೆಗಳನ್ನ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಅಮೆರಿಕಾ ಮೂಲದ ಈ ಐಬಿಎಂ ಕಂಪನಿಯು, ಭಾರತದಲ್ಲಿರುವ ತನ್ನ ಕಚೇರಿಗಳಲ್ಲಿ ಅಸೋಸಿಯೇಟ್ ಸಿಸ್ಟಮ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳೋದಾಗಿ ಪ್ರಕಟಿಸಿದೆ. ಐಬಿಎಂ ಘೋಷಿಸಿದ ನೇಮಕಾತಿ ಸೂಚನೆಯಲ್ಲಿ ಕಂಪನಿಗೆ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಹೊಸ ಪದವೀಧರರನ್ನು ನೇಮಿಸಿಕೊಳ್ಳೋದಾಗಿ ತಿಳಿಸಿದೆ. ಹೊಸ ಪದವೀಧರರು, ವಿವಿಧ ವೇದಿಕೆಗಳು ಮತ್ತು ತಂತ್ರಜ್ಞಾನಗಳಲ್ಲಿ ಅಪ್ಲಿಕೇಶನ್‌ಗಳ ವಿನ್ಯಾಸ, ಕೋಡ್‌ಗಳನ್ನು ಬರೆಯುವುದು, ಪರೀಕ್ಷೆ, ಡೀಬಗ್ ಮತ್ತು ಸಾಫ್ಟ್‌ವೇರ್ ಅಪ್ಲಿಕೇಶನ್‌ಗಳನ್ನು ನಿರ್ವಹಿಸುವ ತಂಡದ ಉದ್ದೇಶಗಳ ಮೇಲೆ ಕೇಂದ್ರೀಕರಿಸಬೇಕಾಗುತ್ತದೆ. 

Tap to resize

Latest Videos

undefined

ಅಭ್ಯರ್ಥಿಯು ವೈಯಕ್ತಿಕ/ ತಂಡದ ಉದ್ದೇಶಗಳ ಮೇಲೆ ಕೇಂದ್ರೀಕರಿಸಬೇಕು. ಜೊತೆಗೆ ವೃತ್ತಿಪರ ಪರಿಣಾಮಕಾರಿತ್ವದ ಬೆಳವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು ಅಂತ IBM ಹೇಳಿದೆ. ಪ್ರೊಗ್ರಾಮಿಂಗ್ (ಜಾವಾ, ಪೈಥಾನ್, ನೋಡ್.ಜೆಎಸ್) & ಸಾಫ್ಟ್‌ವೇರ್ ಡೆವಲಪ್ಮೆಂಟ್ ಲೈಫ್ ಸೈಕಲ್ ಕಾನ್ಸೆಪ್ಟ್ಸ್  ಕೌಶಲ್ಯ ಗಳನ್ನು ತಿಳಿದಿರಬೇಕು. 

HALನಲ್ಲಿ ಅಪ್ರೆಂಟಿಶಿಪ್: ಡಿಪ್ಲೋಮಾ, ಪದವೀಧರರಿಗೆ ಅವಕಾಶ

ಐಟಿ ಉದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಬಲವಾದ ಜ್ಞಾನ ಹೊಂದಿದ್ದು ಅಗತ್ಯವಿರುವ ವೇದಿಕೆಯಲ್ಲಿ ತಾಂತ್ರಿಕ ವಾಸ್ತುಶಿಲ್ಪವನ್ನು ವ್ಯಾಖ್ಯಾನಿಸುವುದು, ವಿಶ್ಲೇಷಿಸುವುದು ಮತ್ತು ಪರಿಶೀಲಿಸುವುದು ಅಥವಾ  ತಾಂತ್ರಿಕ ಅವಶ್ಯಕತೆಗಳಿಗೆ ಪರಿಹಾರ ಕಂಡುಕೊಳ್ಳಲು ವಾಸ್ತುಶಿಲ್ಪಕ್ಕೆ ವ್ಯಾಖ್ಯಾನಿಸುವುದು, ವಿವರಿಸುವುದು ಮತ್ತು ಸ್ಕೋಪಿಂಗ್ ಮಾಡುವುದು ಅಥವಾ ಆರ್ಕಿಟೆಕ್ಚರಲ್ ಸ್ಟ್ಯಾಂಡ್ ಪಾಯಿಂಟ್‌ನಿಂದ ಸ್ವತಂತ್ರವಾಗಿ ಪ್ರಾಜೆಕ್ಟ್ ನಿರ್ವಹಣೆಯ ಸಾಮರ್ಥ್ಯ ಹೊಂದಿರಬೇಕು. ಜೊತೆಗೆ ನಿರರ್ಗಳವಾಗಿ (ಲಿಖಿತ ಮತ್ತು ಮಾತನಾಡುವ ಎರಡೂ) ಪರಸ್ಪರ ನಿರ್ವಹಿಸುವ ಕೌಶಲ್ಯ ಹೊಂದಿರಬೇಕು

ಡಿಸೈನ್, ಡೆವಲಪ್ ಅಥವಾ ರೀ-ಇಂಜಿನಿಯರ್ ಅಪ್ಲಿಕೇಶನ್ ಕಾಂಪೋನೆಂಟ್ಸ್ ಹಾಗೂ ಇಂಟಿಗ್ರೇಟ್ ಸಾಫ್ಟ್‌ವೇರ್ ಪ್ಯಾಕೇಜಸ್,  ಪ್ರೋಗ್ರಾಂಸ್ ವಿವಿಧ ಪ್ಲಾಟ್ ಫಾರಂ ಗಳಲ್ಲಿ ಕಾರ್ಯನಿರ್ವಹಿಸಬೇಕು. ತಾಂತ್ರಿಕ ಸಲಹೆಗಾರರನ್ನು ಬೆಂಬಲಿಸುವ ಸಾಮರ್ಥ್ಯ ಮತ್ತು ಪರಿಹಾರಗಳನ್ನು ನಿರ್ಮಿಸುವಲ್ಲಿ ಮತ್ತು ತಾಂತ್ರಿಕ ಮಾರ್ಗದರ್ಶನ ಒದಗಿಸುವಲ್ಲಿ ಮುನ್ನಡೆಸಬೇಕಾಗುತ್ತದೆ.

ಕಂಪನಿಗೆ ಪ್ರವೇಶವಾಗುವ ಹಂತದಲ್ಲಿ ಅಭ್ಯರ್ಥಿಗಳು ತಮ್ಮ ಅಂತಿಮ ವರ್ಷದ ಪದವಿಯಲ್ಲಿರಬೇಕು.ಆನಂತರ  IBM ನಲ್ಲಿ ಉದ್ಯೋಗಕ್ಕೆ ಸೇರುವ ಸಂದರ್ಭದಲ್ಲಿ ತಮ್ಮ ಪದವಿಯನ್ನು ಪಡೆದಿರಬೇಕು. ಸಿಇಎಸ್/ ಐಟಿ/ ಗಣಿತದಲ್ಲಿ ಬಿಇ/ ಎಂಟೆಕ್/ ಎಂಎಸ್ಸಿ/ ಎಂಸಿಎ ಅಥವಾ 6 ಸಿಜಿಪಿಎಯೊಂದಿಗೆ ಇತರ ಅರೆ ಐಟಿ/ ಸರ್ಕ್ಯೂಟಶಾಖೆಗಳಲ್ಲಿ ಯಾವುದಾದರೂ ಒಂದು ಪದವಿ/ಕೋರ್ಸ್ ಪೂರೈಸಿರಬೇಕು.

ವೆಸ್ಟರ್ನ್‌ ಕೋಲ್ ಫೀಲ್ಡ್‌ನಲ್ಲಿ 965 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇನ್ನು ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಯು, ಮುಂಬೈ, ಪುಣೆ,  ದೆಹಲಿ-ಎನ್ಸಿಆರ್ ಗುರ್ಗಾಂವ್,  ನೋಯ್ಡಾ ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್ ಹಾಗೂ ಬೆಂಗಳೂರಿನ ಕಚೇರಿಗಳಲ್ಲಿ ಕೆಲಸ ಮಾಡಬಹುದು.

ಕಂಪನಿಯು, "ನಾವು ಹೊಂದಿಕೊಳ್ಳುವ ಕೆಲಸದ ವಾತಾವರಣಕ್ಕೆ ಹೆಸರುವಾಸಿಯಾಗಿದ್ದೇವೆ. ಆದಾಗ್ಯೂ, ಮನೆಯಿಂದ ಕೆಲಸ ಮಾಡುವ ಆಯ್ಕೆಯು ಅರ್ಹತೆಯಲ್ಲ, ಇದು ಸಂಪೂರ್ಣವಾಗಿ ಕರ್ತವ್ಯವನ್ನು ಅವಲಂಬಿಸಿರುತ್ತದೆ. ಅನೇಕ ಉದ್ಯೋಗಿಗಳುಮ್ಮ ಕುಟುಂಬಗಳ ಅಗತ್ಯಗಳನ್ನು ಬ್ಯಾಲೆನ್ಸ್ ಮಾಡುತ್ತಾ ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿಗಳು ನಮಗೆ ಬಹಳ ಮುಖ್ಯ, ಮತ್ತು ನಾವು ಅವರ ಸಂಪರ್ಕದಲ್ಲಿರಲು ಬಯಸುತ್ತೇವೆವಎಂದು ಕಂಪನಿಯ ಹೇಳಿದೆ.

ಐಟಿಐ ಪಾಸು ಮಾಡಿದ್ದೀರಾ? ಇಸಿಐಎಲ್‌ನಲ್ಲಿ 243 ಅಪ್ರೆಂಟಿಸ್‌ ಹುದ್ದಗೆಳಿಗೆ ನೇಮಕಾತಿ

ಕೊರೊನಾ ಹಿನ್ನೆಲೆಯಲ್ಲಿ ಭಾರತೀಯ ಉದ್ಯಮದ ಮೇಲೆ ಸಾಕಷ್ಟು ಹೊಡೆತ ಬಿದ್ದಿದೆ. ಈಗಷ್ಟೇ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಅನೇಕ ಕಂಪನಿಗಳು ನೇಮಕಾತಿಯನ್ನು ಮಾಡಿಕೊಳ್ಳುತ್ತಿವೆ. ಇದು ಆರ್ಥಿಕ ಚಟುವಟಿಕೆಯ ದೃಷ್ಟಿಯಿಂದ ತುಂಬ ಒಳ್ಳೆಯ ಬೆಳವಣಿಗೆಯಾಗಿದೆ.

click me!