ಅಮೆಜಾನ್‌ನಿಂದ ಬೃಹತ್ ಉದ್ಯೋಗ ಮೇಳ, 55,000 ಹುದ್ದೆಗಳ ನೇಮಕ

By Suvarna News  |  First Published Sep 5, 2021, 4:54 PM IST

* ಅಮೆಜಾನ್ ಸಂಸ್ಥೆಯಿಂದ ಬೃಹತ್ ಉದ್ಯೋಗ ಮೇಳ
* 55,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾದ ಅಮೆಜಾನ್ 
* ಕೊರೋನಾ ನಡುವೆ ಅಮೇಜಿಂಗ್ ನೇಮಕಾತಿ ಮಾಡಲಿರುವ ಅಮೆಜಾನ್


ಬೆಂಗಳೂರು, (ಸೆ. 05):  ಜಾಗತಿಕವಾಗಿ ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿರುವ ಅಮೆಜಾನ್​​ ಕಂಪನಿಯು 55,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಅಮೆಜಾನ್​​.ಕಾಂ ಅಂತಾರಾಷ್ಟ್ರೀಯ ಕಂಪನಿಯು ಜಾಗತಿಕ ಮಟ್ಟದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡುತ್ತಿದೆ. ಸೆಪ್ಟೆಂಬರ್ 15ರಿಂದ ವಿಶ್ವದೆಲ್ಲೆಡೆ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಂಡಿ ಜಸ್ಸಿ ಹೇಳಿದ್ದಾರೆ.

Latest Videos

undefined

ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಾಗತಿಕವಾಗಿ 275,000 ಮಂದಿ ಉದ್ಯೋಗಿಗಳನ್ನು ಹೊಂದಿರುವ ಅಮೆಜಾನ್ ಈಗ ಕೆರಿಯರ್​ ಡೇ ಮೂಲಕ ಇನ್ನೂ ಶೇ. 20 ರಷ್ಟು (55 ಸಾವಿರ ಮಂದಿ) ಟೆಕ್​ ಮತ್ತು ಕಾರ್ಪೊರೇಟ್​​ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ ಎಂದು ಕಂಪನಿಯ ಮುಖ್ಯಸ್ಥ ಆಂಡಿ ಜಸ್ಸಿ ಹೇಳಿದ್ದಾರೆ

55,000 ಉದ್ಯೋಗಿಗಳ ನೇಮಕಾತಿಯ ಪ್ರಕ್ರಿಯೆಯಲ್ಲಿ ಭಾರತ, ಜರ್ಮನಿ ಮತ್ತು ಜಪಾನ್​ ದೇಶಗಳಿಂದ 40 ಸಾವಿರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ ಮತ್ತು ಉಳಿದ ಹುದ್ದೆಗಳನ್ನು ಯುಎಸ್ ನಲ್ಲಿ ನೇಮಕಾತಿ ಮಾಡಲಾಗುವುದು. ಎಂಜಿನಿಯರಿಂಗ್, ಸಂಶೋಧನಾ ವಿಜ್ಞಾನ, ರೊಬೋಟಿಕ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಂಪನಿಗೆ ಉದ್ಯೋಗಿಗಳು ಬೇಕಾಗಿದ್ದಾರೆ. ಬದಲಾದ ಜಾಗತಿಕ ನಿಯಮಗಳಿಗೆ ಅನುಸಾರವಾಗಿ ಉದ್ಯೋಗಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿಯೂ ಅವರು ತಿಳಿಸಿದ್ದಾರೆ.

click me!