ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡಲು ಟಿಮ್ ಕುಕ್ ರಹಸ್ಯ ಬಿಚ್ಚಿಟ್ಟಿದ್ದಾರೆ. ಒನ್ ಪ್ಲಸ್ ಒನ್ 3 ಎಂದು ಉದ್ಯೋಗಿಗಳು ಅನ್ಕೋಳ್ಳೋದಾದ್ರೆ ಅವರು ಕೆಲಸಕ್ಕೆ ಸೇರಬಹುದು ಎಂದಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ..
ದೆಹಲಿ (ನವೆಂಬರ್ 27, 2023): ತಂತ್ರಜ್ಞಾನದ ಜಗತ್ತಿನ ವೃತ್ತಿಪರರು ಗೂಗಲ್, ಆ್ಯಪಲ್‌ನಂತಹ ಕಂಪನಿಯಲ್ಲಿ ಕೆಲಸ ಮಾಡ್ಬೇಕು ಅನ್ಕೋತಾರೆ. ಏಕೆಂದರೆ, ಜಗತ್ತಿನ ಪ್ರತಿಷ್ಠಿತ ಕಂಪನಿಗಳಲ್ಲಿ ಆ್ಯಪಲ್ ಸಹ ಒಂದು. ಇದು ಉತ್ಪನ್ನ ತಯಾರಿಕೆಯಲ್ಲಿ ಅದರ ಆವಿಷ್ಕಾರಕ್ಕೆ ಹೆಸರುವಾಸಿಯಾಗಿದೆ ಮತ್ತು ಪ್ರತಿ ವರ್ಷ ಹೊಸ ಹಾಗೂ ಸುಧಾರಿತ ಗ್ಯಾಜೆಟ್‌ಗಳನ್ನು ಅನಾವರಣಗೊಳಿಸುವಲ್ಲಿ ಪ್ರವರ್ತಕವಾಗಿದೆ.
ಆದರೆ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡಲು ನೀವು ಏನು ಮಾಡ್ಬೇಕು ಗೊತ್ತಾ? ಸುಮ್ನೆ ರೆಸ್ಯೂಮ್ ಕಳ್ಸಿದ್ರೆ ಆಗಲ್ಲ. ಈ ಬಗ್ಗೆ ಇತ್ತೀಚೆಗೆ, ಸಿಇಒ ಟಿಮ್ ಕುಕ್ ರಹಸ್ಯ ಬಿಚ್ಚಿಟ್ಟಿದ್ದಾರೆ ನೋಡಿ. ಇಲ್ಲಿ ಕೆಲಸ ಮಾಡಲು ವೃತ್ತಿಪರರಿಗೆ ಒಂದು ಪ್ರಮುಖ ಲಕ್ಷಣವೆಂದರೆ ಯಾವುದೇ ಕೆಲಸವನ್ನು ಸಮರ್ಥವಾಗಿ ಕಾರ್ಯಗತಗೊಳಿಸಲು ಸಹಕರಿಸುವ ಸಾಮರ್ಥ್ಯ ಎಂದಿದ್ದಾರೆ.
undefined
ಇದನ್ನು ಓದಿ: 17,999 ರೂ. ಗೆ ಸಿಗ್ತಿದೆ ಆ್ಯಪಲ್ ಐಫೋನ್: ಇಲ್ಲಿದೆ ಸೂಪರ್ ಆಫರ್!
ಬಿಬಿಸಿ ಆಯೋಜಿಸಿದ್ದ ಪಾಡ್‌ಕ್ಯಾಸ್ಟ್ ಸಂಚಿಕೆಯಲ್ಲಿ ಮಾತನಾಡಿದ ಟಿಮ್ ಕುಕ್, ‘ಅವರು (ಉದ್ಯೋಗಿಗಳು) ಸಹಕಾರ ಹೊಂದಿರಬಹುದೇ? ಒನ್ ಪ್ಲಸ್ ಒನ್ 3 ಎಂದು ಅವರು ಅನ್ಕೋತಾರಾ?’ ಎಂದೂ ಅಲ್ಬೇನಿಯನ್ ಗಾಯಕ-ಗೀತರಚನೆಕಾರ ದುವಾ ಲಿಪಾ ಅವರು ಆಯೋಜಿಸಿದ BBC ಪಾಡ್‌ಕ್ಯಾಸ್ಟ್‌ನ ಸಂಚಿಕೆಯಲ್ಲಿ ಟಿಮ್ ಕುಕ್ ಹೇಳಿದ್ದಾರೆ.
ಇಬ್ಬರು ಉದ್ಯೋಗಿಗಳು ಮೂವರು ಉದ್ಯೋಗಿಗಳ ಕಾರ್ಯಗಳನ್ನು ನಿರ್ವಹಿಸಲು ಸಮರ್ಥರಾಗಿರಬೇಕು ಎಂದು ಆ್ಯಪಲ್ ಕಂಪನಿ ನಂಬಿದೆ. ಮತ್ತು ಇತರರಲ್ಲಿ ಉತ್ತಮವಾದದ್ದನ್ನು ಹೊರತರುವ ವೃತ್ತಿಪರರೊಂದಿಗೆ ಕೆಲಸ ಮಾಡುವ ಭಾವನೆಯನ್ನು ಇನ್‌ಕ್ರೆಡಿಬಲ್ ಎಂದು ವಿವರಿಸಿದರು.
ಇದನ್ನೂ ಓದಿ: ದುಬಾರಿ ಐಫೋನ್ 15 ಪ್ರೋ ಮ್ಯಾಕ್ಸ್ ಆರ್ಡರ್ ಮಾಡಿದ ವ್ಯಕ್ತಿಗೆ ನಕಲಿ ಆಂಡ್ರಾಯ್ಡ್ ಫೋನ್ ನೀಡಿದ ಆ್ಯಪಲ್ ಸಂಸ್ಥೆ!
ನಿಮ್ಮಲ್ಲಿ ಉತ್ತಮವಾದದ್ದನ್ನು ಹೊರತರುವ ಜನರೊಂದಿಗೆ ಕೆಲಸ ಮಾಡುವ ಭಾವನೆ ನಂಬಲಾಗದು; ಮೂಲಭೂತವಾಗಿ, ನಾವೆಲ್ಲರೂ ಒನ್ ಪ್ಲಸ್ ಒನ್ ಮೂರಕ್ಕೆ ಸಮನಾಗಿರುತ್ತದೆ ಎಂದು ನಂಬುತ್ತೇವೆ. ಅಂದರೆ, ನಿಮ್ಮ ಕಲ್ಪನೆ ಮತ್ತು ನನ್ನ ಕಲ್ಪನೆಯು ತಮ್ಮದೇ ಆದ ವೈಯಕ್ತಿಕ ಆಲೋಚನೆಗಳಿಗಿಂತ ಉತ್ತಮವಾಗಿದೆ ಎಂದು ಟಿಮ್ ಕುಕ್ ಹೇಳಿದರು.
ಇನ್ನು, ನೇಮಕಾತಿ ಪ್ರಕ್ರಿಯೆಯ ಕುರಿತು ಮಾತನಾಡಿದ ಟಿಮ್ ಕುಕ್, ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಕೋಡಿಂಗ್ ಅತ್ಯಗತ್ಯ ಕೌಶಲ್ಯವೆಂದು ಪರಿಗಣಿಸಿದ್ದರೂ, ಆ್ಯಪಲ್‌ಗೆ ಸೇರುವ ವೃತ್ತಿಪರರಿಗೆ ಇದು ಸಂಪೂರ್ಣ ಅಗತ್ಯವಿಲ್ಲ ಎಂದು ಹೇಳಿದರು. ನಾನು ಕೋಡಿಂಗ್ ಅನ್ನು ಪ್ರತಿಯೊಬ್ಬರಿಗೂ ಮೌಲ್ಯಯುತವಾದ ಕೌಶಲ್ಯವೆಂದು ಪರಿಗಣಿಸಿದ್ದರೂ ಸಹ, ನಾವು ಅದರಲ್ಲಿ ಪರಿಣತಿ ಹೊಂದಿರದ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದೇವೆ ಅಥವಾ ದೈನಂದಿನ ಕೆಲಸದಲ್ಲಿ ಅದನ್ನು ನಿಯಮಿತವಾಗಿ ಬಳಸಿಕೊಳ್ಳುವುದಿಲ್ಲ ಎಂದೂ ಅವರು ಹೇಳಿದರು.
ಭಾರತದಲ್ಲಿ ಐಫೋನ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್: ಆ್ಯಪಲ್ ಇಂಡಿಯಾಗೆ ಸುಮಾರು 50,000 ಕೋಟಿ ರೂ. ಆದಾಯದ ಮೈಲುಗಲ್ಲು!
ಟಿಮ್ ಕುಕ್ 2011 ರಲ್ಲಿ ಆ್ಯಪಲ್ ಸಿಇಒ ಆಗಿ ನೇಮಕಗೊಂಡರು ಮತ್ತು ಆ್ಯಪಲ್‌ನಲ್ಲಿ ಕೆಲಸ ಮಾಡಲು ವೃತ್ತಿಪರರಿಗೆ ಅಗತ್ಯವಿರುವ ಕೆಲವು ಕೌಶಲ್ಯಗಳು ಕುತೂಹಲ, ಸೃಜನಶೀಲತೆ ಮತ್ತು ತಂಡದ ಆಟಗಾರನಾಗಿರುವುದನ್ನು ಒಳಗೊಂಡಿವೆ ಎಂದೂ ಹೇಳಿದರು.
ಇನ್ಮುಂದೆ ಕರ್ನಾಟಕದಲ್ಲೇ ತಯಾರಾಗುತ್ತೆ ಆ್ಯಪಲ್ ಫೋನ್: ಭಾರತದ ಮೊದಲ ಸ್ವದೇಶಿ ಐಫೋನ್ ತಯಾರಕರಾದ ಟಾಟಾ ಗ್ರೂಪ್!