ಎಐ ಎಂಜಿನಿಯರಿಂಗ್ ಸರ್ವಿಸಸ್ ನಿಂದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

By Kannadaprabha News  |  First Published Nov 26, 2023, 12:32 PM IST

ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ಎಂಜಿನಿಯರಿಂಗ್ ಅವಶ್ಯಕತೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.


ಎಐ ಎಂಜಿನಿಯರಿಂಗ್ ಸರ್ವಿಸಸ್‌ ಲಿಮಿಟೆಡ್‌ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ಎಂಜಿನಿಯರಿಂಗ್ ಅವಶ್ಯಕತೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.

ಎಐ ಎಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ ಭಾರತದಲ್ಲಿನ ಅತಿ ದೊಡ್ಡ ಡಿಜಿಸಿ‌ಎ ಅನುಮೋದಿತ ಎಂಆರ್‌ಓ‌ ವ್ಯವಸ್ಥೆ ಆಗಿದೆ, ಇದು ಪ್ಯಾನ್ ಇಂಡಿಯಾ ಹೆಜ್ಜೆಗುರುತನ್ನು ಹೊಂದಿರುವ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅಂದರೆ ದೆಹಲಿ, ಮುಂಬೈ, ಹೈದರಾಬಾದ್, ತಿರುವನಂತಪುರ, ಕೋಲ್ಕತ್ತಾ, ನಾಗ್ಪುರ ಇತ್ಯಾದಿ ಸ್ಥಳಗಳಲ್ಲಿ ಎಲ್ಲಾ ಎಂಜಿನಿಯರಿಂಗ್ ಅವಶ್ಯಕತೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಹಣಕಾಸು ಇಲಾಖೆ, ಕಾರ್ಯನಿರ್ವಾಹಕ ಅಧಿಕಾರಿ, ಮತ್ತು ಎಚ್ ಆರ್ ಮತ್ತು ಮಾರ್ಕೆಟಿಂಗ್ ಇಲಾಖೆಯ ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಅಂಚೆ ಮೂಲಕ ಸಲ್ಲಿಸಬಹುದು.

Latest Videos

undefined

ಹುದ್ದೆಯ ವಿವರ: ಒಟ್ಟು 52 ಹುದ್ದೆಗಳು

1. ಹಣಕಾಸು ಇಲಾಖೆ : 21 ಹುದ್ದೆ

(ವರ್ಗೀಕರಣ ಈ ಕೆಳಗಿನಂತಿದೆ)

ಕಾರ್ಯನಿರ್ವಾಹಕ ಹಣಕಾಸು : 9 ಹುದ್ದೆ

ಕಿರಿಯ ಕಾರ್ಯನಿರ್ವಾಹಕ- ಹಣಕಾಸು : 7 ಹುದ್ದೆ

ಸಹಾಯಕ ವ್ಯವಸ್ಥಾಪಕ- ಹಣಕಾಸು : 5 ಹುದ್ದೆ

2. ಕಾರ್ಯನಿರ್ವಾಹಕ ಅಧಿಕಾರಿ: 14 ಹುದ್ದೆ

(ವರ್ಗೀಕರಣ ಈ ಕೆಳಗಿನಂತಿದೆ)

ಕಾರ್ಯನಿರ್ವಾಹಕ- ಎಂಎಂ : 2 ಹುದ್ದೆ

ಉಪ ವ್ಯವಸ್ಥಾಪಕರು- ಎಂಎಂ: 8 ಹುದ್ದೆ

ಅಧಿಕಾರಿ- ಎಂಎಂ : 4 ಹುದ್ದೆ

3. ಎಚ್ ಆರ್ ಮತ್ತು ಮಾರ್ಕೆಟಿಂಗ್ ಇಲಾಖೆ : 17 ಹುದ್ದೆ

(ವರ್ಗೀಕರಣ ಈ ಕೆಳಗಿನಂತಿದೆ)

ಕಾರ್ಯನಿರ್ವಾಹಕ- ಮಾರ್ಕೆಟಿಂಗ್ : 1 ಹುದ್ದೆ

ಜೂನಿಯರ್ ಎಕ್ಸಿಕ್ಯೂಟಿವ್- ಮಾರ್ಕೆಟಿಂಗ್ : 2 ಹುದ್ದೆ

ಕಾರ್ಯನಿರ್ವಾಹಕ- ಎಚ್ ಆರ್ : 6 ಹುದ್ದೆ

ಅಧಿಕಾರಿ- ಎಚ್‌ಆರ್ : 8 ಹುದ್ದೆ

ಪ್ರಮುಖ ದಿನಾಂಕಗಳು

ಆಫ್ ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 28-11-2023

ಅರ್ಜಿ ಶುಲ್ಕ ಎಷ್ಟು?

ಇತರೆ ಅಭ್ಯರ್ಥಿಗಳಿಗೆ ರೂ. 1500

ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ: ಶುಲ್ಕ ಇಲ್ಲ

ವಯಸ್ಸಿನ ಮಿತಿ

ಗರಿಷ್ಠ ವಯಸ್ಸಿನ ಮಿತಿ: 45 ವರ್ಷಗಳು

ಶೈಕ್ಷಣಿಕ ವಿದ್ಯಾರ್ಹತೆ

1. ಹಣಕಾಸು ಇಲಾಖೆ ಹುದ್ದೆಗೆ: (ಸಾಮಾನ್ಯ ಅರ್ಹತೆ)

ಅಭ್ಯರ್ಥಿಯು ಸಿಎ/ಐಸಿಡಬ್ಲ್ಯೂಎ ಪದವಿ ಪಡೆದಿರಬೇಕು. ಹಾಗೂ ಈ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರಬೇಕು ಅಥವಾ ಸಿಎ/ಐಸಿಡಬ್ಲ್ಯೂಎ (ಇಂಟರ್) / ಎಂಬಿಎ ಜೊತೆಗೆ ಪ್ರತಿಷ್ಠಿತ ಕಂಪನಿಯಲ್ಲಿ ಫೈನಾನ್ಸ್‌ನಲ್ಲಿ 3- 15 ವರ್ಷಗಳ ಅನುಭವ ಹೊಂದಿರಬೇಕು. ಮತ್ತು ವ್ಯಕ್ತಿಯು ಕಂಪನಿಯ ತೆರಿಗೆ ವಿಭಾಗದಲ್ಲಿ ವಾರ್ಷಿಕ ಮತ್ತು ತ್ರೈಮಾಸಿಕ ಅಕೌಂಟ್ ಗಳನ್ನು ಕಂಪೈಲ್ ಮಾಡಿರಬೇಕು.

2. ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ : (ಸಾಮಾನ್ಯ ಅರ್ಹತೆ)

ಅಭ್ಯರ್ಥಿಯು ಮೆಟೀರಿಯಲ್ ಮ್ಯಾನೇಜ್‌ಮೆಂಟ್‌ನಲ್ಲಿ ಬಿ ಇ / ಬಿ. ಟೆಕ್ ಅಥವಾ ಪಿ ಜಿ ಡಿ ಪದವಿ ಹೊಂದಿರಬೇಕು. ಮತ್ತು ಉನ್ನತ ಮಟ್ಟದ ಸಂಘಟನೆಯೊಂದಿಗೆ ಮೆಟೀರಿಯಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಕನಿಷ್ಟ 05 ವರ್ಷಗಳ ಅನುಭವ ಇರಬೇಕು.

3. ಎಚ್ ಆರ್ ಮತ್ತು ಮಾರ್ಕೆಟಿಂಗ್ ಇಲಾಖೆ ಹುದ್ದೆಗೆ: ( ಸಾಮಾನ್ಯ ಅರ್ಹತೆ)

ಅಭ್ಯರ್ಥಿಯು ಮಾರ್ಕೆಟಿಂಗ್‌ನಲ್ಲಿ ಎಂ ಬಿ ಎ ಪದವಿಯನ್ನು ಪಡೆದಿರಬೇಕು. ಮತ್ತು ವಾಯುಯಾನ ಉದ್ಯಮದಲ್ಲಿ ಹೆಚ್ಚಿನ ಖ್ಯಾತಿಯ ಸಂಘಟನೆಯೊಂದಿಗೆ ಮಾರಾಟ ಮತ್ತು ಮಾರ್ಕೆಟಿಂಗ್‌ನಲ್ಲಿ ಕನಿಷ್ಠ 05 ವರ್ಷಗಳ ಅನುಭವವನ್ನು ಹೊಂದಿರಬೇಕು.

ವೇತನ ಶ್ರೇಣಿ ಎಷ್ಟು?

1. ಹಣಕಾಸು ಇಲಾಖೆ ಹುದ್ದೆಗೆ : ತಿಂಗಳಿಗೆ ರೂ. 50000 - 1,20,000

2. ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ : ತಿಂಗಳಿಗೆ ರೂ. 43,000- 85,000

3. ಎಚ್ ಆರ್ ಮತ್ತು ಮಾರ್ಕೆಟಿಂಗ್ ಇಲಾಖೆ ಹುದ್ದೆಗೆ : ರೂ. 43,000 - 85,000

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಎಐ ಇ ಎಸ್ ಎಲ್ ವೆಬ್ ಸೈಟ್ ಮೂಲಕ ಪಡೆದು , ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್/ಕೊರಿಯರ್‌ ಮೂಲಕ ಕಳುಹಿಸಬೇಕು.

ಅಂಚೆ ವಿಳಾಸ

ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ

ಎಐ ಎಜಿನಿಯರಿಂಗ್ ಸರ್ವೀಸಸ್ ಲಿಮಿಟೆಡ್

2 ನೇ ಮಹಡಿ, ಸಿ ಆರ್ ಎ ಕಟ್ಟಡ,

ಸಫ್ದರ್‌ಜಂಗ್ ವಿಮಾನ ನಿಲ್ದಾಣ ಸಂಕೀರ್ಣ,

ಅರಬಿಂದೋ ಮಾರ್ಗ, ನವದೆಹಲಿ - 110 003

ಆಯ್ಕೆ ವಿಧಾನ

ಪ್ರಾಥಮಿಕವಾಗಿ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಪೂರ್ವ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.‌ಇದರಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ಮಾತ್ರ ವೈಯಕ್ತಿಕ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.‌‌ ಕೊನೆಯದಾಗಿ ಅಂಕಗಳ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ಉದ್ಯೋಗ ಒಪ್ಪಂದ

ಆಯ್ಕೆಯಾದ ಅಭ್ಯರ್ಥಿಯನ್ನು ನಿಗದಿತ ಅವಧಿಯ ಒಪ್ಪಂದದ ಆಧಾರದ‌ ಮೇಲೆ ನೇಮಕ ಮಾಡಲಾಗುತ್ತದೆ. ಇದು ಐದು ವರ್ಷಗಳ ಅವಧಿಗೆ ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಸಂಬಂಧಪಟ್ಟ ವೆಬ್‌ಸೈಟ್‌ ವೀಕ್ಷಿಸಬಹುದು.

click me!