HMT Recruitment 2023: ಬೆಂಗಳೂರಿನಲ್ಲಿ ಖಾಲಿ ಇರುವ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By Gowthami KFirst Published Feb 14, 2023, 11:18 AM IST
Highlights

ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್  40 ಖಾಲಿ ಹುದ್ದೆಗಳೊಂದಿಗೆ ಗ್ರಾಜುಯೇಟ್ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಯನ್ನು ಪೂರೈಸಲು ಆಕಾಂಕ್ಷಿಗಳನ್ನು ಆಹ್ವಾನಿಸುತ್ತದೆ.  ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ.

ಬೆಂಗಳೂರು (ಫೆ.14): ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ (HMT) 40 ಖಾಲಿ ಹುದ್ದೆಗಳೊಂದಿಗೆ ಗ್ರಾಜುಯೇಟ್ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಯನ್ನು ಪೂರೈಸಲು ಆಕಾಂಕ್ಷಿಗಳನ್ನು ಆಹ್ವಾನಿಸುತ್ತದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 28 ರ ಅಂತಿಮ ದಿನಾಂಕದ ಮೊದಲು  ಅರ್ಜಿ ಸಲ್ಲಿಸಬಹುದು. HMT ಲಿಮಿಟೆಡ್ ನೇಮಕಾತಿ 2023 ರ ಅಧಿಸೂಚನೆಯ ಕುರಿತು ಹೆಚ್ಚಿನ ವಿವರಗಳನ್ನು ಪರಿಶೀಲಿಸಲು ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, ವೇತನ ಶ್ರೇಣಿ, ಪ್ರಮುಖ ದಿನಾಂಕಗಳು ಮತ್ತು ಇತರವುಗಳನ್ನು ಕೆಳಗೆ ಪರಿಶೀಲಿಸಬಹುದು. ಅಪೇಕ್ಷಿತ ಆಕಾಂಕ್ಷಿಗಳು ಕೆಳಗೆ ತಿಳಿಸಲಾದ ವಿವರಗಳ ಮೂಲಕ ಹೋಗಬೇಕು ಮತ್ತು HMT ಲಿಮಿಟೆಡ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ತಾಣ http://hmtmachinetools.com/ ಗೆ ಕೂಡ ಭೇಟಿ ನೀಡಬಹುದು.

ಒಟ್ಟು 40 ಹುದ್ದೆಗಳ ಮಾಹಿತಿ ಇಂತಿದೆ:
ಡಿಪ್ಲೊಮಾ ಅಪ್ರೆಂಟಿಸ್ 20 ಹುದ್ದೆಗಳು
ಪದವೀಧರ ಅಪ್ರೆಂಟಿಸ್ 20 ಹುದ್ದೆಗಳು

ಶೈಕ್ಷಣಿಕ ಅರ್ಹತೆ: ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಕಯ ಅಥವಾ ಸಂಸ್ಥೆಯಿಂದ ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು. ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗೆ ಮೆಕ್ಯಾನಿಕಲ್/ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಆಗಿರಬೇಕು. ಪದವೀಧರ ಅಪ್ರೆಂಟಿಸ್ ಹುದ್ದೆಗೆ ಮೆಕ್ಯಾನಿಕಲ್/ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

ವಯೋಮಿ ಮಿತಿ: HMT ಮೆಷಿನ್ ಟೂಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು HMT ಮೆಷಿನ್ ಟೂಲ್ಸ್ ಲಿಮಿಟೆಡ್ ನಿಯಮಗಳ ಪ್ರಕಾರ 18 ರಿಂದ 28ರೊಳಗೆ ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ: ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳನ್ನು  ದಾಖಲಾತಿ ಪರಿಶೀಲನೆ/ ಸಂದರ್ಶನದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ.

Aero India-2023ರಲ್ಲಿ 100ಕ್ಕೂ ಅಧಿಕ ದೇಶಗಳು ಭಾಗಿ: ಉದ್ಯೋಗಕ್ಕೆ ವಿಪುಲ ಅವಕಾಶ- ರಾಜನಾಥ್‌ ಸಿಂಗ್

ವೇತನ ವಿವರ: ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ  8,000/ ರೂ ನಿಂದ  9,000 ರೂ  ವರೆಗೆ ಸ್ಟೈಪೆಂಡ್ ಪಡೆಯುತ್ತಾರೆ.

ಉದ್ಯೋಗ ಸ್ಥಳ: ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ.

ಬೋಳುತಲೆ ಎಂದು ಕೆಲಸ ತೊರೆಯುವಂತೆ ಒತ್ತಡ: ಸಂಸ್ಥೆಯಿಂದ 71 ಲಕ್ಷ ಪರಿಹಾರ ಗೆದ್ದ ಉದ್ಯೋಗಿ

ಅರ್ಜಿ ಸಲ್ಲಿಸಬೇಕಾದ ವಿವರ:
ಹಿಂದೂಸ್ತಾನ್ ಮೆಷಿನ್ ಟೂಲ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ವಿದ್ಯಾರ್ಹತೆಯ ಪ್ರಮಾಣಪತ್ರದ ಜೆರಾಕ್ಸ್ ಪ್ರತಿಗಳೊಂದಿಗೆ ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.

ಇ-ಮೇಲ್ ಐಡಿ:- mbxtrg@hmtmachinetools.com
ಹೆಚ್ಚಿನ ವಿವರಗಳಿಗಾಗಿ ಈ ನಂಬರ್​ಗೆ ಕರೆ ಮಾಡಿ- 9880234325

click me!