ಹಣವೇ ಹೊರೆಯಾಯ್ತು ! 2.5 ಕೋಟಿ ಆಸ್ತಿ ಇದ್ರೂ ಈತನನ್ನು ಕಾಡ್ತಿದೆ ಈ ನೋವು

Published : Apr 15, 2025, 09:15 PM ISTUpdated : Apr 16, 2025, 09:57 AM IST
ಹಣವೇ ಹೊರೆಯಾಯ್ತು ! 2.5 ಕೋಟಿ ಆಸ್ತಿ ಇದ್ರೂ ಈತನನ್ನು ಕಾಡ್ತಿದೆ ಈ ನೋವು

ಸಾರಾಂಶ

ಹಣವೊಂದೇ ಮುಖ್ಯವಲ್ಲ, ನೆಮ್ಮದಿಯೂ ಮುಖ್ಯ. 2.5 ಕೋಟಿ ಆಸ್ತಿ ಇದ್ದರೂ, 42 ವರ್ಷದ ವ್ಯಕ್ತಿಯೊಬ್ಬರು ಕೆಲಸದ ಒತ್ತಡದಿಂದ ಬೇಸತ್ತು ನಿವೃತ್ತಿ ಬಯಸುತ್ತಿದ್ದಾರೆ. ಮದುವೆ, ಮಕ್ಕಳಿಲ್ಲದ, ಸಾಲವಿಲ್ಲದ ಆತ, ಅಮೆರಿಕಾದಲ್ಲಿ ತಿಂಗಳಿಗೆ 85,660 ರೂಪಾಯಿ ಪಿಂಚಣಿ ಪಡೆಯಲಿದ್ದಾರೆ. ಆದರೆ, ಕೆಲಸದ ಒತ್ತಡದಿಂದ ಆರೋಗ್ಯ ಹದಗೆಟ್ಟು, ನಿವೃತ್ತಿ ಪಡೆಯಬೇಕೆಂಬ ಗೊಂದಲದಲ್ಲಿದ್ದಾರೆ. ಈ ಬಗ್ಗೆ ರೆಡ್ಡಿಟ್‌ನಲ್ಲಿ ಚರ್ಚೆ ನಡೆದಿದೆ.

ಹಣ (money)ವೇ ಎಲ್ಲವೂ ಅಲ್ಲ. ಈ ಮಾತು ನೂರಕ್ಕೆ ನೂರು ಸತ್ಯ. ಹಣವಿಲ್ಲದೆ ಜೀವನ ನಡೆಸೋದು ಕಷ್ಟ. ಹಾಗಂತ ಹಣ ಇದ್ದವರೆಲ್ಲ ನೆಮ್ಮದಿಯಿಂದ ಜೀವನ ನಡೆಸ್ತಿದ್ದಾರೆ ಅನ್ನೋದು ಸುಳ್ಳು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಪೋಸ್ಟ್ ಉತ್ತಮ ನಿದರ್ಶನ. ರೆಡ್ಡಿಟ್ (Reddit) ನಲ್ಲಿ ಬಳಕೆದಾರನೊಬ್ಬ ಒತ್ತಡದ ಜೀವನದ ಬಗ್ಗೆ ಬರೆದಿದ್ದಾನೆ. ಹಣವಿದೆ ಆದ್ರೆ ನೆಮ್ಮದಿ ಇಲ್ಲ. ಆತನ ಬಳಿ 2.5 ಕೋಟಿ ಮೌಲ್ಯದ ಆಸ್ತಿ ಇದ್ರೂ ನಿರಾಶೆ ಜೀವನವನ್ನು ಸಾಗಿಸ್ತಿದ್ದಾನೆ. 

ರೆಡ್ಡಿಟ್ ಪೋಸ್ಟ್ ನಲ್ಲಿ ಕೆಲಸದ ಒತ್ತಡದ ಬಗ್ಗೆಯೂ ಆತ ಬರೆದಿದ್ದಾನೆ. ಆತನಿಗೆ ಒಳ್ಳೆ ಕೆಲಸ ಇದೆ, ಸಂಬಳವಿದೆ. ಆದ್ರೆ ಟಾರ್ಗೆಟ್ ನಿದ್ರೆ ಗೆಡಿಸಿದೆ. ಮದುವೆ ಆಗಿಲ್ಲ, ಮಕ್ಕಳಿಲ್ಲ. ತಂದೆ – ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇಲ್ಲ. ಯಾವುದೇ ಸಾಲವಿಲ್ಲ. ಕುಟುಂಬದ ಟೆನ್ಷನ್ ಇಲ್ಲ. ಇಷ್ಟಾದ್ರೂ ಜೀವನದಲ್ಲಿ ನೆಮ್ಮದಿ ಇಲ್ಲ. ಕೆಲ್ಸ ಬಿಡುವ ಆಲೋಚನೆ ಮಾಡಿದ್ದಾನೆ ವ್ಯಕ್ತಿ. ಆತನ ರೆಡ್ಡಿಟ್ ಪೋಸ್ಟ್ ನೋಡಿದ ಬಳಕೆದಾರರು ದಂಗಾಗಿದ್ದಾರೆ. ನೂರಾರು ಕಮೆಂಟ್ ಇದಕ್ಕೆ ಬಂದಿದೆ. 

ನಿಮಗೂ ಈ ವಯಸ್ಸು ಹತ್ತಿರ ಬರ್ತಿದ್ಯಾ? ಕೆಲಸ ಕಳೆದ್ಕೊಳ್ಳೋ

ಪೋಸ್ಟ್ ನಲ್ಲಿ ಏನಿದೆ? : r/personalfinanceindia ರೆಡ್ಡಿಟ್ ಪುಟದಲ್ಲಿ, @Proud-Connection1580 ಹೆಸರಿನಲ್ಲಿ ವ್ಯಕ್ತಿ ತನ್ನ ನೋವನ್ನು ತೋಡಿಕೊಂಡಿದ್ದಾನೆ. ನಾನು ನನ್ನ ಕೆಲ್ಸ ಬಿಟ್ಟು ನಿವೃತ್ತಿ ಬಯಸ್ತಿದ್ದೇನೆ ಎಂಬ ಶೀರ್ಷಿಕೆ ಅಡಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ನನಗೆ 42 ವರ್ಷ. ನನಗೆ ಮದುವೆ ಆಗಿಲ್ಲ. ಮುಂದೆಯೂ ಮದುವೆ (marriage) ಆಗುವ ಆಲೋಚನೆ ನನಗಿಲ್ಲ. ಬಹಳ ವರ್ಷಗಳ ಹಿಂದೆಯೇ ನನ್ನ ಪಾಲಕರು ತೀರಿಕೊಂಡಿದ್ದಾರೆ. ಎಲ್ಲ ಎಫ್ ಡಿ ಸೇರಿ ನನ್ನ ನಿವ್ವಳ ಆಸ್ತಿ 2.5 ಕೋಟಿ ಇದೆ. ಸ್ವಂತ ಮನೆ ಇಲ್ಲ, ಸ್ವಂತ ವಾಹನ ಇಲ್ಲ. ಸಾಲ ಕೂಡ ನಾನು ಮಾಡಿಲ್ಲ ಎಂದು ಪೋಸ್ಟ್ ನಲ್ಲಿ ವ್ಯಕ್ತಿ ಬರೆದಿದ್ದಾನೆ. ಅಷ್ಟೇ ಅಲ್ಲ, ಅಮೆರಿಕಾದಲ್ಲಿ ನಾನು ಕೆಲ ಕಾಲ ನೆಲೆಸಿದ್ದೆ. ನನಗೆ 62 ವರ್ಷವಾಗ್ತಿದ್ದಂತೆ ತೆರಿಗೆಯ ನಂತ್ರ ನನಗೆ ತಿಂಗಳಿಗೆ ಸುಮಾರು1000 ಡಾಲರ್ ಅಂದ್ರೆ  ಸುಮಾರು 85,660 ರೂಪಾಯಿ ಸಿಗುತ್ತದೆ ಎಂದು ಆತ ತನ್ನ ಬಗ್ಗೆ ಮಾಹಿತಿ ನೀಡಿದ್ದಾನೆ. 9 -6 ರ ಕೆಲಸ ಮಾಡಿ ನಾನು ಬೇಸತ್ತಿದ್ದೇನೆ. ನನಗೆ ಕೆಲಸದ ಟೆನ್ಷನ್ ದೀರ್ಘ ಸಮಸ್ಯೆಯಾಗಿದೆ. ನಾನು ಐಟಿ ಕಂಪನಿಯಲ್ಲಿ ಕೆಲ್ಸ ಮಾಡ್ತಿಲ್ಲ. ಆದ್ರೆ ನಾನು ಮಾಡ್ತಿರುವ ಕೆಲ್ಸ ಸಿಗೋದು ಬಹಳ ಅಪರೂಪ. ನಾನು ಕೆಲ್ಸ ಬಿಟ್ಟರೆ ಇಂಥ ಕೆಲಸ ನನಗೆ ಮತ್ತೆ ಸಿಗೋದಿಲ್ಲ. ಆದ್ರೆ ಕೆಲಸದ ಡೆಡ್ ಲೈನ್ ಬಗ್ಗೆಯೇ ನಾನು ಹೆಚ್ಚು ಆಲೋಚನೆ ಮಾಡ್ತಿರುತ್ತೇನೆ. ಇದ್ರಿಂದ ನನಗೆ ಒತ್ತಡ ಜಾಸ್ತಿಯಾಗಿದೆ. ನನ್ನ ಆರೋಗ್ಯ ಹದಗೆಡುತ್ತಿದೆ. ಎಲ್ಲವನ್ನು ನಾನು ದ್ವೇಷಿಸಲು ಶುರು ಮಾಡಿದ್ದೇನೆ. ನಾನು ತಿಂಗಳಿಗೆ 50 ಸಾವಿರ ಖರ್ಚು ಮಾಡ್ತೇನೆ. ನಾನು ಈಗ ನಿವೃತ್ತಿ ಪಡೆಯಬಹುದಾ ಎಂದು ಆತ ಪ್ರಶ್ನೆ ಕೇಳಿದ್ದಾನೆ. 

ಬಿಬಿಎಂಪಿ ಹವಾಮಾನ ಕ್ರಿಯಾಕೋಶ ಫೆಲೋಶಿಪ್‌ಗೆ ಅರ್ಜಿ ಆಹ್ವಾನ!

ರೆಡ್ಡಿಟ್ ಪೋಸ್ಟ್ ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ನಿಮ್ಮ ಕೆಲ್ಸ ಏನು ಅಂತ ತಿಳಿದ್ರೆ ನಾವು ಸೂಕ್ತ ಸಲಹೆ ನೀಡಬಹುದು ಅಂತ ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು, ಈ ವ್ಯಕ್ತಿ ಅಮೆರಿಕಾದ ಗುಪ್ತಚರ ಇಲಾಖೆಯಲ್ಲಿಕೆಲ್ಸ ಮಾಡುತ್ತಿರುವಂತೆ ಕಾಣ್ತಿದೆ ಎಂದಿದ್ದಾರೆ. ಕೆಲ್ಸ ಬಿಟ್ಟು ಸ್ವಂತ ಉದ್ಯೋಗ ಶುರು ಮಾಡಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. 
 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?