ಟಾಯ್ಲೆಟ್ ಪೇಪರ್‌ನಲ್ಲಿ ರಿಸಿಗ್ನೇಶನ್ ಲೆಟರ್, ಒಂದೇ ವಾಕ್ಯದಲ್ಲಿ ಕಂಪನಿ ಜನ್ಮಜಾಲಾಡಿದ ಉದ್ಯೋಗಿ

Published : Apr 15, 2025, 03:21 PM ISTUpdated : Apr 15, 2025, 03:44 PM IST
ಟಾಯ್ಲೆಟ್ ಪೇಪರ್‌ನಲ್ಲಿ ರಿಸಿಗ್ನೇಶನ್ ಲೆಟರ್, ಒಂದೇ ವಾಕ್ಯದಲ್ಲಿ ಕಂಪನಿ ಜನ್ಮಜಾಲಾಡಿದ ಉದ್ಯೋಗಿ

ಸಾರಾಂಶ

ಒಂದೇ ವಾಕ್ಯದಲ್ಲಿ ರಿಸೈನ್ ಲೆಟರ್ ಬರೆದು ಕೆಲಸಕ್ಕೆ ರಾಜೀನಾಮೆ ನೀಡಲಾಗಿದೆ. ವಿಶೇಷ ಅಂದರೆ ಈ ರಾಜೀನಾಮೆ ಪತ್ರ ಕೊಟ್ಟಿರುವುದು ಟಾಯ್ಲೆಟ್ ಪೇಪರ್‌ನಲ್ಲಿ. ಒಂದು ವಾಕ್ಯದಲ್ಲಿ ತನ್ನ ರಾಜೀನಾಮೆ, ಯಾವ ಕಾರಣಕ್ಕಾಗಿ ಈ ಪೇಪರ್ ಬಳಸಿದ್ದೇನೆ ಹಾಗೂ ಕಂಪನಿಯ ಜನ್ಮ ಜಾಲಾಡಿದ ಘಟನೆ ನಡೆದಿದೆ.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾರ್ಪೋರೇಟ್ ಕೆಲವೇ ಆಗಲಿ, ಇತರ ಸಾಮಾನ್ಯ ಕೆಲಸವೇ ಆಗಲಿ ಒತ್ತಡ, ಟಾರ್ಗೆಟ್ ಎಲ್ಲವೂ ಇದ್ದಿದ್ದೆ. ಇತ್ತೀಚೆಗೆ ಕಚೇರಿ ಕೆಲಸಗಳ ಸ್ವರೂಪ ಬದಲಾಗುತ್ತಿದೆ. ಹೆಚ್ಚುವರಿ ಗಂಟೆ ಕೆಲಸ ಮಾಡಿದರೂ ಕಂಪನಿಗೂ ತೃಪ್ತಿ ಇಲ್ಲ, ಇತ್ತ ಕೆಲಸ ಮಾಡಿದ ಉದ್ಯೋಗಿಗೂ ನೆಮ್ಮದಿ ಇಲ್ಲದಂತಾಗಿದೆ. ಆದರಲ್ಲೂ ಹಲವು ಬಾರಿ ಕಂಪನಿಗಳು ಉದ್ಯೋಗಿಗಳನ್ನು ನಡೆಸಿಕೊಳ್ಳುವ ರೀತಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತದೆ. ಇದೀಗ ಉದ್ಯೋಗಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ ಪತ್ರವೊಂದು ವೈರಲ್ ಆಗಿದೆ. ವಿಶೇಷ ಅಂದರೆ ಶೌಚಾಲಯದಲ್ಲಿ ಬಳಸುವ ಪೇಪರ್ ಮೂಲಕ ರಾಜೀನಾಮೆ ಪತ್ರವನ್ನು ಬರೆದು ಕಂಪನಿಗೆ ನೀಡಲಾಗಿದೆ. ಒಂದೇ ವಾಕ್ಯದಲ್ಲಿ ರಾಜೀನಾಮೆ ಪತ್ರವನ್ನು ಮುಗಿಸಿದ್ದಾರೆ. ಆದರೆ ಈ ಒಂದು ವಾಕ್ಯ ಕಂಪನಿ ಜನ್ಮ ಜಾಲಾಡಿದ ಘಟನೆ ನಡೆದಿದೆ.

ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಬೇಡಿ
ಸಿಂಗಾಪೂರದ ಮೂಲದ ಮಹಿಳಾ ಉದ್ಯಮಿ, ಖಾಸಗಿ ಕಂಪನಿ ನಿರ್ದೇಶಕಿ ಈ ರಾಜನಾಮೆ ಪತ್ರದ ಸಾರಾಂಶವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ್ಯಂಗೆಲಾ ಯೆಹೊ ಅನ್ನೋ ಉದ್ಯಮಿ ತಮ್ಮ ಲಿಂಕ್ಡಿನ್ ಮೂಲಕ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮದೇ ಕಂಪನಿಯಲ್ಲಿ ಉದ್ಯೋಗಿಯೊಬ್ಬರು ನೀಡಿದ ರಾಜೀನಾಮೆ ಮಾಹಿತಿ ಹಂಚಿಕೊಂಡು, ಯಾವುದೇ ಕಾರಣಕ್ಕೂ ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ಜಾಬ್‌ ಬಿಡೋದು ಬಿಡ್ತೀರಾ! ಈ 10 ಟಿಪ್ಸ್‌ ಫಾಲೋ ಮಾಡದಿದ್ರೆ ನಿಮಗೆ ಶನಿ ಹೆಗಲೇರೋದು ಗ್ಯಾರಂಟಿ!

ಒಂದು ವಾಕ್ಯದ ರಾಜೀನಾಮೆ ಪತ್ರದಲ್ಲಿ ಏನಿದೆ?
ಆ್ಯಂಗೆಲಾ ಯೆಹೋ ತಮಗೆ ಉದ್ಯೋಗಿಯೊಬ್ಬರು ನೀಡಿದ ರಾಜೀನಾಮೆ ಪತ್ರ ನನ್ನ ಮನಸ್ಸಿನಲ್ಲಿ ಇನ್ನೂ ಹಾಗೇ ಅಚ್ಚೊತ್ತಿದೆ ಎಂದಿದ್ದಾರೆ. ಈ ರಾಜೀನಾಮೆ ಪತ್ರದಲ್ಲಿ ಉದ್ಯೋಗಿ ಬರೆದ ಸಾಲುಗಳು ಹೀಗೆವೆ. ನನ್ನ ರಾಜೀನಾಮೆ ಪತ್ರಕ್ಕೆ ನಾನು ಈ ಪೇಪರ್ ಬಳಸಿರುವುದಕ್ಕೆ ಕಾರಣ ನನ್ನನ್ನು ಈ ಕಂಪನಿ ಹೇಗೆ ನಡೆಸಿಕೊಂಡಿದೆ ಅನ್ನೋದಕ್ಕೆ ಸಣ್ಣ ಉದಾಹರಣೆ ಎಂದು ಬರೆದಿದ್ದಾರೆ. ಇಲ್ಲಿ ತಾನು ರಾಜನಾಮೆ ನೀಡುತ್ತಿದ್ದೇನೆ ಅನ್ನೋದನ್ನು ಬಿಡಿಸಿ ಹೇಳಿಲ್ಲ. ಆದರೆ ತನ್ನ ರಾಜೀನಾಮೆಗೆ ಈ ಪೇಪರ್ ಬಳಸುತ್ತಿದ್ದೇನೆ ಎಂದು ಹೇಳಲಾಗಿದೆ. ಇನ್ನು ಈ ಕಂಪನಿ ಉದ್ಯೋಗಿಗಳನ್ನು ಹೇಗೆ ನಡೆಸಿಕೊಳ್ಳುತ್ತಿದೆ ಅನ್ನೋದನ್ನು ಹೇಳಲಾಗಿದೆ. ಕಾರಣ ಶೌಚಾಲಯಕ್ಕಿಂತ ಕಡೆ ಅಂದರೆ ಬೇಕಾದಾಗ ಬಳಸಿಕೊಳ್ಳುವ ಬಳಿಕ ನಿರ್ಲಕ್ಷಿಸುವ ಅಥವಾ ವೇತನ ರೂಪದಲ್ಲಿ, ಇತರ ರೂಪದಲ್ಲಿ ಕಿರಿಕಿರಿ ನೀಡುವ ಪದ್ಧತಿ ಈ ಕಂಪನಿಯಲ್ಲಿದೆ. ಹೀಗಾಗಿ ಇದೇ ವಿಧಾನದ ಮೂಲಕ ರಾಜೀನಾಮೆ ನೀಡುತ್ತಿದ್ದೇನೆ ಅನ್ನೋದನ್ನು ಪರೋಕ್ಷವಾಗಿ ಒಂದೇ ವಾಕ್ಯದಲ್ಲಿ ಹೇಳಲಾಗಿದೆ. 

ಸರಿಯಾಗಿದೆ ಎಂದು ಹಲವರ ಕಮೆಂಟ್
ಈ ರಾಜೀನಾಮೆ ಕುರತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕಂಪನಿ ಹೇಗೆ ನಡೆಸಿಕೊಂಡಿದೆಯೋ, ಅದೇ ರೀತಿ ರಾಜೀನಾಮೆ ನೀಡಲಾಗಿದೆ. ಇದರಲ್ಲಿ ತಪ್ಪಿಲ್ಲ. ಯಾವ ಒಬ್ಬ ಉದ್ಯೋಗಿ ಈ ರೀತಿ ಕೆಲಸಕ್ಕೆ ರಾಜೀನಾಮೆ ನೀಡಲು ಬಯಸುವುದಿಲ್ಲ. ಆದರೆ ಕಂಪನಿ ಈ ರೀತಿ ಬಯಸಿದರೆ ಉದ್ಯೋಗಿಯ ತಪ್ಪಲ್ಲ ಎಂದಿದ್ದಾರೆ. ಒಂದಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಕಂಪನಿ ಹಲವು ಭಾರಿ ನಡೆದುಕೊಳ್ಳುವ ರೀತಿ ಸರಿ ಇಲ್ಲದೆ ಇರಬಹುದು. ಆದರೆ ರಾಜಿನಾಮೆ ನೀಡುವಾಗ, ಬೇರೆ ಕೆಲಸಕ್ಕಾಗಿ ಹೋಗುವಾಗ ಉತ್ತಮವಾಗಿ ರಾಜೀನಾಮೆ ನೀಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.


 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?