
ತಂತ್ರಜ್ಞಾನವು ಅನೇಕ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡಲು ಪ್ರಾರಂಭಿಸಿದಾಗ, ಕೆಲವು ಉದ್ಯೋಗಗಳ ಅಗತ್ಯತೆಯನ್ನು ಕಡಿಮೆ ಮಾಡಿ AI ಕೆಲಸದಲ್ಲಿ ತೊಡಗಿಸಿಕೊಂಡಾಗ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಅಮೆಜಾನ್ ಸಿಇಒ ಆಂಡಿ ಜಾಸ್ಸಿ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ನಡೆಯುತ್ತಿರುವ ವೇಗದ ಬೆಳವಣಿಗೆ ಅಮೆಜಾನ್‌ನ ಕಾರ್ಪೊರೇಟ್ ಕೆಲಸದ ಭವಿಷ್ಯವನ್ನು ರೂಪಿಸುತ್ತಿದ್ದು, ಇದರಿಂದಾಗಿ ಹೆಚ್ಚಿನ ಉದ್ಯೋಗ ಕಡಿತವಾಗುವ ಸಾಧ್ಯತೆ ಇದೆ ಎಂದು ಸಿಇಒ ಆಂಡಿ ಜಾಸ್ಸಿ ಎಚ್ಚರಿಸಿದ್ದಾರೆ.
ಸಿಎನ್‌ಬಿಸಿಯ ಜಿಮ್ ಕ್ರೇಮರ್ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ಅವರು ನಮ್ಮ ಜೀವಿತಾವಧಿಯಲ್ಲಿ AI ಅತ್ಯಂತ ಪರಿವರ್ತಕ ತಂತ್ರಜ್ಞಾನವಾಗಲಿದೆ ಎಂದು ನಾನು ಭಾವಿಸುತ್ತೇನೆ. ಇದು ನಾವು ಕೆಲಸ ಮಾಡುವ ವಿಧಾನವನ್ನು ಕೂಡ ಬದಲಾಯಿಸಲಿದೆ. ಪ್ರತಿಯೊಂದು ಕೂಡ ತಾಂತ್ರಿಕವಾಗಿ ರೂಪಾಂತರವಾಗುತ್ತಿದ್ದಂತೆಯೇ ತಂತ್ರಜ್ಞಾನವು ಸ್ವಯಂಚಾಲಿತಗೊಳಿಸಲು ಆರಂಭಿಸುವ ಕೆಲವು ಕೆಲಸಗಳನ್ನು ಮಾಡುವ ಜನರು ಕಡಿಮೆಯಾಗುತ್ತಾರೆ . ಮತ್ತು ತಂತ್ರಜ್ಞಾನವು ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸಲು ಬಯಸುವ ಇತರ ಕೆಲಸಗಳು ಉದ್ಭವವಾಗುವಂತೆ ಮಾಡುತ್ತದೆ ನಾವು ಕಾಲಾನಂತರದಲ್ಲಿ ಅವುಗಳನ್ನು ನೇಮಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
AI ತಂತ್ರಜ್ಞಾನದಲ್ಲಿ ಜನರು ಹೆಚ್ಚು ದಿನನಿತ್ಯದ ಕೆಲಸಗಳನ್ನು ಮಾಡಬೇಕಾಗಿಲ್ಲ ಎಂದು ಜಾಸ್ಸಿ ಭವಿಷ್ಯ ನುಡಿದಿದ್ದಾರೆ, ಇದು ಪ್ರತಿಯೊಬ್ಬ ವ್ಯಕ್ತಿಯು ಪ್ರತಿಯೊಂದು ಕೆಲಸವನ್ನು ಹೆಚ್ಚು ಮುಂದುವರಿದ ಆರಂಭಿಕ ಸ್ಥಳದಿಂದ ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಇತ್ತೀಚೆಗೆ, ಸೇಲ್ಸ್‌ಫೋರ್ಸ್ ಸಿಇಒ ಮಾರ್ಕ್ ಬೆನಿಯೋಫ್ ತಮ್ಮ ಸಾಫ್ಟ್‌ವೇರ್ ಕಂಪನಿಯಲ್ಲಿ AI ಮೂಲಕ 30% ರಿಂದ 50% ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಮದ್ಯೆ ಕ್ಲಾರ್ನಾದ ಸಿಇಒ ಮೇ ತಿಂಗಳಲ್ಲಿ AI ಯಲ್ಲಿನ ಹೂಡಿಕೆಗಳು ಮತ್ತು ನೈಸರ್ಗಿಕ ಕ್ಷೀಣತೆಯಿಂದಾಗಿ ಕಂಪನಿಯು ತನ್ನ ಉದ್ಯೋಗಿಗಳನ್ನು 40% ರಷ್ಟು ಕಡಿತಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.
ಅಮೆಜಾನ್ ವಿಷಯದಲ್ಲಿ, ಕಂಪನಿಯು 2023 ರ ಆರಂಭದಿಂದ 27,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದೆ ಮತ್ತು ಇತ್ತೀಚಿನ ತಿಂಗಳಲ್ಲಿ ಅದರ ಚಿಲ್ಲರೆ ವ್ಯಾಪಾರ ಮತ್ತು ಸಾಧನ ವಿಭಾಗಗಳಲ್ಲಿ ಉದ್ದೇಶಿತ ವಜಾಗಳನ್ನು ಘೋಷಿಸಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.
CNBC ಗೆ ನೀಡಿದ ಸಂದರ್ಶನದಲ್ಲಿ, ಜಾಸ್ಸಿ ಅವರು ಉತ್ಪಾದಕ AI ತಂತ್ರಜ್ಞಾನವು ಕೆಲವು ಕಾರ್ಪೊರೇಟ್ ಕೆಲಸಗಳನ್ನು ಸ್ವಯಂಚಾಲಿತಗೊಳಿಸುತ್ತಿದೆ. ಹೀಗಾಗಿ ಕೆಲವೊಂದು ಸಾಂಪ್ರದಾಯಿಕ ಕೆಲಸಗಳಿಗೆ ಜನಬಲದ ಅವಶ್ಯಕತೆ ಕಡಿಮೆಯಾಗಲಿದೆ. ಅವರು ಹೇಳಿದಂತೆ....
ಪ್ರತಿಯೊಂದು ತಾಂತ್ರಿಕ ಬದಲಾವಣೆ ಕೆಲವು ಕೆಲಸಗಳನ್ನು ಸ್ವಯಂಚಾಲಿತಗೊಳಿಸಲಿದೆ. ಇದರ ಪರಿಣಾಮವಾಗಿ, ಆ ಕೆಲಸಗಳನ್ನು ಮಾಡುವ ಜನರ ಸಂಖ್ಯೆ ಕಡಿಮೆಯಾಗಬಹುದು.
ಫಾರ್ಚೂನ್ ಮಾಗಜೀನ್ ಪ್ರಕಟಿಸಿದ ವರದಿಯ ಪ್ರಕಾರ, ಜಾಸ್ಸಿ ಅವರು ಈ ಮಾತುಗಳನ್ನು ತಮ್ಮ ಕಂಪನಿಯ ಎಲ್ಲಾ 1.5 ಮಿಲಿಯನ್ ಉದ್ಯೋಗಿಗಳಿಗೆ ಇತ್ತೀಚೆಗಷ್ಟೇ ಕಳುಹಿಸಿದ ಜ್ಞಾಪಕ ಪತ್ರದಲ್ಲೂ ಹಂಚಿಕೊಂಡಿದ್ದಾರೆ. AI ಬಳಕೆಯಿಂದ ಕೆಲವೊಂದು ಕೆಲಸಗಳಿಗೆ ಇನ್ನು ಮುಂದೆ ಕಡಿಮೆ ಜನರ ಅಗತ್ಯವಿರಬಹುದು. ಆದರೆ, ರೊಬೊಟಿಕ್ಸ್, ಡೇಟಾ ವಿಶ್ಲೇಷಣೆ, ಸಂಶೋಧನೆ, ಸೃಜನಾತ್ಮಕತೆ ಮತ್ತು ಸಂಕೀರ್ಣ ನಿರ್ಧಾರಗಳ ಅಗತ್ಯವಿರುವ ಹೊಸ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಗಳು ನಿರ್ಮಾಣವಾಗಲಿವೆ ಎಂದು ಉಲ್ಲೇಖಿಸಿದ್ದಾರೆ
ಜಾಸ್ಸಿ ಅವರು ಉದ್ಯೋಗಿಗಳಿಗೆ ಅಪ್ಡೇಟ್‌ಗೆ ಹೊಂದಿಕೊಳ್ಳುವಂತೆ ಕರೆ ನೀಡಿದ್ದಾರೆ. AI ಬಗ್ಗೆ ಕುತೂಹಲ ಇರಲಿ, ನುರಿತ ತರಬೇತಿಗಳು, ಕಾರ್ಯಾಗಾರಗಳಲ್ಲಿ ಭಾಗವಹಿಸಿ, AI ಉಪಕರಣಗಳನ್ನು ಬಳಸುವಲ್ಲಿ ಸಕ್ರಿಯರಾಗಿರಿ ಎಂದಿದ್ದಾರೆ. AI ತಂತ್ರಜ್ಞಾನವು ದಿನನಿತ್ಯದ ಜಟಿಲವಾದ ಕಾರ್ಯಗಳಿಂದ ಉದ್ಯೋಗಿಗಳನ್ನು ಮುಕ್ತಗೊಳಿಸುತ್ತಿದ್ದು, ಇದು ಕೆಲಸವನ್ನು ಇನ್ನಷ್ಟು ಆಸಕ್ತಿದಾಯಕ ಮತ್ತು ನವೀನತೆಯತ್ತ ಕೇಂದ್ರೀಕೃತ ಮಾಡಲಿದೆ ಎಂದಿದ್ದಾರೆ.
2023ರ ಆರಂಭದಿಂದ ಅಮೆಜಾನ್ ಕಂಪನಿಯು 27,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಿದೆ. ಇತ್ತೀಚೆಗಿನ ತಿಂಗಳಲ್ಲಿ ಚಿಲ್ಲರೆ ವ್ಯಾಪಾರ ಮತ್ತು ಸಾಧನ ವಿಭಾಗಗಳಲ್ಲಿ ಮತ್ತಷ್ಟು ಉದ್ಯೋಗ ಕಡಿತಕ್ಕೆ ಸೂಚನೆ ನೀಡಿದೆ.
ಸೇಲ್ಸ್‌ಫೋರ್ಸ್ ಸಿಇಒ ಮಾರ್ಕ್ ಬೆನಿಯೋಫ್: “AI ಈಗಾಗಲೇ 30% ರಿಂದ 50% ತನಕ ಕೆಲಸಗಳನ್ನು ನಿರ್ವಹಿಸುತ್ತಿದೆ.”
ಏನೇ ಇರಲಿ AI ನಿಂದ ಕಂಪನಿಗಳ ಕಾರ್ಪೊರೇಟ್ ಬೆಳವಣಿಗೆ ಮತ್ತು ಉದ್ಯೋಗಿಗಳ ಭದ್ರತೆಯ ನಡುವಿನ ತೀವ್ರ ಸಮತೋಲನ ತಪ್ಪಿದೆ. ಮನುಷ್ಯನ ಕೆಲಸದ ಶೈಲಿಗೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಮುಂದಿನ ವರ್ಷಗಳು ಸ್ಪಷ್ಟಪಡಿಸಲಿದೆ. ಮಾತ್ರವಲ್ಲ ಭವಿಷ್ಯವೂ ಬರೇ AI ನಿಂದಲೇ ನಡೆಯಲು ಸಾಧ್ಯವಿಲ್ಲ ಎಂಬ ಅಂಶ ಕೂಡ ಚರ್ಚೆಯಲ್ಲಿದೆ.