ಬೆಂಗಳೂರಿನ ಫ್ಲಿಪ್‌ಕಾರ್ಟ್ ಕಂಪನಿಯಿಂದ ನಿರುದ್ಯೋಗಿಗಳಿಗೆ ನ.8 ರಂದು ನೇರ ಸಂದರ್ಶನ

By Gowthami K  |  First Published Nov 6, 2022, 5:26 PM IST

ಬೆಂಗಳೂರಿನ ಫ್ಲಿಪ್‌ಕಾರ್ಟ್ ಪ್ರೈ.ಲಿ. ಸಂಸ್ಥೆಯವರು ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಇದರ ಅಂಗವಾಗಿ ನ. 8 ರಂದು  ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಾಕ್‌ ಇನ್‌ ಇಂಟರ್‌ವ್ಯೂವ್‌ ಅನ್ನು ಆಯೋಜಿಸಲಾಗಿದೆ.


ಕೊಪ್ಪಳ (ನ.6): ಬೆಂಗಳೂರಿನ ಫ್ಲಿಪ್‌ಕಾರ್ಟ್ ಪ್ರೈ.ಲಿ. ಸಂಸ್ಥೆಯವರು ತಮ್ಮಲ್ಲಿನ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಇದರ ಅಂಗವಾಗಿ ನ. 8 ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಾಕ್‌ ಇನ್‌ ಇಂಟರ್‌ವ್ಯೂವ್‌ ಅನ್ನು ಆಯೋಜಿಸಲಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ವಾಕ್‌ ಇನ್‌ ಇಂಟರ್‌ವ್ಯೂವ್‌ನಲ್ಲಿ ಭಾಗವಹಿಸಬಹುದು. ಆಸಕ್ತ 18ರಿಂದ 35 ವರ್ಷ ವಯೋಮಾನದ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು, ಆಧಾರ್‌ ಕಾರ್ಡ್‌ ಪ್ರತಿ, ಬಯೋಡೆಟಾ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಇಂಟರ್‌ವ್ಯೂವ್‌ನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ, ದೂ.ಸಂ: 08539-220859, 9380189600, 9353515518 ಇಲ್ಲಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಾಣೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರುಡ್‌ಸೆಟ್‌ನಿಂದ ತರಬೇತಿಗಾಗಿ ಅರ್ಜಿ ಆಹ್ವಾನ
ಮೈಸೂರು: ರುಡ್‌ಸೆಟ್‌ ಸಂಸ್ಥೆಯು ಮೈಸೂರಿನಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಸ್ವ ಉದ್ಯೋಗ ಮಾಡಲು ಆಡು ಸಾಕಾಣಿಕೆ ಮತ್ತು ಫಾಸ್ಟ್‌ ಫುಡ್‌ ತಯಾರಿಕೆ ತರಬೇತಿಗಳನ್ನು ನವೆಂಬರ್‌ ತಿಂಗಳಿನಲ್ಲಿ ಆಯೋಜಿಸಿದೆ.

Tap to resize

Latest Videos

ನ.10 ರಿಂದ 19 ರವರೆಗೆ ಆಡು ಸಾಕಾಣಿಕೆ, ನ.16 ರಿಂದ 25 ರವರೆಗೆ ಫಾಸ್ಟ್‌ ಫುಡ್‌ ಸ್ಟಾಲ್‌ ಉದ್ಯಮಿ ತರಬೇತಿಯನ್ನು ಆಯೋಜಿಸಿದ್ದು, ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು. ಕನ್ನಡ ಓದು ಬರಹ ಬಲ್ಲವರಾಗಿರಬೇಕು. ಸ್ವ ಉದ್ಯೋಗವನ್ನು ಮಾಡಬೇಕೆಂಬ ಆಸಕ್ತಿ ಹೊಂದಿರಬೇಕು. ತರಬೇತಿಯು ಊಟ ಮತ್ತು ವಸತಿ ಸಹಿತವಾಗಿ ಸಂಪೂರ್ಣ ಉಚಿತವಾಗಿರುತ್ತದೆ.

IOCL RECRUITMENT 2022: ತಂತ್ರಜ್ಞ  ಮತ್ತು ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ

ಆಸಕ್ತ ಅಭ್ಯರ್ಥಿಗಳು ತಮ್ಮ ಮೊಬೈಲ್‌ ನಂಬರ್‌ವುಳ್ಳ ಸ್ವವಿಳಾಸದ ಅರ್ಜಿಯೊಂದಿಗೆ, ಆಧಾರ್‌ ಕಾರ್ಡ್‌, ಬಿಪಿಎಲ್‌ ರೇಷನ್‌ ಕಾರ್ಡ್‌ ಜೆರಾಕ್ಸ್‌ ಪ್ರತಿಗಳೊಂದಿಗೆ ರುಡ್‌ಸೆಟ್‌ ಸಂಸ್ಥೆಯಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ತರಬೇತಿಗೆ ಆಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ನೇರ ಸಂದರ್ಶನ ಮೂಲಕ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ. 0821- 2519663, 98440 13948, 99640 96406, 98801 96581, 97404 30061, 87468 03006 ಸಂಪರ್ಕಿಸಬಹುದು.

VSSC Recruitment 2022: 194 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ವಾಕ್‌ ಇನ್ ಸಂದರ್ಶನ 

 

click me!