2.5 ಕೋಟಿ ಸಂಬಳ ಇದ್ರೂ ಗೂಗಲ್ ಕೆಲ್ಸ ಬಿಟ್ಟ ಟೆಕ್ಕಿ, ಕಾರಣ ವಿಚಿತ್ರ

Published : Sep 02, 2025, 03:13 PM IST
Google job

ಸಾರಾಂಶ

ಒಳ್ಳೆ ಕೆಲ್ಸ, ಸಂಬಳ ಸಿಗೋದು ಈಗ ಕಷ್ಟ. ಲಕ್ಷಾಂತರ ರೂಪಾಯಿ ಸಂಬಳ ಬಂದ್ರೂ ಹಣ ಕೈನಲ್ಲಿ ನಿಲ್ಲೋದಿಲ್ಲ ಅನ್ನೋರೇ ಹೆಚ್ಚು. ಆದ್ರೆ ಇಲ್ಲೊಬ್ಬ 2.5 ಕೋಟಿ ಸಂಬಳ ಬರ್ತಿದ್ದ ಗೂಗಲ್ ಕೆಲ್ಸ ಬಿಟ್ಟಿದ್ದಾನೆ. ಯಾಕೆ ಗೊತ್ತಾ? 

ಗೂಗಲ್ ( Google) ನಂತಹ ಟೆಕ್ಕಿ ದೈತ್ಯ ಕಂಪನಿಯಲ್ಲಿ ಕೆಲ್ಸ ಸಿಗೋದೇ ಕಷ್ಟ. ವರ್ಷ ಪೂರ್ತಿ ಇಂಟರ್ವ್ಯೂಗೆ ತಯಾರಿ ನಡೆಸಿದ್ರೂ ಕೆಲವರು ಕೆಲ್ಸ ಗಿಟ್ಟಿಸಿಕೊಳ್ಳೋದ್ರಲ್ಲಿ ಫೇಲ್ ಆಗ್ತಾರೆ. ಗೂಗಲ್ ನಲ್ಲಿ ಕೆಲ್ಸ ಪಡೆದವರು ಅದೃಷ್ಟ ಮಾಡಿದ್ದಾರೆ, ಒಳ್ಳೆ ಸಂಬಳ, ಉತ್ತಮ ಸೌಲಭ್ಯ, ಲೈಫ್ ಸೆಟಲ್ ಅಂದ್ಕೊಳ್ತೇವೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಕೋಟಿ ಲೆಕ್ಕದಲ್ಲಿ ಬರ್ತಿದ್ದ ಗೂಗಲ್ ಕೆಲ್ಸ ಬಿಟ್ಟಿದ್ದಾರೆ. ಬ್ರೇಕ್ ಅಪ್ ಅವನ ಮನಸ್ಥಿತಿಯನ್ನು ಸಂಪೂರ್ಣ ಬದಲಿಸಿದೆ. 2.5 ಕೋಟಿ ಸಂಬಳ ಬರ್ತಿದ್ದ ಕೆಲ್ಸ ಬಿಟ್ಟು ಈಗೇನು ಮಾಡ್ತಿದ್ದಾನೆ ಗೊತ್ತಾ?

2021ರಲ್ಲಿ ಗೂಗಲ್ ನಲ್ಲಿ ಕೆಲ್ಸ ಪಡೆದಿದ್ದ ಟ್ಯಾಂಗ್ : 27 ವರ್ಷದ ಜಿಮ್ ಟ್ಯಾಂಗ್ , ಎಲ್ಲರಂತೆ ಕನಸು ಕಂಡಿದ್ದ. ಗೂಗಲ್ ನಲ್ಲಿ ಕೆಲ್ಸ ಪಡೆದು, ಉತ್ತಮ ಜೀವನ ನಡೆಸ್ಬೇಕು ಅಂದ್ಕೊಂಡಿದ್ದ. ಆತನ ಶ್ರಮಕ್ಕೆ ತಕ್ಕ ಫಲ ಸಿಕ್ಕಿತ್ತು. ಗೂಗಲ್ ನಲ್ಲಿ ಕೆಲ್ಸ ಸಿಕ್ಕಿತ್ತು. ಅಮ್ಮನನ್ನು ಆಫೀಸ್ ಗೆ ಕರೆದುಕೊಂಡು ಹೋಗಿ ಎಲ್ಲವನ್ನೂ ತೋರಿಸಿದ್ದ ಟ್ಯಾಂಗ್, ಮುಂದಿನ ಲೈಫ್ ಬಗ್ಗೆ ಪ್ಲಾನ್ ಮಾಡಿದ್ದ. 40 ವರ್ಷಕ್ಕೆ ನಿವೃತ್ತಿ ಪಡೀಬೇಕು, ಅಲ್ಲಿಯವರೆಗೆ ಗೂಗಲ್ ನಲ್ಲಿ ಕೆಲ್ಸ ಮಾಡಿದ್ರೆ ಸಾಕು ಅಂದ್ಕೊಂಡಿದ್ದ. ಆತನ ಕೆಲ್ಸಕ್ಕೆ ತಕ್ಕಂತೆ ಸಂಬಳ ಸಿಗ್ತಿತ್ತು. 2.5 ಕೋಟಿ ಸಂಪಾದನೆ ಮಾಡ್ತಿದ್ದ ಟ್ಯಾಂಗ್, ಒಂದಿಷ್ಟು ಹೊಸ ಜವಾಬ್ದಾರಿ ಹೊತ್ತಿದ್ದ. ಅನೇಕರ ಜೊತೆ ಕೆಲ್ಸ ಮಾಡುವ ಅವಕಾಶ ಆತನಿಗೆ ಸಿಕ್ಕಿತ್ತು.

14 ವರ್ಷ ಬ್ಯಾಂಕಿಂಗ್ ಅನುಭವ ಕೆಲಸ ಇಲ್ಲದೆ ಬೆಂಗಳೂರು ಸಿಗ್ನಲ್‌ನಲ್ಲಿ ಭಿಕ್ಷುಕನಾದ!

ಬದಲಾದ ಟ್ಯಾಂಗ್ ಮನಸ್ಸು : ಆರಂಭದಲ್ಲಿ ಖುಷಿಯಾಗಿಯೇ ಕೆಲ್ಸ ಮಾಡ್ತಿದ್ದ ಟ್ಯಾಂಗ್ ಮನಸ್ಸು ನಿಧಾನವಾಗಿ ಬದಲಾಗ್ತಾ ಇತ್ತು. ಕಾರ್ಪೋರೇಟ್ ಜೀವನ ಅವನಿಗೆ ಇಷ್ಟವಾಗ್ತಿರಲಿಲ್ಲ. ಕೆಲ್ಸ ಮಾಡ್ತಿದ್ರೂ ತೃಪ್ತಿ ಇರಲಿಲ್ಲ. ಕೆಲ್ಸ ನಿಧಾನವಾಗಿ ಬೇಸರತರಿಸಿತ್ತು. ಈ ಮಧ್ಯೆ ಬ್ರೇಕ್ ಅಪ್, ಟ್ಯಾಂಗ್ ಜೀವನವನ್ನು ಸಂಪೂರ್ಣ ಬದಲಿಸಿತು.

ಕಾರ್ಪೊರೇಟ್ (Corporate) ಕೆಲ್ಸದ ಬೇಸರ ಬರ್ತಿದ್ದ ಟೈಂನಲ್ಲಿಯೇ ಟ್ಯಾಂಗ್ ಗೆ ಬ್ರೇಕ್ ಅಪ್ ಆಗಿದೆ. ಯಾಕೆ ಬ್ರೇಕ್ ಅಪ್ ಆಯ್ತು, ಯಾರು ಹುಡುಗಿ ಅನ್ನೋದನ್ನು ಟ್ಯಾಂಗ್ ಹೇಳಿಲ್ಲ. ಬ್ರೇಕ್ ಅಪ್ ಆದ್ಮೇಲೆ ಮನಸ್ಸು ಸರಿಯಿರಲಿಲ್ಲ ಅಂತ ಮಾತ್ರ ಹೇಳಿದ್ದಾನೆ. ಬ್ರೇಕ್ ಅಪ್ ನಂತ್ರ ಬೇಸರಗೊಂಡಿದ್ದ, ನಿರಾಸೆಗೊಂಡಿದ್ದ ಟ್ಯಾಂಗ್, ಕೆಲಸಕ್ಕೆ ಸ್ವಲ್ಪ ದಿನ ಬ್ರೇಕ್ ನೀಡುವ ನಿರ್ಧಾರ ಮಾಡಿದ್ದ. 15 ದಿನ ರಜೆ ಹಾಕಿದ್ದ. ಆದ್ರೆ ರಜೆ ನಂತ್ರ ಕಚೇರಿಗೆ ಟ್ಯಾಂಗ್ ವಾಪಸ್ ಹೋಗ್ಲಿಲ್ಲ. ಈ ವರ್ಷ ಮೇ ತಿಂಗಳಿನಲ್ಲಿ ತನ್ನ 2.5 ಕೋಟಿ ಸಂಬಳದ ಕೆಲ್ಸ ಬಿಟ್ಟಿದ್ದಾನೆ.

14 ಗಂಟೆ ಕೆಲಸವನ್ನು ಸಮರ್ಥಿಸಿಕೊಂಡ ಭಾರತೀಯ ಮೂಲದ

ಟ್ಯಾಂಗ್ ಈಗೇನು ಮಾಡ್ತಿದ್ದಾನೆ? : ಟ್ಯಾಂಗ್ ತೃಪ್ತ ಜೀವನ ನಡೆಸುವ ದಾರಿ ಕಂಡ್ಕೊಂಡಿದ್ದಾನೆ. ಟ್ಯಾಂಗ್, ಡಿಜಿಟಲ್ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡ್ತಿದ್ದಾನೆ. ವಸ್ತುಗಳ ತಯಾರಿ ಬಗ್ಗೆ ತರಬೇತಿ ನೀಡ್ತಿದ್ದಾನೆ. ಜಪಾನ್ ನಂತ್ರ ಇತರ ಏಷ್ಯಾದ ದೇಶಗಳಿಗೆ ಪ್ರಯಾಣಿಸ್ತಿರೋದಲ್ದೆ ಅದ್ರ ಬ್ಲಾಗ್ ಮಾಡ್ತಿದ್ದಾನೆ. ಟ್ಯಾಂಗ್ ಆಲೋಚನೆ ಈಗ ಬದಲಾಗಿದೆ. ಬಾಹ್ಯ ವಸ್ತು ಹಾಗೂ ವಿಷಯಗಳಿಂದ ನಾನು ಯಶಸ್ಸನ್ನು ಅಳೆಯುತ್ತಿದ್ದೆ. ಆದ್ರೀಗ ಯಶಸ್ಸಿನ ಅರ್ಥ ಗೊತ್ತಾಗಿದೆ. ಜೀವನದಲ್ಲಿ ತೃಪ್ತರಾಗೋದೇ ಯಶಸ್ಸು ಎಂದು ಅವರು ಹೇಳಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?