ದಾಮೋದರ್ ವ್ಯಾಲಿ ಕಾರ್ಪೋರೇಷನ್‌ನಲ್ಲಿ ಎಕ್ಸಿಕ್ಯೂಟಿವ್ ಟ್ರೇನಿಗಳನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನವಾಗಿದೆ.
ದಾಮೋದರ್ ವ್ಯಾಲಿ ಕಾರ್ಪೋರೇಷನ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, ಇಂಜಿನಿಯರಿಂಗ್ ಪದವೀಧರರಿಗಾಗಿ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಇಲ್ಲಿ ಒಟ್ಟು 176 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಹುದ್ದೆಗಳ ಸಂಖ್ಯೆ : 176
undefined
ಹುದ್ದೆಗಳ ವಿವರ
1.ಎಕ್ಸಿಕ್ಯೂಟಿವ್ ಟ್ರೈನಿ (ಇಲೆಕ್ಟ್ರಿಕಲ್)15
2.ಎಕ್ಸಿಕ್ಯೂಟಿವ್ ಟ್ರೈನಿ (ಸಿವಿಲ್) 39
3.ಎಕ್ಸಿಕ್ಯೂಟಿವ್ ಟ್ರೈನಿ (ಸಿಅಂಡ್‌ಐ) 15
4.ಎಕ್ಸಿಕ್ಯೂಟಿವ್ ಟ್ರೈನಿ (ಐಟಿ)03
5.ಎಕ್ಸಿಕ್ಯೂಟಿವ್ ಟ್ರೈನಿ (ಕೆಮಿಕಲ್) 02
6.ಎಕ್ಸಿಕ್ಯೂಟಿವ್ ಟ್ರೈನಿ (ಮೆಕ್ಯಾನಿಕಲ್) 59
ವೇತನ ಶ್ರೇಣಿ
ರು. 56,100 ರಿಂದ 1,77,500
ಶೈಕ್ಷಣಿಕ ಅರ್ಹತೆ(ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ )
ಸಂಬಂಧಿತ ವಿಷಯದಲ್ಲಿ ಇಂಜಿನಿಯರಿಂಗ್ ಉತ್ತೀರ್ಣರಾಗಿರಬೇಕು.
ಎಕ್ಸಿಕ್ಯೂಟಿವ್ ಟ್ರೇನಿಗಳು ಮೆಕ್ಯಾನಿಕಲ್ / ಇಲೆಕ್ಟ್ರಿಕಲ್ / ಸಿವಿಲ್ / ಕಂಮ್ಯೂನಿಕೇಷನ್ ಅಂಡ್ ಇನ್ಫಾರ್‌ಮೇಷನ್ / ಐಟಿ ಮತ್ತು ಕಮ್ಯೂನಿಕೇಷನ್ ವಿಷಯಗಳಲ್ಲಿ ಗೇಟ್-2023 ಪರೀಕ್ಷೆ ಬರೆದವರನ್ನು, ಇದರ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.
ವಯೋಮಿತಿ
ಗರಿಷ್ಠ 29 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-07-2024 ರ ರಾತ್ರಿ 23-59 ಗಂಟೆವರೆಗೆ.
ಅರ್ಜಿ ಶುಲ್ಕ
1. ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ ರು. 300.
2. ಆರ್ಥಿಕವಾಗಿ ಹಿಂದುಳಿದ / ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ರೂ.300.
3. ಎಸ್ಸಿ / ಎಸ್ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
1.ಹೆಸರು
2.ಮೊಬೈಲ್ ಸಂಖ್ಯೆ
3.ಇ-ಮೇಲ್ ವಿಳಾಸ
4.ಎಸ್ ಎಸ್ ಎಲ್ ಸಿ ಅಂಕಪಟ್ಟಿ
5.ಜನ್ಮ ದಿನಾಂಕ ದಾಖಲೆ
6.ಬಿಇ ಹಾಗೂ ಗೇಟ್-2023 ಪರೀಕ್ಷೆ ಅರ್ಹತೆ ದಾಖಲೆ
7.ಆಧಾರ್ ಕಾರ್ಡ್
8.ವಯೋಮಿತಿ ಮೀಸಲು ಬಯಸಿದಲ್ಲಿ ಜಾತಿ ಪ್ರಮಾಣ ಪತ್ರ
ಎಚ್‌ಎಎಲ್ ಹುದ್ದೆಗಳ ಭರ್ತಿಗೆ ಪರೀಕ್ಷೆಯ ಸಂಭಾವ್ಯ ದಿನಾಂಕ ಜುಲೈ7ಕ್ಕೆ ನಿಗದಿ: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 116 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿರುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ ಜುಲೈ 7ಕ್ಕೆ ನಿಗದಿಪಡಿಸಲಾಗಿದೆ. ನೇಮಕಾತಿ ಸ್ಥಳ: ಬೆಂಗಳೂರು, ಜೋಧ್‌ಪುರ್, ತಮಿಳುನಾಡು, ಇತರೆ ಹಲವು ಘಟಕಗಳಲ್ಲಿ ನೇಮಕ.
ಹುದ್ದೆಗಳ ವಿವರ
1.ಮೆಕ್ಯಾನಿಕಲ್ 64
2.ಇಲೆಕ್ಟ್ರಿಕಲ್ 44
3.ಇಲೆಕ್ಟ್ರಾನಿಕ್ಸ್ 0೮
ವಿದ್ಯಾರ್ಹತೆ
1.ಡಿಪ್ಲೊಮ ಇನ್ ಮೆಕ್ಯಾನಿಕಲ್/ ಇಲೆಕ್ಟ್ರಿಕಲ್ / ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್.
ವಯೋಮಿತಿ
1.ಸಾಮಾನ್ಯ ವರ್ಗದವರಿಗೆ ಗರಿಷ್ಠ 2೮ ವರ್ಷ.
2.ಒಬಿಸಿ / ಎನ್‌ಸಿಎಲ್ ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷ
3.ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 33 ವರ್ಷ
4.ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಗರಿಷ್ಠ 3೮ ವರ್ಷ.
ನೇಮಕಾತಿ ಪ್ರಕ್ರಿಯೆ
ಅರ್ಜಿ ಸಲ್ಲಿಸಿ ಶಾರ್ಟ್ ಲಿಸ್ಟ್ ಆದವರಿಗೆ ಜುಲೈ 7 ರಂದು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆ ಬರೆದು ಆಯ್ಕೆಯಾದವರಿಗೆ ಅಪ್ರೆಂಟಿಸ್ ಕಾಯ್ದೆ ಪ್ರಕಾರ ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ. ಈ ಹುದ್ದೆಗಳು ಖಾಯಂ ಅಲ್ಲ. ನಿಗದಿತ ಅವಧಿಯ ತರಬೇತುದಾರ ಹುದ್ದೆಗಳು. ತರಬೇತಿ ಅವಧಿ ಮುಗಿದ ನಂತರ ಕಂಪನಿಯಲ್ಲಿ ಮುಂದುವರಿಸಲಾಗುವುದಿಲ್ಲ.
1, ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ: 07-07-2024
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ಎಚ್‌ಎಎಲ್‌ನ ವೆಬ್ ಸೈಟ್ ನೋಡಬಹುದು.