
ಇಡೀ ದಿನ ದುಡಿಸ್ಕೊಂಡು, ಸಂಬಳ (Salary) ನೀಡ್ತಿದ್ದ ಕಂಪನಿ ಇದ್ದಕ್ಕಿದ್ದಂತೆ ಇವತ್ತಿಂದ ನಿಮ್ಮ ಕುಟುಂಬಕ್ಕೆ ಹೆಚ್ಚು ಟೈಂ ಕೊಡಿ, ನಿಮ್ಮ ಕೆಲಸದ ಭಾರವನ್ನು ಕಡಿಮೆ ಮಾಡ್ತೇವೆ ಅಂತ ಹೇಳಿದ್ರೆ ಸ್ವಲ್ಪ ಖುಷಿ ಆಗ್ತಿತ್ತೇನೋ. ಆದ್ರೆ ಕೆಲಸ ಕಡಿಮೆ ಮಾಡೋ ಜೊತೆಗೆ ಸಂಬಳವನ್ನೂ ಕಡಿಮೆ ಮಾಡ್ತೇನೆ ಅಂದ್ರೆ ಉದ್ಯೋಗಿ (employee) ಸಂಕಷ್ಟಕ್ಕೆ ಸಿಲುಕ್ತಾನೆ. ಕಂಪನಿ ನಂಬ್ಕೊಂಡು ಮಾಡ್ಕೊಂಡಿರೋ ಕಮಿಟ್ಮೆಂಟ್ ಗೆ ಹಣ ಹೊಂದಿಸೋದು ಕಷ್ಟವಾಗುತ್ತೆ. ಕಂಪನಿಯೊಂದು ಉದ್ಯೋಗಿಗಿಗೆ ನೇರವಾಗಿ ಸಂಬಳ ಕಡಿಮೆ ಮಾಡ್ತೇವೆ ಅನ್ನೋದನ್ನು ಸುತ್ತಿ ಬಳಸಿ ಹೇಳಿದೆ.
ನಿಮ್ಮ ಕುಟುಂಬಕ್ಕೆ ಹಾಗೂ ಸ್ನೇಹಿತರಿಗೆ ಸ್ವಲ್ಪ ಸಮಯ ನೀಡ್ಲಿ ಎನ್ನುವ ಕಾರಣಕ್ಕೆ ನಿಮ್ಮ ಕೆಲಸದ ಹೊರೆಯನ್ನು ಕಡಿಮೆ ಮಾಡ್ತಿದ್ದೇವೆ. ಅದಕ್ಕೆ ತಕ್ಕಂತೆ ಸಂಬಳ ಅಡ್ಜೆಸ್ಟ್ ಮಾಡ್ತೇವೆ ಎಂದಿರುವ ಹೆಚ್ ಆರ್ ಇಮೇಲ್ ವೈರಲ್ ಆಗಿದೆ. ಇದನ್ನು ನೋಡಿದ ಬಳಕೆದಾರರು, ಬೇರೆ ಕೆಲಸ ಹುಡುಕಿಕೊಳ್ಳಿ ಅಂತ ಸಲಹೆ ನೀಡಿದ್ದಾರೆ.
ಪಿಯುಸಿ, ಐಟಿಐ ಆದವರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಉದ್ಯೋಗಾವಕಾಶ
ಇನ್ಫೋಸಿಸ್ ಸೇರಿದಂತೆ ಅನೇಕ ದೊಡ್ಡ ಕಂಪನಿಗಳು ಮುಲಾಜಿಲ್ಲದೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ. ಏಕಾಏಕಿ ಕೆಲಸದಿಂದ ವಜಾ ಮಾಡೋದು ಒಂದು ವಿಧವಾದ್ರೆ, ಇನ್ನೊಂದು ಸೈಲೆಂಟ್ ಸ್ಯಾಕಿಂಗ್. ಉದ್ಯೋಗಿಗೆ ಉಸಿರುಗಟ್ಟಿಸುವಂತ ವಾತಾವರಣ ನಿರ್ಮಾಣ ಮಾಡಿ ಉದ್ಯೋಗಿಯೇ ಕೆಲಸದಿಂದ ಹೊರಗೆ ಹೋಗುವಂತೆ ಮಾಡೋ ಪ್ಲಾನ್ ಇದು. ಈಗ ರೆಡ್ಡಿಟ್ ನಲ್ಲಿ ಉದ್ಯೋಗಿಯೊಬ್ಬ ಕಂಪನಿ ಕಳುಹಿಸಿದ ಇಮೇಲ್ ಪೋಸ್ಟ್ ಮಾಡಿದ್ದಾರೆ. ಕಂಪನಿ ಇಮೇಲ್ ಸೈಲೆಂಟ್ ವಜಾದ ಮುನ್ಸೂಚನೆಯಂತೆ ಕಾಣ್ತಿದೆ.
ಸಾಮಾನ್ಯವಾಗಿ ಕಂಪನಿಗಳು ಕೆಲಸ ಹೆಚ್ಚು ಮಾಡಿ, ಸಂಬಳವನ್ನು ಅಷ್ಟೇ ಇಡುತ್ವೆ. ಆದ್ರೆ ಈ ಕಂಪನಿ ಸ್ವಲ್ಪ ಭಿನ್ನವಾದ ನಿಯಮ ಫಾಲೋ ಮಾಡ್ತಿದೆ. ಕುಟುಂಬದ ನೆಪ ಹೇಳಿ, ಉದ್ಯೋಗಿ ಕೆಲಸ ಕಡಿಮೆ ಮಾಡೋ ಜೊತೆಗೆ ಸಂಬಳವನ್ನು ಕಡಿಮೆ ಮಾಡಿರೋದಾಗಿ ಇಮೇಲ್ ಕಳುಹಿಸಿದೆ. ವಾವ್! ಕುಟುಂಬ ಮತ್ತು ಸ್ನೇಹಿತರಿಗೆ ಹೆಚ್ಚಿನ ಸಮಯ! ಮುಂದೆ ನಿಮಗೆ ಕಡಿಮೆ ಕೆಲಸ ಸಿಗುವಂತೆ ನಾವು ನಿಮ್ಮ ಜವಾಬ್ದಾರಿಗಳನ್ನು ಸರಿಹೊಂದಿಸುತ್ತಿದ್ದೇವೆ. ನಿಮ್ಮ ಹುದ್ದೆ ಹಾಗೆಯೇ ಇರುತ್ತದೆ. ಆದರೆ ಕಡಿಮೆ ಕೆಲಸ ಇರುವುದರಿಂದ ನಿಮ್ಮ ಸಂಬಳವನ್ನು ಅದಕ್ಕೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ. ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಹೊಸ ಲೆಕ್ಕಾಚಾರವನ್ನು ನೀವು ನೋಡ್ಬಹುದು ಎಂದು ಹೆಚ್ ಆರ್ ಇಮೇಲ್ ಮಾಡಿದ್ದಾರೆ. ನೀವು ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ನವೀಕರಿಸಿದ ಫಾರ್ಮ್ ಪ್ರವೇಶಿಸಿ, ಸಹಿ ಮಾಡ್ಬಹುದು. ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ದಯವಿಟ್ಟು ಇನ್ನೊಂದು ಇಮೇಲ್‌ಗೆ ಕಾಯಿರಿ. ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ ಎಂದು ಬರೆಯಲಾಗಿದೆ.
ಏನ್ ಐಡಿಯಾ ಗುರು! ಮೈಸೂರಿನ ಈ ರೈತ 4 ಎಕರೆ ಜಮೀನು ಸುತ್ತಲೂ ಮಾಡೆಲ್‌ಗಳ ಫೋಟೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್ : ವ್ಯಕ್ತಿಯ ರೆಡ್ಡಿಟ್ ಫೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಳಕೆದಾರರು ಕಮೆಂಟ್ ಶುರು ಮಾಡಿದ್ದಾರೆ. ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲು ಮಾಡಿರುವ ಪ್ಲಾನ್ ಇದು ಎಂದು ಒಬ್ಬರು ಬರೆದಿದ್ದಾರೆ. ನೀವು ಇನ್ನೊಂದು ಕೆಲಸ ಹುಡುಕುವುದು ಸೂಕ್ತ ಎಂದು ಬಹುತೇಕರು ಸಲಹೆ ನೀಡಿದ್ದಾರೆ. ಇದು ಮನೋವಿಕೃತಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಅಲ್ಲಿನ ಕೆಲಸದ ರೂಲ್ಸ್ ಏನಿದೆ ಎಂಬುದನ್ನು ಪರಿಶೀಲಿಸಿ ನಂತ್ರ ಮುಂದಿನ ಹೆಜ್ಜೆ ಇಡಿ ಎಂದು ಇನ್ನೊಬ್ಬರು ಬರೆದಿದ್ದಾರೆ. ನೀವು ಅದೃಷ್ಟವಂತರು, ನಿಮ್ಮನ್ನು ಯಾವುದೇ ಸೂಚನೆ ಇಲ್ಲದೆ ಕೆಲಸದಿಂದ ತೆಗೆದಿಲ್ಲ, ಸಂಬಳ ಕಡಿಮೆ ಮಾಡಿದ್ದಾರೆ. ಈಗ್ಲೇ ಎಚ್ಚೆತ್ತುಕೊಳ್ಳಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.