ನನಗೆ ಒಂದು ರೂಪಾಯಿ ಸಂಬಳ ಬೇಡ, ಬೆಂಗ್ಳೂರು ಟೆಕ್ಕಿ ಮನವಿಯಿಂದ ಹೆಚ್ಚಿದ ಆತಂಕ

Published : Feb 17, 2025, 04:36 PM ISTUpdated : Feb 18, 2025, 05:18 PM IST
ನನಗೆ ಒಂದು ರೂಪಾಯಿ ಸಂಬಳ ಬೇಡ, ಬೆಂಗ್ಳೂರು ಟೆಕ್ಕಿ ಮನವಿಯಿಂದ ಹೆಚ್ಚಿದ ಆತಂಕ

ಸಾರಾಂಶ

ನಾನು ಫ್ರೀಯಾಗಿ ಕೆಲಸ ಮಾಡುತ್ತೇನೆ. ನನಗೆ ಒಂದು ರೂಪಾಯಿ ಸಂಬಳವೂ ಬೇಡ, ಇದು ಬೆಂಗಳೂರು ಎಂಜಿನೀಯರ್ ಮಾಡಿದ ಮನವಿ. ರೆಡ್ಡಿಟ್‌ನಲ್ಲಿ ಮಾಡಿದ ಪೋಸ್ಟ್ ಇದೀಗ ಬೆಂಗಳೂರಿನಲ್ಲಿ ಆತಂಕ ಹೆಚ್ಚಿಸಿದೆ 

ಬೆಂಗಳೂರು(ಫೆ.17) ಐಟಿ ಸಿಟಿ ಬೆಂಗಳೂರಲ್ಲಿ ಟೆಕ್ಕಿಗಳಿಗೆ ಉದ್ಯೋಗ ಸಿಗುತ್ತಿಲ್ಲವೇ? ಎಂಜಿನೀಯರ್ಸ ಇದೀಗ ಬೆಂಗಳೂರಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಹರಸಾಹಸ ಪಡುವ ಅವಶ್ಯಕತೆ ಇದೆಯಾ? ಕಾರಣ ಇತ್ತೀಚೆಗೆ ಬೆಂಗಳೂರಿನ ಎಂಜಿನೀಯರ್ ಮಾಡಿದ ಮನವಿ ಹಲವು ಪ್ರಶ್ನೆಗಳನ್ನು ಎತ್ತಿದೆ. ದಯವಿಟ್ಟು ತನಗೊಂದು ಕೆಲಸ ಕೊಡಿ ಎಂದು ಟೆಕ್ಕಿ ರೆಡ್ಡಿಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾನೆ. ಕಳೆದ 2 ವರ್ಷಗಳಿಂದ ಸರಿಯಾಗಿ ಕೆಲಸ ಸಿಕ್ಕಿಲ್ಲ. ಸಿಕ್ಕರೂ ಒಪ್ಪಂದ, ಕೆಲ ತಿಂಗಳಿಗೆ ಮಾತ್ರ. ಇದೀಗ ಫುಲ್ ಟೈಮ್ ಕೆಲಸ ಬೇಕು. ಸಂಬಳ ಕೊಡದಿದ್ದರೂ ಪರ್ವಾಗಿಲ್ಲ, ಉಚಿತವಾಗಿ ಮಾಡುತ್ತೇನೆ ಎಂದು ಟೆಕ್ಕಿ ಮಾಡಿದ ಮನವಿ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಷ್ಟೇ ಅಲ್ಲ ಕೆಲ ಆತಂಕವನ್ನು ಹೊರಹಾಕಿದೆ.

ಬೆಂಗಳೂರಿನ ಟೆಕ್ಕಿ 2003ರಲ್ಲಿ ಎಂಜಿನೀಯರಿಂಗ್ ಮುಗಿಸಿ ಒಪ್ಪಂದದ ಮೇರೆಗೆ ಕೆಲ ತಿಂಗಳು ಕಾಲ ಕೆಲಸ ಮಾಡಿದ್ದಾನೆ. ಆದರೆ ಎಲ್ಲೂ ಕೂಡ ಫುಲ್ ಟೈಮ್ ಕೆಲಸ ಸಿಗಲಿಲ್ಲ. ಅದೆಷ್ಟೇ ಪ್ರಯತ್ನ ಪಟ್ಟರೂ ಟೆಕ್ಕಿ ಕೆಲಸ ಸಿಗಲಿಲ್ಲ. ಕಳೆದ 2 ವರ್ಷದಿಂದ ಈತ ಕೆಲಸಕ್ಕಾಗಿ ಅಲೆದಾಡಿ, ರೆಸ್ಯೂಮ್ ನೀಡಿ ಸುಸ್ತಾಗಿದ್ದಾನೆ. ಬಹುತೇಕ ಕಂಪನಿ ಮೆಟ್ಟಿಲು ಹತ್ತಿ ಇಳಿದಿದ್ದಾನೆ. ಇಮೇಲ್ ಮೂಲಕ ರೆಸ್ಯೂಮ್ ಫಾರ್ವರ್ಡ್ ಮಾಡಿದ್ದಾನೆ. ಆದರೆ ಯಾವುದೂ ಕೈಗೂಡಲಿಲ್ಲ. ಇದೀಗ ರೆಡ್ಡಿಟ್ ಮೂಲಕ ತನ್ನ ರೆಸ್ಯೂಮ್, ಬಯೋಡೇಟಾ ಹಂಚಿಕೊಂಡು ಕೆಲಸ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

₹60 ಲಕ್ಷಕ್ಕಿಂತ ಕಡಿಮೆ ಸಂಬಳವಿದ್ದವರು ಬಡವರು, ಶೇ.70 ರಷ್ಟು ಟ್ಯಾಕ್ಸ್ ಕತೆ ಬಿಚ್ಚಿಟ್ಟ ಟೆಕ್ಕಿ!

ನಾನು 2023ರಲ್ಲಿ ಬಿಇ ಇನ್‌ಫಾರ್ಮೇಶನ್ ಸೈನ್ಸ್ ಹಾಗೂ ಎಂಜಿನೀಯರಿಂಗ್ ಪದವಿ ಮುಗಿಸಿದ್ದೇನೆ. ಆದರೆ ಸದ್ಯ ಕಲೆಸ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದೇನೆ. ಜಾವಾ, ಪೈಥಾನ್, ಡೆವ್ ಆಪ್ಸ್, ಕ್ಲೌಡ್ ಕಂಪ್ಯೂಟಿಂಗ್, ಮಶಿನ್ ಲರ್ನಿಂಗ್ ವಿಷಯಗಳಲ್ಲಿ ಪರಿಣಿತಿ ಹೊಂದಿದ್ದೇನೆ. CI/CD ಪೈಪ್‌ಲೈನ್, ಡಾಕರ್, ಕುಬರೆನೆಟೆಸ್, ಎಪಿಐ ಡೆವಲಪ್‌ಮೆಂಟ್ ಸೇರಿ ಕೆಲ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಇದೆ ಎಂದು ಈತ ತನ್ನ ರೆಸ್ಯೂಮ್‌ನಲ್ಲಿ ಹೇಳಿಕೊಂಡಿದ್ದಾನೆ.

ಪದವಿ ಮುಗಿಸಿದ ಬಳಿಕ ಸರಿಯಾಗಿ ಕೆಲಸ ಸಿಕ್ಕಿಲ್ಲ. ಇಂಟರ್ನಿಯಾಗಿ ಎರಡುಕಂಪನಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಫುಲ್ ಟೈಮ್ ಕೆಲಸ ಮಾತ್ರ ಸಿಗುತ್ತಿಲ್ಲ. ನನಗೆ ಫುಲ್ ಟೈಮ್ ಕೆಲಸ ಬೇಕು, ನಾನು ಮನೆಯಿಂದ ಬೇಕಾದರೆ ಉಚಿತವಾಗಿ ಯಾವುದೇ ಸಂಬಳ ಇಲ್ಲದೆ ಕೆಲಸ ಮಾಡಲು ಸಿದ್ಧನಿದ್ದೇನೆ. ಕಾರಣ ನನಗೆ ಎಕ್ಸ್‌ಪೀರಿಯನ್ಸ್ ಬೇಕು. ಹಲವು ಕಂಪನಿಯ ಸಂದರ್ಶನದಲ್ಲಿ ಅನುಭವ ಎಷ್ಟಿದೆ ಎಂದು ಕೇಳಿದಾಗ, ಫುಲ್ ಟೈಮ್ ಜಾಬ್ ಅನುಭವ ನನಗಿಲ್ಲ. ಹೀಗಾಗಿ ಕೈಗೆ ಬಂದ ಹಲವು ಕೆಲಸಗಳು ಜಾರಿ ಹೋಗಿದೆ ಎಂದು ಟೆಕ್ಕಿ ಅಳಲು ತೋಡಿಕೊಂಡಿದ್ದಾನೆ. ನಾನೀನ ಕೆಲಸದ ಅನಿವಾರ್ಯತಯಲ್ಲಿದ್ದೇನೆ. ಫುಲ್ ಟೈಮ್ ಕೆಲಸ ಸೂಚಿಸಿ ಎಂದು ರೆಸ್ಯೂಮ್‌ ಕವರ್ ಲೆಟರ್‌ನಲ್ಲಿ ಬರೆದುಕೊಂಡಿದ್ದಾನೆ. 

ಬೆಂಗಳೂರಿನಲ್ಲಿ ಟೆಕ್ಕಿಗಳಿಗೆ ಕೆಲಸ ಸಿಗುತ್ತಿಲ್ಲವೇ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇಷ್ಟೇ ಅಲ್ಲ ಈ ರೀತಿ ಸ್ಯಾಲರಿ ಬೇಡ ಎಂದರೆ ನಮ್ಮ ಕತೆ ಎನು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೈಟೆಕ್ ಬೆಂಗಳೂರಿಗೆ ಸರಿಸಾಟಿ ಉಂಟೇ? ಚಪಾತಿ ರೇಟಿಂಗ್‌‌ಗೆ AI ಟೂಲ್ ಅಭಿವೃದ್ಧಿಪಡಿಸಿದ ಟೆಕ್ಕಿ
 

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?