ರಜಾದಿನದಲ್ಲಿರುವ ಸಹೋದ್ಯೋಗಿಗಳಿಗೆ ತೊಂದರೆ ನೀಡಿದರೆ, ಕಂಪನಿಯಿಂದ 1 ಲಕ್ಷ ರೂ ದಂಡ

By Gowthami K  |  First Published Dec 30, 2022, 4:52 PM IST

ಉದ್ಯೋಗಿಗಳಿಗೆ ರಜಾ ದಿನದಂದು ಕೆಲಸಕ್ಕೆ ಸಂಬಂಧಿಸಿದಂತೆ ಕರೆ ,ಈ ಮೇಲ್ ಅಥವಾ ಮೆಸೇಜ್ ಮಾಡುವ ಇತರ ಉದ್ಯೋಗಿಗಳಿಗೆ ಅಥವಾ ಹಿರಿಯ ಕಾರ್ಯನಿರ್ವಾಹರಿಗೆ ಭಾರತದ ಟೆಕ್ ಕಂಪೆನಿಯೊಂದು 1 ಲಕ್ಷ ದಂಡ ವಿಧಿಸಲು ತೀರ್ಮಾನಿಸಿದೆ.


ನವದೆಹಲಿ (ಡಿ.30): ಉದ್ಯೋಗಿಗೆ ವಿಶೇಷವಾಗಿ ಅವರು ರಜೆಯಲ್ಲಿರುವಾಗ ಅಗತ್ಯ ಕರೆಗಳು, ಸಂದೇಶಗಳು ಅಥವಾ ಇಮೇಲ್‌ಗಳನ್ನು ಸ್ವೀಕರಿಸುವುದು ಸಂಭವಿಸಬಹುದಾದ ಅತ್ಯಂತ ಕಿರಿಕಿರಿಗೊಳಿಸುವ ವಿಷಯಗಳಲ್ಲಿ ಒಂದಾಗಿದೆ.  ಇದು ಅನೇಕರ ರಜಾದಿನವನ್ನು ಹಾಳುಮಾಡಬಹುದು. ಈ ಮಹತ್ವದ ಸಮಸ್ಯೆಯನ್ನು ಪರಿಗಣಿಸಿದ ಭಾರತೀಯ ಕಂಪೆನಿಯೊಂದು ಅದರ ಸಿಬ್ಬಂದಿ  ರಜೆಯಲ್ಲಿದ್ದಾಗ ಈ ರೀತಿ ಆಗದಂತೆ ನಿರ್ಧಾರವೊಂದನ್ನು ಕೈಗೊಂಡಿದೆ.  ರಜಾದಿನಗಳಲ್ಲಿ ಉದ್ಯೋಗಿಗಳಿಗೆ ಯಾವುದೇ ಕೆಲಸಕ್ಕೆ ಸಂಬಂಧಿಸಿದ ಸಂವಹನವನ್ನು ಕಳುಹಿಸುವ ಉದ್ಯೋಗಿಗಳಿಗೆ ರೂ 1 ಲಕ್ಷ ದಂಡವನ್ನು ವಿಧಿಸಲು ನಿರ್ಧರಿಸಿದೆ.  ಎರಡನೇಯದಾಗಿ ತನ್ನ ಉದ್ಯೋಗಿಗಳಿಗಾಗಿ ಹೊಸ ನೀತಿಯನ್ನು ತಂದಿದೆ,  ಉದ್ಯೋಗಿಗಳು ರಜೆಯಲ್ಲಿರುವಾಗ ಅಥವಾ ರಜಾದಿನಗಳಲ್ಲಿ ಅವರನ್ನು ಸಂಪರ್ಕಿಸುವುದನ್ನು ನಿಷೇಧಿಸಿದೆ. ಉದ್ಯೋಗಿಗಳಿಗಾಗಿ ಹೊಸ ನಿಯಮ ತಂದ  ಭಾರತೀಯ ಟೆಕ್ ಕಂಪನಿಯೇ " ಡ್ರೀಮ್ 11". ಈ ಕಂಪನಿಯು ಇಮೇಲ್, ಸ್ಲಾಕ್ ಸಂದೇಶ ಅಥವಾ WhatApp ಚಾಟ್ ಕಳುಹಿಸಲು ಅದರ ನಿರ್ವಹಣೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆ.

ನಿರಂತರ ಕರೆಗಳು, ಸಂದೇಶಗಳು ಮತ್ತು ಮೇಲ್‌ಗಳಿಂದಾಗಿ ರಜಾದಿನಗಳಲ್ಲಿ ಉದ್ಯೋಗಿಗಳು ತಮ್ಮ ಉತ್ತಮ ಸಮಯವನ್ನು ಆನಂದಿಸಲು ಸಾಧ್ಯವಿಲ್ಲ. ಜೊತೆಗೆ ವಿಶ್ರಾಂತಿ ಪಡೆಯಲು ಕೂಡ ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ. ಇದನ್ನು ತಡೆಯಲು ಕಂಪನಿಯು UNPLUG ಎಂಬ ನೀತಿಯನ್ನು ತಂದಿದೆ. 

Latest Videos

undefined

YouTube Courses ಇದು ಯುಟ್ಯೂಬ್‌ನ ಹೊಸ ಹಣ ಗಳಿಕೆಯ ದಾರಿ, ಏನು ಲಾಭ?

ಈ ಹೊಸ ನೀತಿಯ ಅಡಿಯಲ್ಲಿ, ಕಂಪನಿಯು ಅನ್‌ಪ್ಲಗ್ ಮಾಡಲು ಬಯಸುವವರು ರಜಾದಿನಗಳಲ್ಲಿ ಅನ್‌ಪ್ಲಗ್ ಆಗಿರಬೇಕು ಎಂದು ಬಯಸುತ್ತದೆ ಎಂದು ಕಂಪೆನಿ ಹೇಳಿದೆ. ಕಂಪನಿಯು ಉದ್ಯೋಗಿಗಳು ತಮ್ಮ ಕುಟುಂಬ, ಸ್ನೇಹಿತರಿಗೆ ತಮ್ಮ ವೈಯಕ್ತಿಕ ಸಮಯವನ್ನು ವಿನಿಯೋಗಿಸಲು  ಬಯಸುತ್ತದೆ ಎಂದಿದೆ. ಯಾವುದೇ ಉದ್ಯೋಗಿ ಯಾವುದೇ ಕೆಲಸಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉದ್ಯೋಗಿಯನ್ನು ಸಂಪರ್ಕಿಸಿದರೆ, ಅವನು/ಅವಳು ರೂ 1 ಲಕ್ಷ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ. ಈ ನೀತಿಯು ಹಿರಿಯ ಉದ್ಯೋಗಿಗಳು ಸೇರಿದಂತೆ ಎಲ್ಲರಿಗೂ ಅನ್ವಯಿಸುತ್ತದೆ ಎಂದಿದೆ.

JOB INTERVIEW: ಮದುವೆ ಯಾವಾಗ, ಮಕ್ಕಳು ಯಾವಾಗ ಬೇಕು ಅಂತಾನೂ ಕೇಳಿದ ಅನುಭವ ನಿಮಗಾಗಿದ್ಯಾ?

ಡ್ರೀಮ್ 11 ಸಂಸ್ಥಾಪಕರಾದ ಹರ್ಷ್ ಜೈನ್ ಮತ್ತು ಭವಿತ್ ಸೇಠ್ ಅವರು "UNPLUG" ಅವಧಿಯಲ್ಲಿ ಇನ್ನೊಬ್ಬ ಉದ್ಯೋಗಿಯನ್ನು ಸಂಪರ್ಕಿಸುವ ಯಾವುದೇ ಉದ್ಯೋಗಿ ಸುಮಾರು ರೂ 1 ಲಕ್ಷ ದಂಡಕ್ಕೆ ಒಳಪಟ್ಟಿರುತ್ತದೆ ಎಂದು ವರದಿ ಮಾಡಿದ್ದಾರೆ. ಈ 1 ಲಕ್ಷ ದಂಡವು ಈ ಸ್ಪೋರ್ಟ್ಸ್ ಟೆಕ್ನಾಲಜಿ ಯುನಿಕಾರ್ನ್‌ನಲ್ಲಿರುವ ಪ್ರತಿಯೊಬ್ಬರೂ, ಉನ್ನತ ಕಾರ್ಯನಿರ್ವಾಹಕರಿಂದ ಹಿಡಿದು ಹೊಸ ನೇಮಕಗೊಂಡವರವರೆಗೆ, ಪ್ರತಿ ವರ್ಷ ಒಂದು ವಾರದವರೆಗೆ ಕಂಪನಿಯ ಸಿಸ್ಟಮ್‌ನಿಂದ ಸೈನ್ ಔಟ್ ಮಾಡಲು ಅನುಮತಿಸಲಾಗಿದೆ ಎಂದಿದ್ದಾರೆ.

click me!