ಕೆಲಸ ಬೇಕೆಂದು ಸಿಇಒಗೆ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ, ಒಂದೇ ಸೆಕೆಂಡ್‌ನಲ್ಲಿ ಏನಾಯ್ತು?

Published : Feb 27, 2025, 08:05 PM ISTUpdated : Feb 27, 2025, 08:07 PM IST
ಕೆಲಸ ಬೇಕೆಂದು ಸಿಇಒಗೆ ರೆಸ್ಯೂಮ್ ಕಳುಹಿಸಿದ ಅಭ್ಯರ್ಥಿ, ಒಂದೇ ಸೆಕೆಂಡ್‌ನಲ್ಲಿ ಏನಾಯ್ತು?

ಸಾರಾಂಶ

ಉದ್ಯೋಗ ಅಕಾಂಕ್ಷಿಯೊಬ್ಬ ಕೆಲಸಕ್ಕಾಗಿ ಪ್ರತಿಷ್ಠಿತ ಕಂಪನಿಯ ಸಿಇಒಗೆ ರೆಸ್ಯೂಮ್ ಕಳುಹಿಸಿದ್ದಾನೆ. ಈತನ ರೆಸ್ಯೂಮ್ ನೋಡಿದ ಸಿಇಒ ಪ್ರತಿಯಾಗಿ ಮಾಡಿದ್ದೇನು? 

ಉದ್ಯೋಗಕ್ಕಾಗಿ ಪ್ರತಿಷ್ಠಿತ ಕಂಪನಿಗಳಿಗೆ ರೆಸ್ಯೂಮ್ ಕಳುಹಿಸುವುದು ಸಾಮಾನ್ಯ. ವಿದ್ಯಾರ್ಥಹತೆ, ಅನುಭವ ಸೇರಿದಂತೆ ಹಲವು ಕಾರಣಗಳಿಂದ ಸೂಕ್ತ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗಲು ಇಮೇಲ್ ಅಥವಾ ಕರೆ ಮೂಲಕ ತಿಳಿಸಲಾಗುತ್ತದೆ. ನೇಮಕಾತಿ ಪ್ರಕ್ರಿಯೆಗಳನ್ನು ಆಯಾ ಕಂಪನಿಯಗಳ ಮಾನವ ಸಂಪನ್ಮೂಲ ಅಧಿಕಾರಿ(ಹೆಚ್ಆರ್ ) ನಿರ್ವಹಿಸುತ್ತಾರೆ. ಆದರೆ ಇಲ್ಲೊಬ್ಬ ಉದ್ಯೋಗಕ್ಕಾಗಿ ನೇರವಾಗಿ ಕಂಪನಿಯ ಸಿಇಒಗೆ ಇಮೇಲ್ ಮೂಲಕ ತನ್ನ ರೆಸ್ಯೂಮ್ ಕಳುಹಿಸಿದ್ದಾನೆ.  ರೆಸ್ಯೂಮ್ ನೋಡಿದ ಸಿಇಒ ಒಂದೇ ಸೆಕೆಂಡ್‌ನಲ್ಲಿ ರಿಜೆಕ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಇದಕ್ಕೆ ಕಾರಣವನ್ನೂ ನೀಡಿದ್ದಾರೆ.

ಅಭ್ಯರ್ಥಿ ಈ ಕುರಿತು ರೆಡ್ಡಿಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಕಂಪನಿಯಲ್ಲಿ ಕನ್ಸಲ್ಟೆಂಟ್ ಹುದ್ದೆಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಕಂಪನಿಯಲ್ಲಿ ಎರಡು ವಿಭಾಗದಲ್ಲಿ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿ ನೀಡಲಾಗಿತ್ತು. ಸ್ನಾತಕೋತ್ತರ ಪದವಿ ಪಡೆದವರಿಗೆ ಅಸೋಸಿಯೇಟ್ ಹುದ್ದೆ, ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಕನ್ಸಲ್ಟೆಂಟ್ ಹುದ್ದೆಗೆ ಖಾಲಿ ಇತ್ತು. ಈತ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಕಾರಣ ಕನ್ಸಲ್ಟೆಂಟ್ ಹುದ್ದಗೆ ಅರ್ಜಿ ಸಲ್ಲಿಸಿದ್ದ.

ಇನ್ಫೋಸಿಸ್ ಅಮಾನತು ಉದ್ಯೋಗಿಗಳಿಂದ ಪ್ರಧಾನಿ ಕಚೇರಿಗೆ ಮನವಿ, ಐಟಿ ಕಂಪನಿಗೆ 2ನೇ ನೋಟಿಸ್

ಹೆಚ್ಆರ್‌ಗೆ ರೆಸ್ಯೂಮ್ ಕಳುಹಿಸಲು ಈತ ಮನಸ್ಸು ಮಾಡಿಲ್ಲ. ನೇರವಾಗಿ ಕಂಪನಿಯ ಸಿಇಒಗೆ ರೆಸ್ಯೂಮ್ ಜೊತೆಗೆ ಕವರ್ ಲೆಟರ್ ಕೂಡ ಕಳುಹಿಸಿದ್ದ. ಕೆಲವೇ ಕ್ಷಣಗಳಲ್ಲಿ ಈತನಿಗೆ ಕಂಪನಿಯ ಸಿಇಒನಿಂದ ರಿಪ್ಲೈ ಬಂದಿದೆ. ಆದರೆ ಸಿಇಒ ಪ್ರತಿಕ್ರಿಯೆಗೆ ಅಭ್ಯರ್ಥಿ ದಂಗಾಗಿದ್ದಾನೆ. ಸಿಇಒ ರಿಪ್ಲೈ ಮಾಡಿದ ಇಮೇಲ್‌ನಲ್ಲಿ, ಅಭ್ಯರ್ಥಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಮೊದಲನೆಯದಾಗಿ ನೀನು ಕನಿಷ್ಠ ರೀಸರ್ಚ್ ಮಾಡುವ ಗೋಜಿಗೂ ಹೋಗಿಲ್ಲ ಅನ್ನೋದು ಈ ಅರ್ಜಿ ನೋಡಿದರೆ ತಿಳಿಯುತ್ತಿದೆ. ಎರಡನೇಯದಾಗಿ ನೀನು ಅಸಂಬದ್ಧ ಅರ್ಜಿ ಸಲ್ಲಿಸಿ ನನ್ನ ಸಮಯ ವ್ಯರ್ಥ ಮಾಡಿದ್ದಿ. ಇದು ಸ್ಪಷ್ಟವಾಗಿ ಹೇಳುತ್ತಿದೆ. ಈ ಕಂಪನಿಯಲ್ಲಿ ಉದ್ಯೋಗಕ್ಕೆ ನೀನು ಸೂಕ್ತ ಅಭ್ಯರ್ಥಿ ಅಲ್ಲ ಎಂದು ಇಮೇಲ್ ಮೂಲಕ ಸಿಇಒ ತಿಳಿಸಿ್ದ್ದಾರೆ.

 

 

ಸಿಇಒ ಉತ್ತರ ಹಂಚಿಕೊಂಡ ಅಭ್ಯರ್ಥಿ ನಾನು ಕಂಡ ಅತ್ಯಂತ ಖಾರವಾದ, ಅಹಂ ಪ್ರತಿಕ್ರಿಯೆ ಇದು ಎಂದಿದ್ದಾನೆ. ಇಷ್ಟೇ ಅಲ್ಲ ಈ ಕಂಪನಿಯಲ್ಲಿ ಹೆಚ್ಆರ್ ವಿಭಾಗ ಇರಲಿಲ್ಲ. ಹೀಗಾಗಿ ಸಿಇಒಗೆ ಅರ್ಜಿ ಹಾಕಿರುವುದಾಗಿ ಸ್ಪಷ್ಟಪಡಿಸಿದ್ದಾನೆ. ನನ್ನ ಅರ್ಜಿ ತಿರಸ್ಕೃತಗೊಂಡಿರುವುದನ್ನು ನಾನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಮೊದಲೇ ರಿಜೆಕ್ಟ್ ಎಂದು ಹೇಳಿರುವುದು ನನ್ನ ಸಮಯವನ್ನು ವ್ಯರ್ಥ ಮಾಡಿಲ್ಲ ಎಂದು ಅಭ್ಯರ್ಥಿ ತಿರುಗೇಟು ನೀಡಿದ್ದಾನೆ.

ಸಿಇಒ ಪ್ರತಿಕ್ರಿಯೆಗ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಹಲವರು ಅಭ್ಯರ್ಥಿ ಪರ ಬ್ಯಾಟ್ ಬೀಸಿದ್ದಾರೆ. ಈ ರೀತಿ ಎಲ್ಲಾ ಸಿಇಒಗಳು ಇಮೇಲ್ ಮಾಡುವುದಿಲ್ಲ. ಸೌಜನ್ಯದಿಂದ ವರ್ತಿಸುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. 

ಕೆಲಸದ ವೇಳೆ ಸಿಗರೇಟ್ ಬ್ರೇಕ್ ತಗೊಂಡ ಉದ್ಯೋಗಿ: ಮನೆಗೆ ಕಳುಹಿಸಿದ ಕಂಪನಿ ವಿರುದ್ಧ ನೆಟ್ಟಿಗರ ಆಕ್ರೋಶ

PREV
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?