ಕೆಲ್ಸಕ್ಕಾಗಿ ಅಪ್ಲೈ ಮಾಡಿದ ಸಿವಿಯಲ್ಲಿ ಸ್ಪರ್ಮ್ ಕೌಂಟ್, ದಂಗಾದ ಕಂಪನಿ ಸಿಇಒ!

By Suvarna NewsFirst Published Nov 4, 2023, 12:54 PM IST
Highlights

ಕೆಲಸಕ್ಕೆ ಅರ್ಜಿ ಸಲ್ಲಿಸುವ ಜನರು ಸಿವಿ ಸಿದ್ದಪಡಿಸ್ತಾರೆ. ಆಕರ್ಷಕವಾಗಿರಲಿ ಅಂತಾ ಒಂದಿಷ್ಟು ಮಾಹಿತಿ ಹಾಕ್ತಾರೆ. ಆದ್ರೆ ಈತ ಅತಿಯಾಗೆ ಮಾಹಿತಿ ಹಾಕಿದ್ದಾನೆ. ವೃತ್ತಿ ಜೊತೆ ಗುಪ್ತ ವಿಷ್ಯ ಬರೆದು ಸುದ್ದಿಯಾಗಿದ್ದಾನೆ. 
 

ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ಸಿವಿ ಬಹಳ ಮುಖ್ಯವಾಗುತ್ತದೆ. ನಾವು ಸಿವಿಯಲ್ಲಿ ಏನು ಬರೆದಿದ್ದೇವೆ ಎಂಬುದನ್ನು ಮೊದಲು ಕಂಪನಿ ನೋಡುತ್ತದೆ. ನಮ್ಮ ಸಿವಿ ಅವರನ್ನು ಆಕರ್ಷಿಸಬೇಕು. ನಂತ್ರವೇ ಮುಂದಿನ ಪ್ರೊಸೆಸ್ ನಡೆಯುತ್ತದೆ. ಸಿವಿ ಓದಿದ ಕಂಪನಿ ಸಿನಿಯರ್ಸ್, ನಾವೇನು ವಿದ್ಯಾರ್ಹತೆ ಪಡೆದಿದ್ದೇವೆ, ನಮ್ಮ ಉದ್ಯೋಗದ ಅನುಭವ ಎಷ್ಟು ಎಂಬುದನ್ನು ತಿಳಿಯುತ್ತಾರೆ. ಯಾವಾಗ್ಲೂ ಸಿವಿ ಆಕರ್ಷಕವಾಗಿರಬೇಕು. ಕೆಲವರು ಅತ್ಯುತ್ಸಾಹದಲ್ಲಿ ಸಿವಿ ಬರೆಯುತ್ತಾರೆ. ನೋಡಿದ ತಕ್ಷಣ ಕಂಪನಿ ಅದಕ್ಕೆ ಆಕರ್ಷಿತವಾಗಿ ಸಂದರ್ಶನವಿಲ್ಲದೆ ಕೆಲಸಕ್ಕೆ ಪಡೆಯಬೇಕು ಎಂದು ಭಾವಿಸ್ತಾರೆ. ಹೀಗೆ ಅತೀ ಉತ್ಸಾಹದಲ್ಲಿ ಬರೆದ ವ್ಯಕ್ತಿಯೊಬ್ಬರ ಸಿವಿ ಈಗ ವೈರಲ್ ಆಗಿದೆ. 

ಅಮೆರಿಕ (America) ದ ಹೆಲ್ತ್‌ಕೇರ್ ಕಂಪನಿಯೊಂದರ ಸಿಇಒ (Ceo) ಇತ್ತೀಚೆಗೆ ಒಬ್ಬ ವ್ಯಕ್ತಿಯ ಸಿವಿ ಓದಿ ದಂಗಾಗಿದ್ದಾರೆ. ವ್ಯಕ್ತಿ ವೃತ್ತಿಪರ ಜೀವನವನ್ನು ಮಾತ್ರವಲ್ಲ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ಕೂಡ ಬರೆದಿದ್ದಾನೆ. ಇದನ್ನು ಓದಿದ ನಂತ್ರ ಸಿಇಓ ನಾಚಿಕೊಳ್ತಾರೆ. 

ವ್ಯಕ್ತಿಗೆ ಪ್ರಜ್ಞೆಯಿರುವಾಗ್ಲೇ ಮೆದುಳಿನ ಸರ್ಜರಿ; ಪಿಯಾನೋ ನುಡಿಸಿ, ಹನುಮಾನ್ ಚಾಲೀಸಾ ಪಠಿಸಿದ ಯುವಕ!

ರೋಶನ್ ಪಟೇಲ್ ಹೆಸರಿನ ಟ್ವಿಟರ್ (Twitter)  ಖಾತೆಯಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ. ರೋಶನ್ ಪಟೇಲ್ ನ್ಯೂಯಾರ್ಕ್ ಮೂಲದ  ವಾಲ್‌ನಟ್  ಹೆಸರಿನ ಹೆಲ್ತ್‌ಕೇರ್ ಕಂಪನಿಯ ಸಿಇಒ. ಈಗಷ್ಟೆ ನನಗೆ ಈ ಸಿವಿ ಸಿಕ್ಕಿದೆ. ಸಿವಿಯಲ್ಲಿ ಜನರು ತಮ್ಮ ವೃತ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಬರೆಯುತ್ತಾರೆ. ನೌಕರಿ ಸುಲಭವಾಗಿ ಸಿಗಲಿ ಎನ್ನುವ ಕಾರಣಕ್ಕೆ ತಮ್ಮ ಅನುಭವದ ಮಾಹಿತಿ ನೀಡ್ತಾರೆ. ಆದ್ರೆ ಈ ಸಿವಿ ತುಂಬಾ ಭಿನ್ನವಾಗಿದೆ ಎಂದು ರೋಷನ್ ಬರೆದಿದ್ದಾರೆ. 

ಅಷ್ಟಕ್ಕೂ ಸಿವಿಯಲ್ಲಿ ಏನಿದೆ? : ವ್ಯಕ್ತಿ ಸಿವಿಯಲ್ಲಿ ತನ್ನ ವೀರ್ಣದ ಬಗ್ಗೆ ಬರೆದಿದ್ದಾನೆ. ಹೌದು, ನೌಕರಿ ಸಿವಿಯಲ್ಲಿ ವ್ಯಕ್ತಿ ತನ್ನ ವೀರ್ಯಾಣುಗಳ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ನೀಡಿದ್ದಾನೆ. ಸರಾಸರಿ ವೀರ್ಯಾಣು ಸಂಖ್ಯೆ 800 ಮಿಲಿಯನ್ ಎಂದು ಬರೆದಿದ್ದಾನೆ. ಸಿವಿಯ ಮೇಲಿನ ಭಾಗದಲ್ಲಿ ಕೆಲಸ ಬಗ್ಗೆ ಬರೆದಿರುವ ವ್ಯಕ್ತಿ ೧೧ ಜನರ ತಂಡವನ್ನು ನಾನು ನಿರ್ವಹಿಸುತ್ತಿದ್ದೇನೆ ಎಂದು ಸಿವಿಯಲ್ಲಿದೆ. ನಂತ್ರ ಬೆಲೆ ಹಾಗೂ ಪ್ರಚಾರ ಕ್ಷೇತ್ರದಲ್ಲಿ ಕೆಲಸ ಮಾಡ್ತಿರೋ ಮಾಹಿತಿ ಇದೆ. ಸಿವಿಯಲ್ಲಿ ಇದೆಲ್ಲ ಇರಬೇಕಾಗಿದ್ದು. ಆದ್ರೆ ವೀರ್ಯಗಳ ಬಗ್ಗೆ ಬರೆಯುವ ಅಗತ್ಯವಿರಲಿಲ್ಲ. ಇದು ಮುಜುಗರತರಿಸುವಂತಿದೆ. 

ಒಳಗೆ ಜೀವಂತ ಹುಳು ತುಂಬಿಸಿ ಮಾಡಿದ ಮೊಮೊಸ್ : ವಾಂತಿ ಬರಿಸುವ ವೀಡಿಯೋ ಸಖತ್ ವೈರಲ್‌

ಟ್ವಿಟರ್ ನಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಈವರೆಗೆ ೨೩ ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. ಜನರು ತಮ್ಮದೇ ರೀತಿಯಲ್ಲಿ ಇದಕ್ಕೆ ಕಮೆಂಟ್ ಕೂಡ ಮಾಡಿದ್ದಾರೆ. ಈ ವ್ಯಕ್ತಿ ಯಾವ ರೀತಿ ಕೆಲಸ ಹುಡುಕ್ತಿದ್ದಾರೆ ಎಂಬುದನ್ನು ಮೊದಲು ತಿಳಿಯಬೇಕು ಎಂದು ಒಬ್ಬರು ಬರೆದಿದ್ದಾರೆ. ಕೆಲ ಕಂಪನಿಗಳು ಬ್ಲಡ್ ಗ್ರೂಪ್ ಮತ್ತ ಪ್ಲೇಟ್ಲೆಟ್ ಕೌಂಟ್ ಬಗ್ಗೆ ಕೇಳುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಇದು ನೆರವಿಗೆ ಬರುತ್ತದೆ. ಆದ್ರೆ ವೀರ್ಯಗಳ ಸಂಖೆ ಅಚ್ಚರಿಹುಟ್ಟಿಸಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಾನು ಈ ವ್ಯಕ್ತಿ ಪರ್ಸನಾಲಿಟಿ ಗೆಸ್ ಮಾಡ್ಬಲ್ಲೆ ಎಂದು ಇನ್ನೊಬ್ಬಳು ಬರೆದಿದ್ದಾಳೆ. ಈತ ಕಲ್ಚರಲ್ ಫಿಟ್ ಅಲ್ಲ ಅಂತಾ ಒಬ್ಬರು ಬರೆದ್ರೆ ಮತ್ತೊಬ್ಬರು ಇದು ಬರಿ ಸಿವಿ. ಸಂದರ್ಶನ ಮಾಡಿದಾಗ ವಿಷ್ಯ ಗೊತ್ತಾಗುತ್ತೆ ಎಂದಿದ್ದಾರೆ.  ಕೆಲ ಕಂಪನಿ ಮೆಡಿಕಲ್ ರಿಪೋರ್ಟ್ ಕೇಳೋದ್ರಿಂದ ಈತ ಮೊದಲೇ ಎಲ್ಲವನ್ನೂ ನೀಡಿದ್ದಾನೆ. ಇದ್ರಲ್ಲಿ ದೋಷವಿಲ್ಲ ಎಂದು ವ್ಯಕ್ತಿಯ ಸಿವಿಯನ್ನು ಒಬ್ಬರು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ವೀರ್ಯದ ಕೌಂಟ್ ಬಗ್ಗೆ ಗಮನ ನೀಡಿದ್ದು, ಅದು ತುಂಬಾ ಕಡಿಮೆ ಇದೆ ಎಂದು ಕಮೆಂಟ್ ಮಾಡಿದ್ದಾರೆ. 
 

just got this resume ??? pic.twitter.com/iVQFScQzoF

— Roshan Patel (@roshanpateI)
click me!