ವಾರಕ್ಕೆ 70 ಗಂಟೆ ಕೆಲಸ ಚರ್ಚೆ ನಡುವೆ ಇನ್ಫೋಸಿಸ್ ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್ ಅಂತ್ಯ!

By Suvarna News  |  First Published Nov 1, 2023, 4:52 PM IST

ವಾರಕ್ಕೆ 70ಗಂಟೆ ಕೆಲಸ ಮಾಡಬೇಕು ಅನ್ನೋ ನಾರಾಯಣಮೂರ್ತಿ ಹೇಳಿಕೆ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಇನ್ಪೋಸಿಸ್ ತನ್ನ ಕಳಹಂತದ ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿದೆ. ಕಚೇರಿಯಿಂದ ಕೆಲಸ ಮಾಡಲು ಸೂಚಿಸಿದೆ. 


ಬೆಂಗಳೂರು(ನ.01) ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಇತ್ತೀಚೆಗೆ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅನ್ನೋ ಸಲಹೆ ನೀಡಿದ್ದರು. ಇದು ಭಾರಿ ಚರ್ಚೆಯಾಗುತ್ತಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಇನ್ಪೋಸಿಸ್ ಕಂಪನಿ, ತನ್ನಕಳ ಹಂತದ ಉದ್ಯೋಗಿಗಳಿಗೆ ನೀಡಿದ್ದ ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿದೆ. ಎಲ್ಲಾ ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡುವಂತೆ ಸೂಚಿಸಿದೆ.

ಮಿಡ್ ಲೆವೆಲ್ ಮ್ಯಾನೇಜರ್ಸ್, ಪ್ರಾಜೆಕ್ಟ್ ಲೀಡರ್ಸ್, ಎಂಟ್ರಿ ಲೆವೆಲ್ ಸ್ಟಾಫ್ ಸೇರಿದಂತೆ ಬ್ರಾಂಡ್ 5 ಹಾಗೂ 6 ಕೆಟಗರಿಯ ಉದ್ಯೋಗಿಗಳ ಮನೆಯಿಂದ ಕೆಲಸ ಮಾಡುವ ಅವಕಾಶವನ್ನು ಇನ್ಫೋಸಿಸ್ ಅಂತ್ಯಗೊಳಿಸಿದೆ. ಎಲ್ಲರೂ ಕಚೇರಿಗೆ ಆಗಮಿಸಿ ಕೆಲಸ ಮಾಡುವಂತೆ ಸೂಚಿಸಿದೆ. ಆದರೆ ಕೆಳ ಹಂತದ ಉದ್ಯೋಗಳಿಗೆ ಸಂಪೂರ್ಣ ಕಚೇರಿಯಿಂದ ಕೆಲಸ ಮಾಡಲು ಇನ್ಫೋಸಿಸ್ ಹೇಳಿಲ್ಲ. ಹೈಬ್ರಿಡ್ ಮಾಡೆಲ್ ಪರಿಚಯಿಸಿದೆ. ತಿಂಗಳಲ್ಲಿ 10 ದಿನ ಕಚೇರಿಯಿಂದ ಕೆಲಸ ಮಾಡುವಂತೆ ಸೂಚಿಸಿದೆ.

Latest Videos

undefined

 

ಬೆಂಗಳೂರಿನ ಸಂಸ್ಥೆಗೆ 225 ಕೋಟಿ ರೂ ದಾನ ಮಾಡಿದ ಸೇನಾಪತಿ, ಇವರ ಒಟ್ಟು ಆದಾಯವೆಷ್ಟು?

ನವೆಂಬರ್ 20 ರಿಂದ ಹೊಸ ನಿಯಮ ಜಾರಿಯಾಗುತ್ತಿದೆ ಎಂದು ಇನ್ಫೋಸಿಸ್ ಹೇಳಿದೆ. ಹೀಗಾಗಿ ನವೆಂಬರ್ 20 ರಂದಿಂದ ಕೆಳಹಂತದ ಉದ್ಯೋಗಿಗಳ ಕೇಚರಿಯಿಂದ ಕೆಲಸ ಆರಂಭಗೊಳ್ಳಲಿದೆ ಎಂದಿದೆ. ಭಾರತದ ಬಹುತೇಕ ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸಿದೆ. ಟಿಸಿಎಸ್, ವಿಪ್ರೋ ಸೇರಿದಂತೆ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಾಪಸ್ ಕಚೇರಿಗೆ ಕರೆಸಿಕೊಂಡಿದೆ. 

ಕೋವಿಡ್ ಸಂದರ್ಭದಲ್ಲಿ ಇನ್ಫೋಸಿಸ್ ಸೇರಿದಂತೆ ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡಿತ್ತು. ಕೋವಿಡ್ ಬಳಿಕ ಹಂತ ಹಂತವಾಗಿ ಉದ್ಯೋಗಿಗಳನ್ನು ವಾಪಸ್ ಕಚೇರಿಗೆ ಕರೆಸಿಕೊಂಡಿತ್ತು. ಆದರೆ ಇನ್ಪೋಸಿಸ್, ಟಿಸಿಎಸ್ ಸೇರಿದಂತ ಕೆಲ ಕಂಪನಿಗಳು ವರ್ಕ್ ಫ್ರಮ್ ವಿಸ್ತರಣೆ ಮಾಡಿತ್ತು. ಈ ವರ್ಷದಿಂದ ಎಲ್ಲಾ ಕಂಪನಿಗಳು ಉದ್ಯೋಗಿಗಳ ನೀಡಿದ್ದ ವರ್ಕ್ ಫ್ರಮ್ ಹೋಮ್ ಅಂತ್ಯಗೊಳಿಸುತ್ತಿದೆ.

ಅವರು ವಾರಕ್ಕೆ 80 - 90 ಗಂಟೆ ವರ್ಕ್‌ ಮಾಡ್ತಾರೆ: 70 ಗಂಟೆ ಕೆಲಸ ಸೂತ್ರದ ಬಗ್ಗೆ ಪತಿ ಹೇಳಿಕೆಗೆ ಸುಧಾಮೂರ್ತಿ ಪ್ರತಿಕ್ರಿಯೆ

 ಟಿಸಿಎಸ್ ಕಂಪನಿ ಅ.1ರಿಂದ ಅನ್ವಯ ಆಗುವಂತೆ ತನ್ನ ಉದ್ಯೋಗಿಗಳು ವಾರದಲ್ಲಿ 5 ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ಇ-ಮೇಲ್‌ ಮೂಲಕ ಸೂಚಿಸಿತ್ತು. ಪ್ರಸ್ತುತ ಹೈಬ್ರಿಡ್‌ ಮಾದರಿಯಲ್ಲಿ ಉದ್ಯೋಗಿಗಳು ವಾರದಲ್ಲಿ ಕನಿಷ್ಠ 3 ದಿನ ಕಚೇರಿಗೆ ಬರಬೇಕೆಂಬ ನಿಯಮವಿತ್ತು. ಅದನ್ನು ಬದಲಿಸಿ 5 ದಿನಕ್ಕೆ ವಿಸ್ತರಿಸಿದೆ. ಅಂದಾಜು 5 ಲಕ್ಷದಷ್ಟು ಅಗಾಧ ಮಾನವ ಸಂಪನ್ಮೂಲವನ್ನು ಹೊಂದಿರುವ ಬೃಹತ್‌ ಐಟಿ ಕಂಪನಿ ಟಿಸಿಎಸ್‌ ಕೋವಿಡ್‌ ಅಲೆ ಬಂದಾಗ 2025ರೊಳಗೆ ಕನಿಷ್ಠ ಶೇ.25ರಷ್ಟು ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆತರಬೇಕೆಂಬ ಯೋಜನೆ ಹಾಕಿಕೊಂಡಿತ್ತು.

click me!