ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳ ಟಾಪ್‌-10 ಲಿಸ್ಟ್‌, ನಿಮ್ಮ ಕಂಪನಿ ಇದ್ಯಾ ನೋಡಿ!

By Santosh NaikFirst Published Apr 20, 2023, 3:19 PM IST
Highlights

ಅಗ್ರ 25 ಕಂಪನಿಗಳ ಪೈಕಿ ಬಹುತೇಕ ಕಂಪನಿಗಳು ಫೈನಾನ್ಶಿಯಲ್‌ ಸರ್ವೀಸ್‌, ಬ್ಯಾಂಕಿಂಗ್ ಹಾಗೂ ಫಿನ್‌ಟಕ್‌ ಆಗಿವೆ. ಮ್ಯಾಕ್‌ಕ್ವೆರಿ ಗ್ರೂಪ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಮಾಸ್ಟರ್‌ಕಾರ್ಡ್‌ ಹಾಗೂ ಯುಬಿ ಕೂಡ ಲಿಂಕ್ಡಿನ್‌ನ ಭಾರತದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
 

ಬೆಂಗಳೂರು (ಏ.20): ವೃತ್ತಿಪರರ ಸೋಶಿಯಲ್‌ ಮೀಡಿಯಾ ವೇದಿಕೆ ಲಿಂಕ್ಡಿನ್‌ ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮ 10 ಕಂಪನಿಗಳ ಲಿಸ್ಟ್‌ ಪ್ರಕಟ ಮಾಡಿದೆ. ಇದರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ (ಟಿಸಿಎಸ್‌) ಅತ್ಯುತ್ತಮ ಕಂಪನಿ ಎಂದು ಲಿಂಕ್ಡಿನ್‌ ಬಳಕೆದಾರರು ವೋಟ್‌ ಮಾಡಿದ್ದರೆ, ಅಮೇಜಾನ್‌ ಹಾಗೂ ಮಾರ್ಗನ್‌ ಸ್ಟ್ಯಾನ್ಲೀ ಕಂಪನಿಗಳು ನಂತರದ ಸ್ಥಾನಗಳಲ್ಲಿವೆ. ಹೆಚ್ಚಾಗಿ ವೃತ್ತಿಪರರೇ ಇರುವ ಸೋಶಿಯಲ್‌ ಮೀಡಿಯಾ ವೇದಿಕೆಯು ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮವಾದ 25 ಸ್ಥಳಗಳನ್ನು ಪಟ್ಟಿಮಾಡಿದೆ. ಪ್ಲಾಟ್‌ಫಾರ್ಮ್ ತನ್ನ ಪ್ಲಾಟ್‌ಫಾರ್ಮ್ ಡೇಟಾವನ್ನು ಎಂಟು ವಿಭಾಗಗಳ ಆಧಾರದ ಮೇಲೆ ಕಂಪನಿಗಳಿಗೆ ಶ್ರೇಯಾಂಕವನ್ನು ನೀಡಿದೆ. ವೃತ್ತಿಜೀವನದ ಪ್ರಗತಿಗೆ ಕಾರಣವಾಗುವ ಸಾಮರ್ಥ್ಯ, ಕೌಶಲ್ಯಗಳ ಬೆಳವಣಿಗೆ, ಕಂಪನಿಯ ಸ್ಥಿರತೆ, ಬಾಹ್ಯ ಅವಕಾಶ, ಕಂಪನಿಯ ಬಾಂಧವ್ಯ, ಲಿಂಗ ವೈವಿಧ್ಯತೆ, ಶೈಕ್ಷಣಿಕ ಹಿನ್ನೆಲೆ ಮತ್ತು ದೇಶದಲ್ಲಿ ಉದ್ಯೋಗಿಗಳ ಉಪಸ್ಥಿತಿ ಆಧಾರದ ಮೇಲೆ ಈ ಲಿಸ್ಟ್‌ಅನ್ನು ಪ್ರಕಟಿಸಲಾಗಿದೆ. ಈ ವರ್ಷದ ಪಟ್ಟಿಯಲ್ಲಿ ಹಣಕಾಸು ಸೇವೆಗಳು, ತೈಲ ಮತ್ತು ಅನಿಲ, ವೃತ್ತಿಪರ ಸೇವೆಗಳು, ಮ್ಯಾನುಫ್ಯಾಕ್ಟರಿಂಗ್‌ ಮತ್ತು ಗೇಮಿಂಗ್‌ನಾದ್ಯಂತದ ಕಂಪನಿಗಳು ಕಳೆದ ವರ್ಷ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದ್ದವು. ಈ ಬಾರಿ ಹೆಚ್ಚಿನ ಟೆಕ್ ಕಂಪನಿಗಳು ಈ ಸ್ಥಾನ ಪಡೆದುಕೊಂಡಿದೆ ಎಂದು ಲಿಂಕ್ಡ್‌ಇನ್ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನು 25 ಕಂಪನಿಗಳ ಅಗ್ರ 10ರ ಲಿಸ್ಟ್‌ನಲ್ಲಿ ಹೆಚ್ಚಿನವು ಫೈನಾನ್ಶಿಯಲ್‌ ಸರ್ವೀಸ್‌, ಬ್ಯಾಂಕಿಂಗ್ ಹಾಗೂ ಫಿನ್‌ಟೆಕ್‌ ಕಂಪನಿಗಳಾಗಿವೆ. ಮ್ಯಾಕ್‌ಕ್ವೆರಿ ಗ್ರೂಪ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಮಾಸ್ಟರ್‌ಕಾರ್ಡ್‌ ಹಾಗೂ ಯುಬಿ ಕೂಡ ಸ್ಥಾನ ಪಡೆದಿದೆ. ಮ್ಯಾಕ್‌ಕ್ವೆರಿ 5ನೇ ಸ್ಥಾನದಲ್ಲಿದ್ದರೆ, ಎಚ್‌ಡಿಎಫ್‌ಸಿ ಬ್ಯಾಂಕ್‌ 11ನೇ ಸ್ಥಾನದಲ್ಲಿದ್ದರೆ, ಮಾಸ್ಟರ್‌ಕಾರ್ಡ್‌ 13 ಹಾಗೂ ಯುಬಿ 14ನೇ ಸ್ಥಾನದಲ್ಲಿದೆ.  ಇದೇ ಮೊದಲ ಬಾರಿಗೆ, ಇ-ಸ್ಪೋರ್ಟ್ಸ್ ಮತ್ತು ಗೇಮಿಂಗ್‌ನಿಂದ ಡ್ರೀಮ್‌ 11 ಮತ್ತು ಗೇಮ್ಸ್‌ 24x7 ನಂತಹ ಕಂಪನಿಗಳು ಪಟ್ಟಿಗೆ ಬಂದಿವೆ. ಲಿಂಕ್ಡ್‌ಇನ್‌ನ ವರ್ಷದ ಟಾಪ್ ಸ್ಟಾರ್ಟ್‌ಅಪ್ ಪಟ್ಟಿಯಲ್ಲಿದ್ದ ಝೆಪ್ಟೋ, ಈ ಪಟ್ಟಿಯಲ್ಲಿ 16 ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ತಂತ್ರಜ್ಞಾನ ವಲಯದ (best companies in india to work) ಕಂಪನಿಗಳು ಅಭ್ಯರ್ಥಿಗಳಲ್ಲಿ ಹುಡುಕುತ್ತಿರುವ ಕೌಶಲ್ಯಗಳೆಂದರೆ ಕೃತಕ ಬುದ್ಧಿಮತ್ತೆ (AI), ರೊಬೊಟಿಕ್ಸ್, ಎಲೆಕ್ಟ್ರಾನಿಕ್ಸ್, ಸಾಫ್ಟ್‌ವೇರ್ ಪರೀಕ್ಷೆ ಮತ್ತು ಕಂಪ್ಯೂಟರ್ ಭದ್ರತೆ ಎಂದು ವರದಿಯು ಬಹಿರಂಗಪಡಿಸಿದೆ. ಹಣಕಾಸು ವಲಯದಲ್ಲಿ, ಕಂಪನಿಗಳು ವಾಣಿಜ್ಯ ಬ್ಯಾಂಕಿಂಗ್, ಹಣಕಾಸು ಲೆಕ್ಕಪತ್ರ ನಿರ್ವಹಣೆ ಮತ್ತು ಬೆಳವಣಿಗೆಯ ತಂತ್ರಗಳಲ್ಲಿ ಕೌಶಲ್ಯ ಹೊಂದಿರುವ ಉದ್ಯೋಗಿಗಳನ್ನು ಹುಡುಕುತ್ತಿವೆ. ಹೊಸ (tcs is the best place to work in india) ಹೊಸ ಕಂಪನಿಗಳು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. 25 ಕಂಪನಿಗಳ (linkedin best companies to work for) ಪಟ್ಟಿಯಲ್ಲಿ 17 ಕಂಪನಿಗಳು ಇದೇ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಇದು ಭಾರತದ ವಾಣಿಜ್ಯ ವ್ಯವಸ್ಥೆ ಎಷ್ಟು ಬಲಿಷ್ಠವಾಗಿದೆ ಅನ್ನೋದನ್ನು ಇದು ತೋರಿಸಿದೆ ಎಂದು ಲಿಂಕ್ಡಿನ್‌ ಹೇಳಿದೆ.

ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ 6 ತಿಂಗಳಲ್ಲೇ ಉದ್ಯೋಗದಿಂದ ವಜಾಗೊಂಡ ಐಐಟಿ ಪದವೀಧರ!

ಉನ್ನತ ಕಂಪನಿಗಳು ಹೂಡಿಕೆ ಮಾಡುತ್ತಿರುವ ಕೆಲವು ದೊಡ್ಡ ಉದ್ಯೋಗ ಕಾರ್ಯಗಳಲ್ಲಿ ಎಂಜಿನಿಯರಿಂಗ್, ಸಲಹಾ, ಉತ್ಪನ್ನ ನಿರ್ವಹಣೆ, ವ್ಯಾಪಾರ ಅಭಿವೃದ್ಧಿ, ಮಾರಾಟ, ವಿನ್ಯಾಸ, ಹಣಕಾಸು ಮತ್ತು ಕಾರ್ಯಾಚರಣೆಗಳು ಸೇರಿವೆ ಎಂದು ವರದಿ ಹೇಳಿದೆ. ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ನೋಡುತ್ತಿರುವ ಪ್ರಮುಖ ಸ್ಥಳಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ, ನಂತರ ಮುಂಬೈ, ಹೈದರಾಬಾದ್, ದೆಹಲಿ ಮತ್ತು ಪುಣೆ ನಂತರದ ಸ್ಥಾನದಲ್ಲಿದೆ.

ರೆಸ್ಯೂಮ್‌ ಹಿಡ್ಕೊಂಡು ಐದು ದಿನ ರಸ್ತೆಯಲ್ಲಿ ನಿಂತ ವ್ಯಕ್ತಿಗೆ ಸಿಕ್ತು ಬಂಪರ್‌ ಆಫರ್‌!

2023 ರ ಟಾಪ್ ಕಂಪನಿಗಳ ಪಟ್ಟಿಯು ಎಲ್ಲಾ ಹಂತಗಳಲ್ಲಿನ ವೃತ್ತಿಪರರಿಗೆ ಉದ್ಯೋಗಾವಕಾಶಗಳನ್ನು ಕಂಡುಹಿಡಿಯಲು ಸಹಾಯ ಮಾಡಲು ಕ್ರಿಯಾಶೀಲ ಒಳನೋಟಗಳು ಮತ್ತು ಸಂಪನ್ಮೂಲಗಳಿಂದ ತುಂಬಿದೆ. ನಿರ್ದಿಷ್ಟ ಕಂಪನಿಯಲ್ಲಿ ಆಸಕ್ತಿ ಹೊಂದಿರುವವರು ಈಗ ಸುಲಭವಾಗಿ ನೇಮಕ ಮಾಡಿಕೊಳ್ಳುವ ಕೌಶಲ್ಯ ಮತ್ತು ಪಾತ್ರಗಳನ್ನು ಗುರುತಿಸಬಹುದು, ಅವರ ನೆಟ್‌ವರ್ಕ್‌ನಲ್ಲಿ ತಿಳಿದಿರುವ ಉದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಭವಿಷ್ಯದ ಅವಕಾಶಗಳ ಬಗ್ಗೆ ಮಾಹಿತಿ ನೀಡಲು ಕಂಪನಿಯನ್ನು ಅನುಸರಿಸಬಹುದು, ”ಎಂದು ಲಿಂಕ್ಡ್‌ಇನ್ ಕೆರಿಯರ್ ಎಕ್ಸ್‌ಪೀರ್ ಮತ್ತು ಇಂಡಿಯಾ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಹೇಳಿದ್ದಾರೆ.

click me!